/newsfirstlive-kannada/media/media_files/2025/12/03/sanchar-saathi-app-free-installation-2025-12-03-17-13-33.jpg)
ಸಂಚಾರ ಸಾಥಿ ಆ್ಯಪ್ ಕಡ್ಡಾಯ ಅಳವಡಿಕೆಯ ನಿಯಮದಿಂದ ಯೂ ಟರ್ನ್
ತೀವ್ರ ವಿರೋಧದ ನಂತರ ಕೇಂದ್ರ ಸರ್ಕಾರ ಬುಧವಾರ ಮೊಬೈಲ್ ತಯಾರಕರಿಗೆ ಸಂಚಾರ್ ಸಾಥಿ ಅಪ್ಲಿಕೇಶನ್‌ನ ಕಡ್ಡಾಯವಾಗಿ ಫ್ರೀ ಇನ್ಸಟಾಲೇಷನ್ ಮಾಡುವಂತೆ ನೀಡಿದ್ದ ಆದೇಶವನ್ನು ಹಿಂತೆಗೆದುಕೊಂಡಿದೆ.
ನಾಗರಿಕರು ಕಳೆದುಹೋದ ಫೋನ್‌ಗಳನ್ನು ಪತ್ತೆಹಚ್ಚಲು ಮತ್ತು ಟೆಲಿಕಾಂ ವಂಚನೆಯನ್ನು ತಡೆಯಲು ಸಹಾಯ ಮಾಡಲು ವಿನ್ಯಾಸಗೊಳಿಸಲಾದ ನಿರ್ಣಾಯಕ ಸೈಬರ್ ಭದ್ರತಾ ಸಾಧನವಾಗಿ ಸಂಚಾರ ಸಾಥಿ ಅಪ್ಲಿಕೇಶನ್ ಫ್ರೀ ಇನ್ಸಟಾಲೇಷನ್ ಮಾಡುವಂತೆ ಕೇಂದ್ರ ಸರ್ಕಾರ ಎಲ್ಲ ಮೊಬೈಲ್ ತಯಾರಕ ಕಂಪನಿಗಳಿಗೆ ಆದೇಶಿಸಿತ್ತು. ಆದರೇ, ಇದರಿಂದ ಜನರ ಖಾಸಗಿತನದ ಹಕ್ಕಿಗೆ ಧಕ್ಕೆಯಾಗುತ್ತೆ ಎಂಬ ಚರ್ಚೆ ಶುರುವಾಯಿತು. ಸರ್ಕಾರ ಜನರ ಎಲ್ಲ ಚಟುವಟಿಕೆಗಳನ್ನು ಮಾನಿಟರ್ ಮಾಡಲು ಅವಕಾಶ ಸಿಗುತ್ತೆ ಎಂಬ ಚರ್ಚೆ ಶುರುವಾಯಿತು.
ವಿರೋಧ ಪಕ್ಷಗಳು ಸಂಭಾವ್ಯ ಕಣ್ಗಾವಲು, ಡೇಟಾ ಗೌಪ್ಯತೆ ಉಲ್ಲಂಘನೆ ಮತ್ತು ಅಂತಹ ಆದೇಶದ ಸಾಂವಿಧಾನಿಕ ಸಿಂಧುತ್ವದ ಬಗ್ಗೆ ಕಳವಳಗಳನ್ನು ಹುಟ್ಟುಹಾಕಿದವು.
ಇದರಿಂದಾಗಿ ಕೇಂದ್ರ ಸರ್ಕಾರ ಈಗ ಸಂಚಾರ ಸಾಥಿ ಆಪ್ಲಿಕೇಷನ್ ಕಡ್ಡಾಯ ಮಾಡಿದ್ದರಿಂದ ಹಿಂದೆ ಸರಿದಿದೆ.
ಬುಧವಾರ ಲೋಕಸಭೆಯಲ್ಲಿ ನಡೆದ ಚರ್ಚೆಯ ಸಂದರ್ಭದಲ್ಲಿ, ಈಶಾನ್ಯ ಪ್ರದೇಶದ ಸಂವಹನ ಮತ್ತು ಅಭಿವೃದ್ಧಿ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು, ಸಾರ್ವಜನಿಕ ಸಲಹೆಗಳು ಮತ್ತು ಪ್ರತಿಕ್ರಿಯೆಗಳ ಆಧಾರದ ಮೇಲೆ ವೇದಿಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸರ್ಕಾರ ಸಿದ್ಧವಾಗಿದೆ ಎಂದು ಸಂಸತ್ತಿಗೆ ತಿಳಿಸಿದರು.
