ನಾಳೆಯಿಂದ 6 ದೊಡ್ಡ ಬದಲಾವಣೆ.. WhatsApp, ಇನ್‌ಸ್ಟಾ, ಟೆಲಿಗ್ರಾಮ್‌ ಬಳಸೋರು ಕೂಡ ಓದಲೇಬೇಕು..!

ಇವತತು ಡಿಸೆಂಬರ್ ಮುಗಿಯಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತಿದೆ. ಪ್ರತಿ ತಿಂಗಳ ಆರಂಭದೊಂದಿಗೆ, ಗ್ಯಾಸ್ ಸಿಲಿಂಡರ್ ಬೆಲೆಗಳು, ಆಧಾರ್ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಇತ್ಯಾದಿಗಳಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತವೆ. ಜನವರಿ 2026 ರಲ್ಲಿಯೂ ಕೆಲವು ದೊಡ್ಡ ಬದಲಾವಣೆಗಳು ಜಾರಿಗೆ ಬರುತ್ತವೆ.

author-image
Ganesh Kerekuli
Updated On
january 2026
Advertisment

ಇವತತು ಡಿಸೆಂಬರ್ ಮುಗಿಯಲಿದೆ. ನಾಳೆಯಿಂದ ಹೊಸ ವರ್ಷ ಪ್ರಾರಂಭವಾಗುತ್ತಿದೆ. ಪ್ರತಿ ತಿಂಗಳ ಆರಂಭದೊಂದಿಗೆ, ಗ್ಯಾಸ್ ಸಿಲಿಂಡರ್ ಬೆಲೆಗಳು, ಆಧಾರ್ ಕಾರ್ಡ್, ಪಡಿತರ ಚೀಟಿ, ಪ್ಯಾನ್ ಇತ್ಯಾದಿಗಳಲ್ಲಿ ದೊಡ್ಡ ಬದಲಾವಣೆಗಳು ಕಂಡುಬರುತ್ತವೆ. ಜನವರಿ 2026 ರಲ್ಲಿಯೂ ಕೆಲವು ದೊಡ್ಡ ಬದಲಾವಣೆಗಳು ಜಾರಿಗೆ ಬರುತ್ತವೆ. 

ಜನವರಿ 2026 ರಿಂದ ಜಾರಿಗೆ ಬರುವ ಪ್ರಮುಖ ಬದಲಾವಣೆಗಳು:

ಕ್ರೆಡಿಟ್ ಸ್ಕೋರ್ ಅಪ್‌ಡೇಟ್ಸ್‌, ಸಾಲಗಳ ಮೇಲಿನ ಕಡಿಮೆ ಬಡ್ಡಿದರಗಳು ಮತ್ತು ಕಡ್ಡಾಯ ಪ್ಯಾನ್-ಆಧಾರ್ ಲಿಂಕ್ ಜಾರಿಗೆ ಬರುತ್ತಿದೆ. 

ಗ್ಯಾಸ್ ಸಿಲಿಂಡರ್ ಬೆಲೆ

ತೈಲ ಕಂಪನಿಗಳು ಪ್ರತಿ ತಿಂಗಳ ಆರಂಭದಲ್ಲಿ ಬೆಲೆಗಳನ್ನು ಪರಿಷ್ಕರಿಸುತ್ತವೆ. ಪರಿಣಾಮ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಬದಲಾವಣೆಗಳಿರಬಹುದು. ಅದು ಹೆಚ್ಚಾಗಬಹುದು, ಕಡಿಮೆಯಾಗಬಹುದು ಅಥವಾ ಸ್ಥಿರವಾಗಿರಬಹುದು.

ಸಿಲಿಂಡರ್​​ ಬೆಲೆ ಇಳಿಕೆ ಎಲೆಕ್ಷನ್​​ ಗಿಮಿಕ್​​.. ಪ್ರಧಾನಿ ಮೋದಿಯನ್ನೇ ಟಾರ್ಗೆಟ್​ ಮಾಡಿದ ಶೆಟ್ಟರ್

ತ್ವರಿತ ಕ್ರೆಡಿಟ್ ಸ್ಕೋರ್ ನವೀಕರಣ

ಹಿಂದೆ, ಕ್ರೆಡಿಟ್ ಸ್ಕೋರ್ ಪ್ರತಿಫಲಿಸಲು 30 ರಿಂದ 45 ದಿನಗಳು ಬೇಕಾಗುತ್ತಿತ್ತು. ಇದರಿಂದಾಗಿ ಅನೇಕರು ಸಾಲ ಪಡೆಯುಲು ತೊಂದರೆ ಅನುಭವಿಸುತ್ತಿದ್ದರು. ಈಗ ಕ್ರೆಡಿಟ್ ಸ್ಕೋರ್ ನವೀಕರಣ ಅವಧಿಯನ್ನು ಕಡಿಮೆ ಮಾಡಲಾಗುತ್ತಿದೆ. ಜನವರಿ 2026 ರಿಂದ ಕ್ರೆಡಿಟ್ ಸ್ಕೋರ್ ಅನ್ನು 15 ದಿನಗಳಲ್ಲಿ ನವೀಕರಿಸಲಾಗುತ್ತದೆ.

