/newsfirstlive-kannada/media/media_files/2026/01/05/women-centric-budget-2026-01-05-17-59-32.jpg)
ಮಹಿಳೆಯರಿಗೆ ಆರ್ಥಿಕ ಶಕ್ತಿ ನೀಡುವ ಬಜೆಟ್ ಮಂಡನೆ
ಕೇಂದ್ರ ಸರ್ಕಾರ ಫೆಬ್ರವರಿ 1 ರಂದು ಕೇಂದ್ರದ ಸಾಮಾನ್ಯ ಬಜೆಟ್ ಮಂಡಿಸಲಿದೆ. ಈ ಭಾರಿಯ ಬಜೆಟ್ ನಲ್ಲಿ ಮಹಿಳೆಯರಿಗೆ ಭರ್ಜರಿ ಗಿಫ್ಟ್ ನೀಡಲು ಕೇಂದ್ರ ಸರ್ಕಾರ ಸಿದ್ದತೆ ನಡೆಸಿದೆ. ಮಹಿಳೆಯರಿಗೆ ಹೆಚ್ಚಿನ ಹಣಕಾಸಿನ ಶಕ್ತಿ ನೀಡುವ ಯೋಜನೆಗಳನ್ನು ಈ ಭಾರಿಯ ಬಜೆಟ್ ನಲ್ಲಿ ಘೋಷಿಸಲಾಗುತ್ತೆ. ಮಹಿಳಾ ಕೇಂದ್ರೀತ ಯೋಜನೆಗಳು ಕೇಂದ್ರದ ಬಜೆಟ್ ನಲ್ಲಿ ಘೋಷಣೆಯಾಗಲಿವೆ. ಜನಧನ್ ಅಕೌಂಟ್ ಹೊಂದಿರುವ ಮಹಿಳೆಯರಿಗೆ ಬ್ಯಾಂಕ್ ನಿಂದ ಸಾಲ ಸೌಲಭ್ಯ, ಇನ್ಸೂರೆನ್ಸ್ ಯೋಜನೆಗಳನ್ನು ಬಜೆಟ್ ನಲ್ಲಿ ಘೋಷಿಸುವ ಸಾಧ್ಯತೆ ಇದೆ. ಮಹಿಳೆಯರಿಗೆ ಕಸ್ಟಮೈಸ್ಡ್ ಕ್ರೆಡಿಟ್ ಕಾರ್ಡ್, ಸಾಲ ಸೌಲಭ್ಯಗಳು, ಮಹಿಳೆಯರನ್ನು ಕೇಂದ್ರೀಕರಿಸಿದ ಇನ್ಸೂರೆನ್ಸ್ ಯೋಜನೆಗಳನ್ನು ಪ್ರಮುಖವಾಗಿ ಬಜೆಟ್ ನಲ್ಲಿ ಘೋಷಿಸಲಾಗುತ್ತೆ. ಜೊತೆಗೆ ಗ್ರಾಮೀಣಾ ಭಾಗದ ಉದ್ಯಮಗಳನ್ನು ಬೆಂಬಲಿಸುವ ಸಾಲ ಸೌಲಭ್ಯ, ಸ್ವಸಹಾಯ ಸಂಘಗಳಿಗೆ ಸಾಲ ಸೌಲಭ್ಯವನ್ನು ಘೋಷಿಸುವುದನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ.
ಇನ್ನೂ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವುದಕ್ಕೆ ಹಾಗೂ ಇನ್ಸೂರೆನ್ಸ್ ಕ್ಲೇಮ್ ಇತ್ಯರ್ಥಪಡಿಸುವುದಕ್ಕೆ ಬಲವಾದ ರೆಗ್ಯುಲೇಟರಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತೆ.
/filters:format(webp)/newsfirstlive-kannada/media/post_attachments/wp-content/uploads/2025/01/NIRMALA-SEETARAMAN.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us