"ಸಂಚಾರ್ ಸಾಥಿ ಅಪ್ಲಿಕೇಶನ್ ಮೂಲಕ ಬೇಹುಗಾರಿಕೆ ಸಾಧ್ಯವಿಲ್ಲ, ಎಂದಿಗೂ ಸಾಧ್ಯವಿಲ್ಲ" ಎಂದು ಒತ್ತಿ ಹೇಳಿದ ಕೇಂದ್ರದ ಟೆಲಿಕಾಂ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಬಳಕೆದಾರರ ನೋಂದಣಿ ಇಲ್ಲದೆ ಅಪ್ಲಿಕೇಶನ್ ಕಾರ್ಯನಿರ್ವಹಿಸುವುದಿಲ್ಲ . ಪ್ರತಿಯೊಬ್ಬ ನಾಗರಿಕನು ಅದನ್ನು ಬಳಸಬೇಕೆ ಅಥವಾ ಯಾವಾಗ ಬೇಕಾದರೂ ಅಳಿಸಬೇಕೆ ಎಂದು ಆಯ್ಕೆ ಮಾಡುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾನೆ ಎಂದು ಸಂಸತ್ತಿಗೆ ತಿಳಿಸಿದರು. ಅಪ್ಲಿಕೇಶನ್ ಸ್ವಯಂಚಾಲಿತವಾಗಿ ಸಕ್ರಿಯಗೊಳ್ಳುವುದಿಲ್ಲ. ಬಳಕೆದಾರರು ಸ್ವಯಂಪ್ರೇರಣೆಯಿಂದ ಅದನ್ನು ತೆರೆದರೆ, ನೋಂದಾಯಿಸಿದರೆ ಮತ್ತು ಅದನ್ನು ಬಳಸಲು ಆಯ್ಕೆ ಮಾಡಿದರೆ ಮಾತ್ರ ಅದು ಕಾರ್ಯನಿರ್ವಹಿಸುತ್ತದೆ ಎಂದು ಕೇಂದ್ರದ ಟೆಲಿಕಾಂ ಖಾತೆ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದರು.
"ನಿಮ್ಮ ಫೋನ್‌ನಲ್ಲಿರುವ ಯಾವುದೇ ಇತರ ಅಪ್ಲಿಕೇಶನ್‌ನಂತೆ, ಸಂಚಾರ್ ಸಾಥಿ ಒಂದು ಆಯ್ಕೆಯಾಗಿದೆ. ನಾಗರಿಕರು ಬಯಸಿದರೆ ಅದನ್ನು ಬಳಸಬಹುದು ಅಥವಾ ಯಾವುದೇ ಸಮಯದಲ್ಲಿ ಅದನ್ನು ತೆಗೆದು ಹಾಕಬಹುದು. ಪ್ರಜಾಪ್ರಭುತ್ವದಲ್ಲಿ, ಅಂತಿಮ ಅಧಿಕಾರ ನಾಗರಿಕರ ಬಳಿ ಇರುತ್ತದೆ. ನಾಗರಿಕರ ಸಲಹೆಗಳು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ನಿಯಮಗಳನ್ನು ತಿದ್ದುಪಡಿ ಮಾಡಲು ನಾವು ಯಾವಾಗಲೂ ಸಿದ್ಧರಿದ್ದೇವೆ ಮತ್ತು ದೂರಸಂಪರ್ಕ ಇಲಾಖೆಯು ಜನರ ಪ್ರತಿಕ್ರಿಯೆಯ ಆಧಾರದ ಮೇಲೆ ಅಪ್ಲಿಕೇಶನ್ ಮತ್ತು ಅದರ ನಿಯಮಗಳನ್ನು ಸುಧಾರಿಸಲು ಸಿದ್ಧವಾಗಿದೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದರು.
/filters:format(webp)/newsfirstlive-kannada/media/post_attachments/wp-content/uploads/2025/02/jyotiraditya-scindia-bsnl.jpg)
ಈ ಉಪಕ್ರಮದ ಏಕೈಕ ಗುರಿ ಭಾರತದ ಪ್ರತಿಯೊಬ್ಬ ಮೊಬೈಲ್ ಬಳಕೆದಾರರನ್ನು ರಕ್ಷಿಸುವುದಾಗಿದೆ ಮತ್ತು ಸರ್ಕಾರವು ಸಾರ್ವಜನಿಕ ಸಲಹೆಗಳು ಮತ್ತು ಪ್ರತಿಕ್ರಿಯೆಯ ಆಧಾರದ ಮೇಲೆ ವೇದಿಕೆಯ ನಿಯಮಗಳನ್ನು ತಿದ್ದುಪಡಿ ಮಾಡಲು ಸಿದ್ಧವಾಗಿದೆ ಎಂದು ಜ್ಯೋತಿರಾಧಿತ್ಯ ಸಿಂಧಿಯಾ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us