Advertisment

ಸರ್ಕಾರಿ ಬಸ್​ಗೆ ಜೆಲ್ಲಿ ತುಂಬಿದ ಲಾರಿ ಡಿಕ್ಕಿ.. 3 ತಿಂಗಳ ಮಗು ಸೇರಿ 20 ಪ್ರಯಾಣಿಕರು ಇನ್ನಿಲ್ಲ!

ಬಸ್​ನಲ್ಲಿದ್ದ 70 ಪ್ರಯಾಣಿಕರ ಪೈಕಿ 20 ಜನ ಉಸಿರು ಚೆಲ್ಲಿದ್ದಾರೆ. ಇದರಲ್ಲಿ ಮೂರು ತಿಂಗಳ ಹಸುಗೂಸು ಕೂಡ ಸೇರಿದೆ. ಮೃತರಲ್ಲಿ ಲಾರಿ ಡ್ರೈವರ್​ ಕೂಡ ಸೇರಿ 10 ಜನ ಪುರುಷರು, 9 ಜನ ಮಹಿಳೆಯರು, ಒಂದು ಮಗು ಇದೆ.

author-image
Bhimappa
TN_BUS
Advertisment

ಹೈದರಾಬಾದ್; ಬೈಕ್​ ಅನ್ನು ಓವರ್​ಟೇಕ್ ಮಾಡುವಾಗ ಲಾರಿಯೊಂದು ಸರ್ಕಾರಿ ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ 3 ತಿಂಗಳ ಮಗು ಸೇರಿ 20 ಪ್ರಯಾಣಿಕರು ಉಸಿರು ಚೆಲ್ಲಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ತೆಲಂಗಾಣದ ರಂಗರೆಡ್ಡಿ ಜಿಲ್ಲೆಯ ಚೆವೆಲ್ಲ ನಗರದ ಮಿರಿಜಾಗುಡಾ ಪ್ರದೇಶದ ಸಮೀಪದಲ್ಲಿ ಈ ಭಯಾನಕ ಅಪಘಾತ ಸಂಭವಿಸಿದೆ. 

Advertisment

ಸರ್ಕಾರಿ ಬಸ್​ ಹೈದರಾಬಾದ್​ಗೆ ತೆರಳುತ್ತಿತ್ತು. ಮಿರಿಜಾಗುಡಾ ಪ್ರದೇಶದ ಸಮೀಪದಲ್ಲಿ ಇದೇ ಸಮಯದಲ್ಲಿ ವಿರುದ್ಧ ದಿಕ್ಕಿನಲ್ಲಿ ಜೆಲ್ಲಿ ತುಂಬಿದ ಲಾರಿಯೊಂದು ಅತಿ ವೇಗದಲ್ಲೇ ಬೈಕ್​ ಅನ್ನು ಓವರ್​ಟೇಕ್ ಮಾಡುತ್ತಿತ್ತು. ಈ ವೇಳೆ ಲಾರಿ ಚಾಲಕ ವಿರುದ್ಧ ದಿಕ್ಕಿನಲ್ಲಿ ಬರುತ್ತಿದ್ದ ಬಸ್​ ಅನ್ನು ಗಮನಿಸಿಲ್ಲ. ಇದರಿಂದ ವೇಗದಲ್ಲಿದ್ದ ಜೆಲ್ಲಿ ತುಂಬಿದ್ದ ಲಾರಿ, ಬಸ್​ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ.  

ಇದನ್ನೂ ಓದಿ: ನಿಂತಿದ್ದ ಟ್ರಕ್​ಗೆ ಭೀಕರವಾಗಿ ಮಿನಿ ಬಸ್ ಡಿಕ್ಕಿ.. ಸ್ಥಳದಲ್ಲೇ ಪ್ರಾಣ ಬಿಟ್ಟ 15 ಯಾತ್ರಿಗಳು​

TN_BUS_1

ಇದರ ಪರಿಣಾಮ ಬಸ್​ನಲ್ಲಿದ್ದ 70 ಪ್ರಯಾಣಿಕರ ಪೈಕಿ 20 ಜನ ಉಸಿರು ಚೆಲ್ಲಿದ್ದಾರೆ. ಇದರಲ್ಲಿ ಮೂರು ತಿಂಗಳ ಹಸುಗೂಸು ಕೂಡ ಸೇರಿದೆ. ಮೃತರಲ್ಲಿ ಲಾರಿ ಡ್ರೈವರ್​ ಕೂಡ ಸೇರಿ 10 ಜನ ಪುರುಷರು, 9 ಜನ ಮಹಿಳೆಯರು, ಒಂದು ಮಗು ಕೂಡ ಸೇರಿದೆ. ಅಪಘಾತ ಸಂಭವಿಸಿದಾಗ ಸ್ಥಳದಲ್ಲಿ ಸಾವಿನ ಆರ್ತನಾದ ಸುತ್ತಲಿನ ಪ್ರದೇಶವನ್ನೆಲ್ಲಾ ವ್ಯಾಪಿಸಿತ್ತು ಎಂದು ಹೇಳಲಾಗಿದೆ. 

Advertisment

70 ಪ್ರಯಾಣಿಕರು ಇರುವ ಸರ್ಕಾರಿ ಬಸ್ ತಾಂಡೂರುನಿಂದ ಹೈದರಾಬಾದ್​ಗೆ ತೆರಳುತ್ತಿತ್ತು. ಉದ್ಯೋಗಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ನಿನ್ನೆ ಭಾನುವಾರ ಆಗಿದ್ದರಿಂದ ಮನೆಗೆ ಬಂದ ವಿದ್ಯಾರ್ಥಿಗಳು ಇಂದು ಶಾಲೆ, ಕಾಲೇಜುಗಳಿಗೆ ಹೊರಟಿದ್ದರು. ಹೈದರಾಬಾದ್​ಗೆ ಕೆಲಸ ಮಾಡಲು ಹೋಗುತ್ತಿದ್ದ ಉದ್ಯೋಗಸ್ಥರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಹಲವಾರು ಜನರು ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಹೈದರಾಬಾದ್​ನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bus Telangana
Advertisment
Advertisment
Advertisment