Credit card ಬಳಸುವಾಗ ಹುಷಾರ್​.. ಈ ತಪ್ಪು ಮಾಡಿದ್ರೆ ಮುಂದೆ ಕಷ್ಟಕ್ಕೆ ಬೀಳ್ತೀರಿ..!

ಕಡಿಮೆ ಬಡ್ಡಿದರದ ಸಾಲಗಳು

ಭಾರತೀಯ ರಿಸರ್ವ್ ಬ್ಯಾಂಕ್ (RBI) 2025 ರಲ್ಲಿ ಹಲವಾರು ಬಾರಿ ರೆಪೊ ದರ ಕಡಿಮೆ ಮಾಡಿದೆ. ಇದರಿಂದಾಗಿ ಶೇ. 6.50 ರಷ್ಟಿದ್ದ ರೆಪೊ ದರ ಈಗ ಕೇವಲ ಶೇ. 5.25 ರಷ್ಟಿದೆ. ಭವಿಷ್ಯದಲ್ಲಿ ಕಡಿಮೆ ಬಡ್ಡಿದರದಲ್ಲಿ ಸಾಲಗಳು ಲಭ್ಯವಿರುತ್ತವೆ.

ಇದನ್ನೂ ಓದಿ: ‘ಕರ್ಪೂರ’ ಮನೆಗೆ ರಕ್ಷಾ ಕವಚ.. ಅಬ್ಬಾ ಎಷ್ಟೊಂದು ಲಾಭ ಗೊತ್ತಾ?‌

Money

ಪ್ಯಾನ್-ಆಧಾರ್ ಲಿಂಕ್

ಆಧಾರ್ - ಪ್ಯಾನ್ ಕಾರ್ಡ್ ಭಾರತದಲ್ಲಿ ಎರಡು ಪ್ರಮುಖ ದಾಖಲೆಗಳಾಗಿವೆ. ಜನವರಿಯಿಂದ ಪ್ಯಾನ್-ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಡಿಸೆಂಬರ್ 31, 2025 ರೊಳಗೆ ಪ್ಯಾನ್-ಆಧಾರ್ ಕಾರ್ಡ್ ಲಿಂಕ್ ಮಾಡದಿದ್ದರೆ, ಪ್ಯಾನ್ ಕಾರ್ಡ್ ನಿಷ್ಕ್ರಿಯವಾಗುತ್ತದೆ.

ಅಪ್ಲಿಕೇಶನ್‌ಗಳಿಗೆ ಸಿಮ್ ಕಡ್ಡಾಯ

ವಾಟ್ಸಾಪ್, ಇನ್‌ಸ್ಟಾಗ್ರಾಮ್ ಮತ್ತು ಟೆಲಿಗ್ರಾಮ್ ಅಪ್ಲಿಕೇಶನ್‌ಗಳಿಗೆ ಸಿಮ್ ಕಾರ್ಡ್ ಕಡ್ಡಾಯ ಎಂದು ಸರ್ಕಾರ ಘೋಷಿಸಿದೆ. ಅಪ್ಲಿಕೇಶನ್‌ಗಳ ವೆರಿಫೈ ಪ್ರಕ್ರಿಯೆ ಈ ಹಿಂದೆ ಜಿಮೇಲ್ ಖಾತೆಯ ಮೂಲಕ ಮಾಡಲಾಗುತ್ತಿತ್ತು. ಈಗ ಅಪ್ಲಿಕೇಶನ್ ಪರಿಶೀಲನೆಗೆ ಸಿಮ್ ಕಾರ್ಡ್ ಕಡ್ಡಾಯ. ಸಿಮ್ ಇಲ್ಲದೆ ಅಪ್ಲಿಕೇಶನ್‌ಗಳನ್ನು ತೆರೆಯಲು ಸಾಧ್ಯವಿಲ್ಲ.

whatsapp

ಸರ್ಕಾರಿ ನೌಕರರ ವೇತನಗಳು

8 ನೇ ವೇತನ ಆಯೋಗವು ಜನವರಿ 1, 2026 ರಿಂದ ಪ್ರಾರಂಭವಾಗಲಿದೆ. ತುಟ್ಟಿ ಭತ್ಯೆ (DA) ಹೆಚ್ಚಳದ ಕುರಿತು ಪ್ರಮುಖ ಘೋಷಣೆ ಮಾಡಲಾಗುವುದು ಎಂಬ ವರದಿಯಿದ್ದು, ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ವೇತನದಲ್ಲಿ ಹೆಚ್ಚಳವಾಗಲಿದೆ.

ಇದನ್ನೂ ಓದಿ:Mahindra XUV 400: ಮಹೀಂದ್ರಾ ಕಾರಿನ ಮೇಲೆ ರೂ. 4.45 ಲಕ್ಷ ರಿಯಾಯಿತಿ! ಬಂಪರ್‌ ಆಫರ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

January 2026
Advertisment