Advertisment

ಹಿರಿಯ ವಕೀಲ ಅಭಿಷೇಕ್ ಮನುಸಿಂಘ್ವಿ 2,860 ಕೋಟಿ ರೂ.ಆಸ್ತಿಯ ಒಡೆಯ!: 5 ವರ್ಷದಲ್ಲಿ 1,516 ಕೋಟಿ ರೂ. ಆದಾಯ!

ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಹೊಂದಿರುವ ಆಸ್ತಿಪಾಸ್ತಿ ವಿವರ ಕೇಳಿದರೇ, ನೀವು ನಿಜಕ್ಕೂ ಬೆಚ್ಚಿಬೀಳುತ್ತೀರಿ. ಸಿಂಘ್ವಿ ಬರೋಬ್ಬರಿ 2,860 ಕೋಟಿ ರೂ. ಆಸ್ತಿ ಘೋಷಿಸಿಕೊಂಡಿದ್ದಾರೆ. 5 ವರ್ಷದಲ್ಲಿ 1,516 ಕೋಟಿ ರೂ. ಆದಾಯ ಗಳಿಸಿದ್ದಾರೆ. ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

author-image
Chandramohan
ಸಿಎಂ, ಡಿಸಿಎಂ ಇಬ್ಬರಿಗೂ ತಾತ್ಕಾಲಿಕ ರಿಲೀಫ್.. ಎರಡೂ ಪ್ರಕರಣದಲ್ಲಿ ಹೈಕೋರ್ಟ್ ಬಿಗ್ ಟ್ವಿಸ್ಟ್; ಆಗಿದ್ದೇನು?

ಅಭಿಷೇಕ್ ಮನುಸಿಂಘ್ವಿ 2,860 ಕೋಟಿ ರೂ. ಆಸ್ತಿ ಒಡೆಯ!

Advertisment
  • ಅಭಿಷೇಕ್ ಮನುಸಿಂಘ್ವಿ 2,860 ಕೋಟಿ ರೂ. ಆಸ್ತಿ ಒಡೆಯ!
  • ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಸಿಂಘ್ವಿ
  • ತೆಲಂಗಾಣದಿಂದ ರಾಜ್ಯಸಭೆಗೆ ಅವಿರೋಧ ಆಯ್ಕೆ
  • ರಾಜ್ಯಸಭಾ ಚುನಾವಣೆಯ ನಾಮಪತ್ರದ ಜೊತೆ ಅಫಿಡವಿಟ್ ಸಲ್ಲಿಕೆ


ಸುಪ್ರೀಂಕೋರ್ಟ್ ನ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ನಾಯಕ ಅಭಿಷೇಕ್ ಮನುಸಿಂಘ್ವಿ ಬರೋಬ್ಬರಿ 2,860 ಕೋಟಿ ರೂಪಾಯಿ ಆಸ್ತಿಪಾಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ. ತೆಲಂಗಾಣ ರಾಜ್ಯದಿಂದ ಅಭಿಷೇಕ ಮನುಸಿಂಘ್ವಿ ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ. 
ಕಳೆದ 5 ವರ್ಷದ ಅವಧಿಯಲ್ಲಿ ಅಭಿಷೇಕ್ ಮನುಸಿಂಘ್ವಿ ಬರೋಬ್ಬರಿ 1,516 ಕೋಟಿ ರೂಪಾಯಿ ಆದಾಯ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ. 
2024-25 ರಲ್ಲಿ 374 ಕೋಟಿ ರೂಪಾಯಿ, 2023- 24 ರಲ್ಲಿ 333 ಕೋಟಿ ರೂಪಾಯಿ, 2022-23 ರಲ್ಲಿ 359 ಕೋಟಿ ರೂಪಾಯಿ, 2021-22 ರಲ್ಲಿ 290 ಕೋಟಿ ರೂಪಾಯಿ,  2020-21 ರಲ್ಲಿ 158 ಕೋಟಿ ರೂಪಾಯಿ ಆಸ್ತಿಪಾಸ್ತಿ ಗಳಿಸಿರುವುದಾಗಿ ಘೋಷಿಸಿಕೊಂಡಿದ್ದಾರೆ.  
ಇನ್ನೂ ರಾಜ್ಯಸಭಾ ಚುನಾವಣಾಧಿಕಾರಿಗೆ ಸಲ್ಲಿಸಿದ ಅಫಿಡವಿಟ್ ಪ್ರಕಾರ, ಅಭಿಷೇಕ ಮನುಸಿಂಘ್ವಿ  ಹೊಂದಿರುವ ಆರ್ಟ್ಸ್ ಮತ್ತು ಪೇಟಿಂಗ್ ಗಳು  25 ಕೋಟಿ ರೂಪಾಯಿ ಮೌಲ್ಯ ಹೊಂದಿವೆ. 
ಅಭಿಷೇಕ್ ಮನುಸಿಂಘ್ವಿ ಆಕ್ಸ್ ಫರ್ಡ್ ಯೂನಿರ್ವಸಿಟಿಯಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಸಿಂಘ್ವಿ ಯಾವುದೇ ಸಾಲವನ್ನು ಘೋಷಿಕೊಂಡಿಲ್ಲ. 
ಮತ್ತೊಬ್ಬ ರಾಜ್ಯಸಭಾ ಚುನಾವಣಾ ಸ್ಪರ್ಧಿ ವೇಮ್ ನರೇಂದ್ರ ರೆಡ್ಡಿ ಸ್ಥಿರ ಮತ್ತು ಚರ ಆಸ್ತಿ ಸೇರಿ 41 ಕೋಟಿ ರೂಪಾಯಿ ಆಸ್ತಿಪಾಸ್ತಿ ಘೋಷಿಸಿಕೊಂಡಿದ್ದಾರೆ. 
ಅಭಿಷೇಕ್ ಮನುಸಿಂಘ್ವಿ ಮತ್ತು ವೇಮ್ ನರೇಂದ್ರ ರೆಡ್ಡಿ ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

 ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Advertisment
Abhishek manu sighvi assets worth 2,860 crore rupees
Advertisment
Advertisment
Advertisment