Advertisment

ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 1 ಸಾವಿರ ಕಮ್ಮಿ 2 ಲಕ್ಷ ರೂಪಾಯಿ!! ಚಿನ್ನದ ಬೆಲೆಯೂ 10 ಗ್ರಾಂಗೆ 1.30 ಲಕ್ಷ ರೂಪಾಯಿಗೆ ಏರಿಕೆ

ದೇಶದಲ್ಲಿ ಇಂದು ಬೆಳ್ಳಿ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಪ್ರತಿ ಕೆ.ಜಿ. ಬೆಳ್ಳಿ ಬೆಲೆಯೂ 1,99,000 ರೂಪಾಯಿಗೆ ಏರಿಕೆಯಾಗಿದೆ. ಇಂದು ಒಂದೇ ದಿನ ಬೆಳ್ಳಿ ಬೆಲೆಯಲ್ಲಿ 9 ಸಾವಿರ ರೂಪಾಯಿ ಏರಿಕೆಯಾಗಿದೆ. ಏಕೆ ಹೀಗಾಯ್ತು?

author-image
Chandramohan
GOLD AND SILVER RATE

ಬೆಳ್ಳಿ ಬೆಲೆ 1.99 ಲಕ್ಷ ರೂಪಾಯಿಗೆ ಏರಿಕೆ!

Advertisment
  • ಬೆಳ್ಳಿ ಬೆಲೆ 1.99 ಲಕ್ಷ ರೂಪಾಯಿಗೆ ಏರಿಕೆ!
  • ಚಿನ್ನದ ಬೆಲೆ 10 ಗ್ರಾಂಗೆ 1,30,310 ರೂಪಾಯಿಗೆ ಏರಿಕೆ

ನಮ್ಮ ದೇಶದಲ್ಲಿ ಚಿನ್ನದ ಬೆಲೆ ಇಂದು ( ಬುಧವಾರ, ಡಿಸೆಂಬರ್ 10, 2025) ಪ್ರತಿ ಗ್ರಾಂಗೆ 870 ರೂಪಾಯಿ ಏರಿಕೆಯಾಗಿದೆ. ಅಮೆರಿಕಾದ ಫೆಡರಲ್ ರಿಸರ್ವ್ ಸಭೆಯ ಬಡ್ಡಿದರ ತೀರ್ಮಾನ ಸದ್ಯದಲ್ಲೇ ಪ್ರಕಟವಾಗಲಿದೆ. ಹೀಗಾಗಿ ಭಾರತದಲ್ಲಿ ಚಿನ್ನದ ದರ ಏರಿಕೆಯಾಗಿದೆ.  ಮುಂಬೈನಲ್ಲಿ ಇಂದು  24 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 1,30,310 ರೂಪಾಯಿಗೆ ಏರಿಕೆಯಾಗಿತ್ತು.
ಇನ್ನೂ 22 ಕ್ಯಾರೆಟ್ ಚಿನ್ನದ ದರ 10 ಗ್ರಾಂಗೆ 1,19,450 ಗ್ರಾಂಗೆ ಏರಿಕೆಯಾಗಿತ್ತು.  ಈ ರೇಟ್ ಗಳಲ್ಲಿ ಜಿಎಸ್‌ಟಿ ಮತ್ತು ಮೇಕಿಂಗ್ ಚಾರ್ಜ್ ಸೇರಿಲ್ಲ. 
ಇನ್ನೂ ಬೆಳ್ಳಿ ಬೆಲೆಯೂ ಕೂಡ ಪ್ರತಿ ಕೆ.ಜಿ.ಗೆ 9 ಸಾವಿರ ರೂಪಾಯಿ ಏರಿಕೆಯಾಗಿದೆ. ಇಂದು ಸ್ಪಾಟ್ ಮಾರ್ಕೆಟ್ ನಲ್ಲಿ ಬೆಳ್ಳಿ ಬೆಲೆ ಪ್ರತಿ ಕೆ.ಜಿ.ಗೆ 1,99,000 ರೂಪಾಯಿಗೆ ಏರಿಕೆಯಾಗಿದೆ. 
ಇನ್ನೂ ಎಂಸಿಎಕ್ಸ್, ಗೋಲ್ಡ್ ಪ್ಯೂಚರ್ಸ್ ನಲ್ಲಿ 10 ಗ್ರಾಂ ಚಿನ್ನದ ಬೆಲೆ 1,30,249 ರೂಪಾಯಿಗೆ ಏರಿಕೆಯಾಗಿತ್ತು. ಸಿಲ್ವರ್ ಪ್ಯೂಚರಪ್ 1,90,146 ರೂಪಾಯಿಗೆ ಏರಿಕೆಯಾಗಿತ್ತು. 

Advertisment

SILVER PRICE RISE




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

gold rate
Advertisment
Advertisment
Advertisment