/newsfirstlive-kannada/media/media_files/2025/08/22/parliament-2025-08-22-11-37-11.jpg)
ನವದೆಹಲಿ: ಬೆಳಗಿನ ಜಾವ ಹೊಸ ಸಂಸತ್ತು ಭವನದಲ್ಲಿ ಭಾರೀ ಭದ್ರತಾ ವೈಫಲ್ಯ ಕಂಡು ಬಂದಿದ್ದು ವ್ಯಕ್ತಿಯೊಬ್ಬರು ಮರದ ಸಹಾಯದಿಂದ ರೈಲು ಭವವನದ ಗೋಡೆ ಹಾರಿ ಹೊಸ ಸಂಸತ್ತು ಭವನದ ಗರುಡ ಗೇಟ್ ತಲುಪಿದ್ದನು. ಈ ವೇಳೆ ಭದ್ರತಾ ಅಧಿಕಾರಿಗಳು ಅಕ್ರಮವಾಗಿ ನುಗ್ಗಿದ್ದ ವ್ಯಕ್ತಿನ ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಇಂದು ಬೆಳಗ್ಗೆ 6:30ರ ಸಮಯಕ್ಕೆ ವ್ಯಕ್ತಿಯು ಮರದ ಸಹಾಯದಿಂದ ಸಂಸತ್ ಭವನದ ಗೋಡೆ ಏರಿದ್ದಾನೆ. ರೈಲು ಭವನದ ಕಟ್ಟಡದಿಂದ ಎಂಟ್ರಿ ಕೊಟ್ಟಿರುವ ವ್ಯಕ್ತಿ ಹೊಸ ಸಂಸತ್ ಭವನದ ಗರುಡ ಗೇಟ್ ಬಳಿಗೆ ಬಂದಿದ್ದಾನೆ. ಇನ್ನು ಒಳಗೆ ಹೋಗಲು ಯತ್ನಿಸಿದ್ದಾನೆ. ಈ ವೇಳೆ ಭದ್ರತಾ ಅಧಿಕಾರಿಗಳು ಆತನನ್ನು ಬಂಧಿಸಿ ಕರೆದುಕೊಂಡು ಹೋಗಿದ್ದಾರೆ. ಸದ್ಯ ಬಂಧಿಸಿರುವ ವ್ಯಕ್ತಿಯನ್ನು ವಿಚಾರಣೆ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಅಡಿಷನಲ್ SP ಕಾರಿಗೆ ಗುದ್ದಿದ ಮಹೇಶ್ ತಿಮರೋಡಿ ಸಹಚರರು.. ಮೂವರು ಅರೆಸ್ಟ್
ನಿನ್ನೆಯೆ ಸಂಸತ್ ಅಧಿವೇಶನ ಮುಕ್ತಾಯವಾಗಿತ್ತು. ಇಂದು ಬೆಳಗ್ಗೆಯೇ ವ್ಯಕ್ತಿಯೂ ಸಂಸತ್ ಒಳ ನುಗ್ಗಲು ಪ್ರಯತ್ನಿಸಿದ್ದಾನೆ. ಕಳೆದ ವರ್ಷವೂ ಇದೇ ರೀತಿ ಭದ್ರತಾ ವೈಫಲ್ಯ ಕಂಡು ಬಂದಿತ್ತು. 20 ವರ್ಷದ ಯುವಕ ಸಂಸತ್ತು ಭವನದ ಗೋಡೆ ಹಾರಿ ಅನೆಕ್ಸ್ ಕಟ್ಟಡದ ಆವರಣಕ್ಕೆ ಅಕ್ರಮವಾಗಿ ನುಗ್ಗಿದ್ದನು. ಬಳಿಕ ಸಿಐಎಸ್ಎಫ್ ಅಧಿಕಾರಿಗಳು ಯುವಕನನ್ನ ಬಂಧಿಸಿ ವಿಚಾರಣೆ ನಡೆಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