/newsfirstlive-kannada/media/media_files/2025/10/27/digital-areest-scams-2025-10-27-18-46-52.jpg)
ದೇಶದಲ್ಲಿ ಡಿಜಿಟಲ್ ಅರೆಸ್ಟ್ ಹಗರಣಗಳು ಹೆಚ್ಚಾಗುತ್ತಿವೆ. ಈ ಡಿಜಿಟಲ್ ಅರೆಸ್ಟ್ ಹಗರಣವನ್ನು ಮಟ್ಟ ಹಾಕಲು ಎಲ್ಲ ಕೇಸ್ ಗಳ ತನಿಖೆಯನ್ನು ಸಿಬಿಐಗೆ ವಹಿಸಲು ಸುಪ್ರೀಂಕೋರ್ಟ್ ಒಲವು ತೋರಿದೆ. ಆದರೇ, ಈ ಬಗ್ಗೆ ಯಾವುದೇ ಆದೇಶ ನೀಡಿಲ್ಲ. ಡಿಜಿಟಲ್ ಅರೆಸ್ಟ್ ಹಗರಣ ತನಿಖೆಯನ್ನ ಮಾನಿಟರ್ ಮಾಡುವುದಾಗಿ ಸುಪ್ರೀಂಕೋರ್ಟ್ ಹೇಳಿದೆ.
ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸೈಬರ್ ಕ್ರೈಮ್ ಗಳಿಗೆ ಸಂಬಂಧಿಸಿದಂತೆ ದಾಖಲಿಸಿರುವ ಎಫ್‌ಐಆರ್ ಗಳ ಮಾಹಿತಿ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಸುಪ್ರೀಂಕೋರ್ಟ್‌ನ ಜಸ್ಟೀಸ್ ಸೂರ್ಯಕಾಂತ್ ಹಾಗೂ ಜಸ್ಟೀಸ್ ಜೋಮಾಲಯಾ ಬಗಚಿ ಅವರ ಪೀಠವು ದೇಶಾದ್ಯಂತ ನಡೆದಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯನ್ನು ಒಂದೇ ತನಿಖಾ ಸಂಸ್ಥೆ ನಡೆಸುವುದು ಅಗತ್ಯ ಎಂದು ಹೇಳಿದೆ. ಈ ಮೂಲಕ ಸಿಬಿಐ ಈ ಎಲ್ಲ ಕೇಸ್ ಗಳ ತನಿಖೆ ನಡೆಸುವುದು ಸೂಕ್ತ ಎಂಬ ಪರೋಕ್ಷ ಅಭಿಪ್ರಾಯ ವ್ಯಕ್ತಪಡಿಸಿದೆ. ಆದರೇ, ಮೊದಲಿಗೆ ರಾಜ್ಯ ಸರ್ಕಾರಗಳ ವಾದವನ್ನು ಆಲಿಸದೇ ಯಾವುದೇ ನಿರ್ದೇಶನ ನೀಡಲ್ಲ ಎಂದು ಕೂಡ ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಡಿಜಿಟಲ್ ಅರೆಸ್ಟ್ ಹಗರಣಗಳ ಬಗ್ಗೆ ರಾಜ್ಯ ಸರ್ಕಾರಗಳ ಅಭಿಪ್ರಾಯ, ವಾದ ಅಲಿಸಿದ ಬಳಿಕ ಸುಪ್ರೀಂಕೋರ್ಟ್ ಅಂತಿಮ ತೀರ್ಮಾನ ಕೈಗೊಳ್ಳಲಿದೆ.
