/newsfirstlive-kannada/media/media_files/2025/11/03/supreme-court-on-stray-dogs-2025-11-03-14-45-58.jpg)
ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್ ಮಹತ್ವದ ಆದೇಶ
ದೇಶದಲ್ಲಿ ಬೀದಿನಾಯಿಗಳ ಹಾವಳಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಇಂದು ಮಹತ್ವದ ಆದೇಶ ನೀಡಿದೆ. ದೇಶದಲ್ಲಿ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು, ಬಸ್ ನಿಲ್ದಾಣ, ಸ್ಪೋರ್ಟ್ಸ್ ಕಾಂಪ್ಲೆಕ್ಸ್, ರೈಲ್ವೇ ನಿಲ್ದಾಣಗಳ ಬಳಿ ಇರುವ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗಳಿಗೆ ಹಾಕಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಮುಂದಿನ 8 ವಾರಗಳ ಒಳಗೆ ಬೀದಿನಾಯಿಗಳನ್ನು ಹಿಡಿದು ಡಾಗ್ ಶೆಲ್ಟರ್ ಗೆ ಹಾಕಬೇಕೆಂದು ಆದೇಶಿಸಿದೆ.
ಸುಪ್ರೀಂಕೋರ್ಟ್ ನ ಜಸ್ಟೀಸ್ ವಿಕ್ರಮನಾಥ್ , ಜಸ್ಟೀಸ್ ಸಂದೀಪ್ ಮೆಹ್ತಾ, ಜಸ್ಟೀಸ್ ಎನ್.ವಿ.ಅಂಜಾರಿಯಾ ಅವರ ಪೀಠವು ಬೀದಿ ನಾಯಿಗಳ ಹಾವಳಿ ಬಗ್ಗೆ ಸುಮೋಟೋ ಪ್ರಕರಣದ ವಿಚಾರಣೆ ನಡೆಸಿ ಈ ಆದೇಶ ನೀಡಿದೆ. ಬೀದಿನಾಯಿಗಳನ್ನು ಹಿಡಿದ ಸ್ಥಳಕ್ಕೆ ಮತ್ತೆ ಬಿಡುಗಡೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಶಿಕ್ಷಣ ಸಂಸ್ಥೆ, ಆಸ್ಪತ್ರೆ ಬಳಿ ಹಿಡಿದ ಬೀದಿನಾಯಿಗಳನ್ನು ಡಾಗ್ ಶೆಲ್ಟರ್ ಗೆ ಹಾಕಿ ಅನಿಮಲ್ ಬರ್ತ್ ಕಂಟ್ರೋಲ್ ನಿಯಮಗಳಿಗೆ ಅನುಗುಣವಾಗಿ ಲಸಿಕೆ ಹಾಕಿ, ಸ್ಟರಿಲೈಜೇಷನ್ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಬೀದಿನಾಯಿಗಳಿಗೆ ಆಹಾರ ಹಾಕದಂತೆ ಸ್ಥಳೀಯ ಮುನ್ಸಿಪಾಲಿಟಿ ಅಧಿಕಾರಿಗಳು ನೋಡಿಕೊಳ್ಳಬೇಕೆಂದು ಸುಪ್ರೀಂಕೋರ್ಟ್ ಆದೇಶಿಸಿದೆ.
ಸುಪ್ರೀಂಕೋರ್ಟ್ ನ ಅಮಿಕಸ್ ಕ್ಯೂರಿ ಸಲ್ಲಿಸಿದ ವರದಿಯನ್ನು ಸುಪ್ರೀಂಕೋರ್ಟ್ ದಾಖಲೆಗೆ ಪರಿಗಣಿಸಿದೆ. ಅಮಿಕಸ್ ಕ್ಯೂರಿ ವರದಿಯು ಸುಪ್ರೀಂಕೋರ್ಟ್ ಆದೇಶದ ಭಾಗವಾಗಿದೆ.
ಇನ್ನೂ ರಾಜಸ್ಥಾನ ಹೈಕೋರ್ಟ್, ರಾಜಸ್ಥಾನ ರಾಜ್ಯ ಸರ್ಕಾರ, ಮುನ್ಸಿಪಲ್ ಅಧಿಕಾರಿಗಳಿಗೆ ಹೆದ್ದಾರಿ, ಎಕ್ಸ್ ಪ್ರೆಸ್ ವೇಗಳಿಂದ ಬೀಡಾಡಿ ದನಗಳನ್ನು ಹಿಡಿದು ಶೆಲ್ಟರ್ ಹೋಮ್ ಗೆ ಹಾಕುವ ಆದೇಶವನ್ನು ಸುಪ್ರೀಂಕೋರ್ಟ್ ಕೂಡ ಎತ್ತಿ ಹಿಡಿದಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us