/newsfirstlive-kannada/media/media_files/2025/10/14/silver-2025-10-14-20-53-24.jpg)
ಬೆಂಗಳೂರು: ಈಗೀಗ ಚಿನ್ನ, ಬೆಳ್ಳಿ ಆಭರಣಗಳನ್ನು ಖರೀದಿ ಮಾಡಲು ಜ್ಯುವೆಲರಿಗಳಿಗೆ ಹೋಗಬೇಕು ಎಂದರೆ ಯೋಚನೆ ಮಾಡಬೇಕಾಗಿದೆ. ಏಕೆಂದರೆ ಚಿನ್ನ, ಬೆಳ್ಳಿ ಎರಡು ದಿನದಿಂದ ದಿನಕ್ಕೆ ಪೈಪೋಟಿಗೆ ಬಿದ್ದಂತೆ ಬೆಲೆಗಳು ಹೆಚ್ಚು ಮಾಡಿಕೊಳ್ಳುತ್ತಿವೆ. ಚಿನ್ನದ ರೇಟ್ ಜಾಸ್ತಿಯಾಗುವುದು ಮೊದಲಿನಿಂದಲೂ ಸಾಮಾನ್ಯವಾಗಿತ್ತು. ಆದರೆ ಈಗ ಬೆಳ್ಳಿಯ ದರದಲ್ಲೂ ಭಾರೀ ಮಟ್ಟದಲ್ಲಿ ಏರಿಕೆ ಆಗುತ್ತಿರುವುದು ಆಭರಣ ಪ್ರಿಯರಿಗೆ ಬಿಗ್ ಶಾಕ್ ಆಗಿದೆ.
ಇಷ್ಟು ದಿನ ಚಿನ್ನದ ಆಭರಣಗಳ ದರ ಏರಿಕೆಯಾಗುತ್ತಿತ್ತು ಅಂದುಕೊಂಡಿದ್ದರು. ಆದರೆ ಈಗ ಬೆಳ್ಳಿಯ ಆಭರಣಗಳಲ್ಲೂ ಸತತ ಬೆಲೆ ಹೆಚ್ಚಳವಗುತ್ತಿದೆ. ಇದರಿಂದ ಗ್ರಾಹಕರು ಜ್ಯುವೆಲರಿಗೆ ಹೋಗಿ ಬೆಲೆ ಕೇಳಿ ವಾಪಸ್ ಬರುವ ಸ್ಥಿತಿ ಏರ್ಪಡುತ್ತಿದೆ. ಬೆಳ್ಳಿ ರೇಟ್ ಜಾಸ್ತಿ ಆಗಿರುವುದು ಗ್ರಾಹಕರನ್ನು ಭಾರೀ ಆಘಾತಕ್ಕೆ ತಳಿದಂತೆ ಆಗಿದೆ. ಮುಂದಿನವರು ಚಿನ್ನ, ಬೆಳ್ಳಿ ಆಭರಣ ಧರಿಸುವುದು ಕನಸಿನ ಮಾತು ಎಂದು ಹೇಳಲಾಗುತ್ತಿದೆ.
ಸದ್ಯ ಇಂದು ಬೆಳ್ಳಿಯ ಬೆಲೆಯಲ್ಲಿ ದರ ಎಷ್ಟು ಹೆಚ್ಚಳ ಆಗಿದೆ ಎಂದರೆ.. ??
ಗ್ರಾಂ | ಇಂದಿನ ದರ | ನಿನ್ನೆಯ ಬೆಲೆ | ಎಷ್ಟು ರೂ ಜಾಸ್ತಿ ಆಗಿದೆ |
1 | 193.60 | 185 | 8.60 |
8 | 1,548.80 | 1,480 | 68.80 |
10 | 1,936 | 1,850 | 86 |
100 | 19,360 | 18,500 | 860 |
1000 | 1,93,600 | 1,85,000 | 8,600 |
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