ಸಿಬಿಐ ಈಗಾಗಲೇ ಕೇಂದ್ರ ಗೃಹ ಇಲಾಖೆಯ ಸೈಬಲ್ ಕ್ರೈಮ್ ವಿಭಾಗದ ನೆರವಿನಿಂದ ಕೆಲ ಡಿಜಿಟಲ್ ಅರೆಸ್ಟ್ ಹಗರಣ ಕೇಸ್ ತನಿಖೆ ನಡೆಸುತ್ತಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಸುಪ್ರೀಂಕೋರ್ಟ್ ಗೆ ತಿಳಿಸಿದ್ದರು. ಹಾಗಾದರೇ, ಸಿಬಿಐಗೆ ದೇಶಾದ್ಯಂತ ದಾಖಲಾಗಿರುವ ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆ ನಡೆಸುವ ಸಾಮರ್ಥ್ಯ ಹಾಗೂ ಸಂಪನ್ಮೂಲ ಇದೆಯೇ ಎಂಬ ಬಗ್ಗೆ ಮಾಹಿತಿ ಪಡೆದು ತಿಳಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
/filters:format(webp)/newsfirstlive-kannada/media/media_files/2025/08/11/supreme_court-2-2025-08-11-13-38-10.jpg)
ಈ ಹಿಂದೆ ದೊಡ್ಡ ಹಣಕಾಸು ಹಗರಣಗಳ ತನಿಖೆಯನ್ನು ಸಿಬಿಐಗೆ ವಹಿಸಿದ್ದಾಗ, ಸಿಬಿಐ ನಲ್ಲಿ ಕೇಸ್ ಗಳು ಹೆಚ್ಚಾಗಿ ಸವಾಲು ಎದುರಾಗಿತ್ತು ಎಂದು ನ್ಯಾಯಮೂರ್ತಿಗಳು ಹೇಳಿದ್ದರು.
ಇನ್ನೂ ಡಿಜಿಟಲ್ ಅರೆಸ್ಟ್ ಹಗರಣಗಳ ಬಗ್ಗೆ ಸುಪ್ರೀಂಕೋರ್ಟ್ ಅಕ್ಟೋಬರ್ 17 ರಂದು ಸ್ವಪ್ರೇರಣೆಯಿಂದ ಕೇಸ್ ದಾಖಲಿಸಿಕೊಂಡಿದೆ. ದೇಶಾದ್ಯಂತ ಡಿಜಿಟಲ್ ಅರೆಸ್ಟ್ ಹಗರಣಗಳ ತನಿಖೆಯು ಒಂದೇ ರೀತಿಯಾಗಿ ನಡೆಯಬೇಕು ಅನ್ನೋದು ಸುಪ್ರೀಂಕೋರ್ಟ್ ಉದ್ದೇಶ, ಗುರಿ. ಇನ್ನೂ ಸುಪ್ರೀಂಕೋರ್ಟ್ ಎಲ್ಲ ರಾಜ್ಯಗಳಿಗೂ ನೋಟೀಸ್ ನೀಡಿದ್ದು, ಇದುವರೆಗೂ ಡಿಜಿಟಲ್ ಅರೆಸ್ಟ್ ಹಗರಣಗಳ ಬಗ್ಗೆ ದಾಖಲಾಗಿರುವ ಎಫ್‌ಐಆರ್ ಗಳ ಮಾಹಿತಿ ನೀಡುವಂತೆ ಸೂಚಿಸಿದೆ.
ಇನ್ನೂ ದೇಶದಲ್ಲಿ 2022 ರಿಂದ 2024 ರ ಅವಧಿಯಲ್ಲಿ ಡಿಜಿಟಲ್ ಅರೆಸ್ಟ್ ಹಾಗೂ ಅದಕ್ಕೆ ಸಂಬಂಧಿಸಿದ ಸೈಬರ್ ಕ್ರೈಮ್ ಗಳ ಮೂರು ಪಟ್ಟು ಹೆಚ್ಚಳವಾಗಿವೆ ಮತ್ತು ವಂಚನೆಯಾದ ಮೊತ್ತವೂ 21 ಪಟ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರ್ಕಾರವೇ ಪಾರ್ಲಿಮೆಂಟ್ ಗೆ ಉತ್ತರ ನೀಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us