/newsfirstlive-kannada/media/media_files/2025/08/19/dog-attack2-2025-08-19-14-50-32.jpg)
ಬೀದಿನಾಯಿ ನಿಯಂತ್ರಣಕ್ಕೆ ಎಬಿಸಿ ನಿಯಮ ಜಾರಿ
ದೇಶದಲ್ಲಿ ಬೀದಿನಾಯಿಗಳ ಹಾವಳಿ ಬಗ್ಗೆ ಕ್ರಮ ಕೈಗೊಳ್ಳದ ರಾಜ್ಯ ಸರ್ಕಾರಗಳಿಗೆ ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ . ಪಶ್ಚಿಮ ಬಂಗಾಳ ಮತ್ತು ತೆಲಂಗಾಣ ರಾಜ್ಯ ಸರ್ಕಾರಗಳನ್ನು ಹೊರತುಪಡಿಸಿ ಉಳಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಖುದ್ದಾಗಿ ಹಾಜರಾಗಲು ಸುಪ್ರೀಂಕೋರ್ಟ್ ಸಮನ್ಸ್ ನೀಡಿದೆ. ರಾಜ್ಯಗಳು ಅನಿಮಲ್ ಬರ್ತ್ ಕಂಟ್ರೋಲ್ ನಿಯಮಗಳನ್ನು ಜಾರಿಗೊಳಿಸಲು ತೆಗೆದುಕೊಂಡ ಕ್ರಮಗಳ ಬಗ್ಗೆ ಸುಪ್ರೀಂಕೋರ್ಟ್ ಗೆ ಅಫಿಡವಿಟ್ ಸಲ್ಲಿಸಬೇಕಾಗಿತ್ತು. ಆದರೇ, ಈ ಅಫಿಡವಿಟ್ ಸಲ್ಲಿಸಲು ರಾಜ್ಯಗಳು ವಿಫಲವಾಗಿವೆ.
ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್ ದಾಖಲಿಸಿಕೊಂಡಿರುವ ಸ್ವಪ್ರೇರಣೆಯ ಕೇಸ್ ಅನ್ನು ಸುಪ್ರೀಂಕೋರ್ಟ್‌ನ ಜಸ್ಟೀಸ್ ವಿಕ್ರಮನಾಥ್, ಜಸ್ಟೀಸ್ ಸಂದೀಪ್ ಮೆಹ್ತಾ, ಜಸ್ಟೀನ್ ಎನ್.ವಿ.ಅಂಜರಿಯಾ ಪೀಠ ಇಂದು ವಿಚಾರಣೆ ನಡೆಸಿತು. ಈ ಹಿಂದಿನ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ನೀಡಿದ್ದ ಆದೇಶದಂತೆ ಅಫಿಡವಿಟ್ ಸಲ್ಲಿಸಲು ವಿಫಲವಾಗಿರುವುದಕ್ಕೆ ಸುಪ್ರೀಂಕೋರ್ಟ್ ತೀವ್ರ ಅತೃಪ್ತಿ ವ್ಯಕ್ತಪಡಿಸಿತು.
ಬೀದಿನಾಯಿಗಳ ದಾಳಿಯಿಂದಾಗಿ ದೇಶವನ್ನು ವಿದೇಶಗಳ ಕಣ್ಣಲ್ಲಿ ಕೆಟ್ಟ ದೃಷ್ಟಿಯಲ್ಲಿ ಬಿಂಬಿಸಲಾಗುತ್ತಿದೆ ಎಂದು ಸುಪ್ರೀಂಕೋರ್ಟ್ ತನ್ನ ಅತೃಪ್ತಿ, ಅಸಮಾಧಾನವನ್ನು ವ್ಯಕ್ತಪಡಿಸಿತು. ದೇಶದಲ್ಲಿ ನಿರಂತರವಾಗಿ ಬೀದಿ ನಾಯಿ ದಾಳಿ ಪ್ರಕರಣ ನಡೆಯುತ್ತಿವೆ. ವಿದೇಶಗಳ ಕಣ್ಣಿನಲ್ಲಿ ದೇಶದ ಇಮೇಜ್ ಅನ್ನು ಕೆಟ್ಟದಾಗಿ ತೋರಿಸಲಾಗುತ್ತಿದೆ. ನಾವು ಕೂಡ ನ್ಯೂಸ್ ವರದಿಗಳನ್ನು ಓದುತ್ತಿದ್ದೇವೆ ಎಂದು ಜಸ್ಟೀಸ್ ವಿಕ್ರಮನಾಥ್ ಹೇಳಿದ್ದರು.
