/newsfirstlive-kannada/media/media_files/2025/12/11/jyothi-sravan-sai-2025-12-11-12-33-36.jpg)
ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯಲ್ಲಿ ಅಮಾನುಷ ಕೃತ್ಯ ನಡೆದಿದೆ. ದ್ವಿತಿಯ ವರ್ಷದ ಇಂಜಿನಿಯರ್ ಜ್ಯೋತಿ ಶ್ರವಣ್ ಸಾಯಿ, ಮೈಸಮ್ಮಗುಡದಲ್ಲಿರುವ ​ಸೆಂಟ್ ಪೀಟರ್​ ಕಂಪ್ಯುಟರ್​ ಸೈನ್ಸ್ ಅಂಡ್ ಇಂಜಿನಿಯರಿಂಗ್ ಮಾಡುತ್ತಿದ್ದ. ​ಕುತ್ಬುಲ್ಲಾಪುರದಲ್ಲಿ ಬಾಡಿಗೆ ಮನೆ ಪಡೆದು ಓದುತ್ತಿದ್ದ.
ಈ ಶ್ರವಣ್​ಗೆ ಬೀರಮ್​ಗುಡಾದ ನಿವಾಸಿ 19 ವರ್ಷದ ಶ್ರೀಜಾ ಎಂಬಕೆಯ ಮೇಲೆ ಲವ್ ಆಗಿತ್ತು. ಇವರಿಬ್ಬರು ಪರಸ್ಪರ ಒಪ್ಪಿಗೆಯ ಮೇರೆಗೆ ಪ್ರೀತಿಸುತ್ತಿದ್ದರು. ಆದರೆ ಇವರಿಬ್ಬರ ಪ್ರೀತಿಗೆ ಶ್ರೀಜಾ ಕುಟುಂಬ ವಿರೋಧ ವ್ಯಕ್ತಪಡಿಸಿತ್ತು. ಅಲ್ಲದೇ ಅನೇಕ ಬಾರಿ, ಶ್ರವಣ್​ಗೆ ಎಚ್ಚರಿಕೆ ಕೂಡ ನೀಡಿತ್ತು.
ಇದನ್ನೂ ಓದಿ:ನಾಯಕತ್ವ ಬದಲಾವಣೆ ಇಲ್ಲ, ಹೈಕಮಾಂಡ್ ಕ್ಲೀಯರ್ ಆಗಿ ಹೇಳಿದೆ -ಯತೀಂದ್ರ ಮತ್ತೆ ಹೇಳಿಕೆ
ಆದರೆ ಪ್ರೇಮಿಗಳು ತಮ್ಮ ಪ್ರೀತಿಯ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಮಾಡಿರಲಿಲ್ಲ. ಒಂದು ದಿನ ಶ್ರೀಜಾ ಕುಟುಂಬಸ್ಥರು ಮದುವೆ ವಿಚಾರ ಮಾತನ್ನಾಡೋದು ಇದೆ. ಮನೆಗೆ ಬಾ ಎಂದು ಕರೆಸಿಕೊಂಡಿದ್ದಾರೆ. ಮನೆಗೆ ಬರುತ್ತಿದ್ದಂತೆಯೇ ಶ್ರೀಜಾಳ ತಾಯಿ ಆತನ ಮೇಲೆ ಅಟ್ಯಾಕ್ ಮಾಡಿದ್ದಾಳೆ. ಕ್ರಿಕೆಟ್ ಬ್ಯಾಟ್​ನಿಂದ ಮನಸೋ ಇಚ್ಛೆ ಹಲ್ಲೆ ಮಾಡಿದ್ದಾಳೆ. ಇದರಿಂದ ಆತನ ತಲೆಗೆ ಗಂಭೀರ ಪೆಟ್ಟು ಬೀಳುತ್ತದೆ. ಕಾಲು, ಕೈ ಸೇರಿದಂತೆ ಅನೇಕ ಕಡೆ ಗಾಯಗಳಾಗುತ್ತದೆ.
ನಂತರ ಆತನನ್ನು ಕುಕಟಪಳ್ಳಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಆತ ಮೃತಪಟ್ಟಿದ್ದಾನೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಅಮೀನ್​ಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಪರಾಧಕ್ಕೆ ಬಳಸಲಾಗಿರುವ ಕ್ರಿಕೆಟ್ ಬ್ಯಾಟ್​ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us