/filters:format(webp)/newsfirstlive-kannada/media/media_files/2025/08/11/supreme_court-2-2025-08-11-13-38-10.jpg)
ಪಶ್ಚಿಮ ಬಂಗಾಳ, ತೆಲಂಗಾಣ ದೆಹಲಿ ಕಾರ್ಪೋರೇಷನ್ ಮಾತ್ರ ಅಫಿಡವಿಟ್ ಸಲ್ಲಿಸಿವೆ. ಉಳಿದ ರಾಜ್ಯಗಳ ಮುಖ್ಯಕಾರ್ಯದರ್ಶಿಗಳು ಮುಂದಿನ ಸೋಮವಾರ ಬೆಳಿಗ್ಗೆ 10.30 ಕ್ಕೆ ( ನವಂಬರ್ 3) ಸುಪ್ರೀಂಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಈ ಆದೇಶವನ್ನು ಪಾಲಿಸದೇ ಇದ್ದರೇ, ದಂಡ ವಿಧಿಸುವುದು ಹಾಗೂ ಪ್ರತಿಕೂಲ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದೆ.
ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು ನವಂಬರ್ 3 ರಂದು ಖುದ್ದಾಗಿ ಹಾಜರಾಗಬೇಕು. ಎಲ್ಲ ರಾಜ್ಯಗಳಿಗೂ ನೋಟೀಸ್ ನೀಡಲಾಗಿತ್ತು. ನಿಮ್ಮ ಅಧಿಕಾರಿಗಳು ನ್ಯೂಸ್ ಪೇಪರ್ ಅಥವಾ ಸೋಷಿಯಲ್ ಮೀಡಿಯಾ ಓದುವುದಿಲ್ಲವೇ? ಎಲ್ಲರೂ ಬೀದಿನಾಯಿಗಳ ಹಾವಳಿ ಕೇಸ್ ಬಗ್ಗೆ ವರದಿ ಮಾಡಿದ್ದಾರೆ. ಒಮ್ಮೆ ಗೊತ್ತಾದ ಮೇಲೆ, ಅಧಿಕಾರಿಗಳು ಅಫಿಡವಿಟ್ ಸಲ್ಲಿಸಬೇಕಾಗಿತ್ತು. ನವಂಬರ್ 3 ರಂದು ಎಲ್ಲ ರಾಜ್ಯಗಳ ಮುಖ್ಯ ಖುದ್ದಾಗಿ ಸುಪ್ರೀಂಕೋರ್ಟ್ ಗೆ ಹಾಜರಾಗಬೇಕು. ಇಲ್ಲದಿದ್ದರೇ, ಅಡಿಟೋರಿಯಂನಲ್ಲಿ ನಾವು ಕೋರ್ಟ್ ನಡೆಸುತ್ತೇವೆ ಎಂದು ಜಸ್ಟೀಸ್ ವಿಕ್ರಮನಾಥ್ ಖಡಕ್ ಆಗಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/27/sc-justice-vikaram-nath-2025-10-27-12-27-07.jpg)
ಸುಪ್ರೀಂಕೋರ್ಟ್‌ನ ಜಸ್ಟೀಸ್ ವಿಕ್ರಮನಾಥ್
ಆಗಸ್ಟ್ 22 ರಂದು ಸುಪ್ರೀಂಕೋರ್ಟ್, ಎಲ್ಲ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಿಗೆ ಎಬಿಸಿ ರೂಲ್ಸ್ ಜಾರಿ ಮಾಡುವ ಬಗ್ಗೆ ಅಫಿಡವಿಟ್ ಸಲ್ಲಿಸಲು ಸೂಚಿಸಿತ್ತು. ಆದರೇ, ಬಹುತೇಕ ರಾಜ್ಯಗಳು ಈ ಬಗ್ಗೆ ಅಫಿಡವಿಟ್ ಸಲ್ಲಿಸಲಿರಲಿಲ್ಲ. ಬಹುತೇಕ ರಾಜ್ಯಗಳ ಪರ ವಕೀಲರು ಕೂಡ ಸುಪ್ರೀಂಕೋರ್ಟ್‌ನ ಜಸ್ಟೀಸ್ ವಿಕ್ರಮನಾಥ್ ಪೀಠದ ಮುಂದೆ ಹಾಜರೂ ಕೂಡ ಆಗಿರಲಿಲ್ಲ. ಹೀಗಾಗಿ ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಇಂದು ಖಡಕ್ ಆಗಿ ವಾರ್ನಿಂಗ್ ನೀಡಿದೆ.
/filters:format(webp)/newsfirstlive-kannada/media/media_files/2025/08/12/dog-attack-2025-08-12-17-32-09.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us