Advertisment

ಸೈಬರ್ ಚೋರರ ಹಾಟ್ ಫೇವರೆಟ್ ಆದ ಕೇಂದ್ರ ಸಚಿವೆ.. ಸೀತಾರಾಮನ್ ಹೆಸರಲ್ಲಿ ಹೊಸ ದಂಧೆ..!

ಸೈಬರ್ ಕಳ್ಳರು ಜನರನ್ನು ಯಾಮಾರಿಸಲು ದಿನಕ್ಕೊಂದು ಹೊಸ ದಾರಿ ಹುಡುಕುತ್ತಿದ್ದಾರೆ. ಇದೀಗ ವಂಚಕರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನೇ ತಮ್ಮ ವಂಚನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ.

author-image
Ganesh Kerekuli
cyber crime
Advertisment

ಬೆಂಗಳೂರು: ಸೈಬರ್ ಕಳ್ಳರು (Cyber Criminals) ಜನರನ್ನು ಯಾಮಾರಿಸಲು ದಿನಕ್ಕೊಂದು ಹೊಸ ದಾರಿ ಹುಡುಕುತ್ತಿದ್ದಾರೆ. ಇದೀಗ ವಂಚಕರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರನ್ನೇ ತಮ್ಮ ವಂಚನೆಯ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಸಚಿವೆ ನಿರ್ಮಲಾ ಸೀತಾರಾಮನ್ ಅವರ ಎಐ (AI - Artificial Intelligence) ನಕಲಿ ವಿಡಿಯೋಗಳನ್ನು ಸೃಷ್ಟಿಸಿ, ಕೋಟಿ ಕೋಟಿ ಲೂಟಿ ಮಾಡಲು ಸ್ಕೆಚ್ ಹಾಕಿದ್ದಾರೆ.

Advertisment

ನಗರದಲ್ಲಿ ಕೇವಲ ಒಂದೇ ತಿಂಗಳಲ್ಲಿ ಈ ರೀತಿಯ ಬರೋಬ್ಬರಿ 50ಕ್ಕೂ ಹೆಚ್ಚು ಎಫ್‌ಐಆರ್ (FIR) ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಏನಿದು ಎಐ ವಿಡಿಯೋ ವಂಚನೆ?

ವಂಚಕರು ಎಐ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಲಾ ಸೀತಾರಾಮನ್ ಅವರು ಮಾತನಾಡುವಂತೆಯೇ ಇರುವ ನಕಲಿ ವಿಡಿಯೋಗಳನ್ನು ಸೃಷ್ಟಿಸಿದ್ದಾರೆ. ಈ ವಿಡಿಯೋದಲ್ಲಿ, "ಕೇಂದ್ರ ಸರ್ಕಾರ ಬಡವರಿಗಾಗಿ ವಿಶೇಷ ಯೋಜನೆಯನ್ನು ರೂಪಿಸಿದೆ. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ದೊಡ್ಡ ಲಾಭ ಸಿಗುತ್ತದೆ ಎಂದು ಸಚಿವೆ ಹೇಳುವಂತೆ ನಕಲಿ ಮಾಡಲಾಗಿದೆ.

21 ಸಾವಿರ ಹೂಡಿಕೆ, 20 ಲಕ್ಷ ಲಾಭದ ಆಸೆ!

ಸಾಮಾಜಿಕ ಜಾಲತಾಣಗಳಲ್ಲಿ, ವಿಶೇಷವಾಗಿ ಫೇಸ್‌ಬುಕ್‌ನಲ್ಲಿ (Facebook) ಈ ವಿಡಿಯೋಗಳನ್ನು ಹರಿಬಿಡಲಾಗುತ್ತಿದೆ. ನೀವು ಕೇವಲ 21,000 ರೂಪಾಯಿ ಹೂಡಿಕೆ ಮಾಡಿದರೆ, ಒಂದೇ ತಿಂಗಳಲ್ಲಿ (30 ದಿನಗಳಲ್ಲಿ) ನಿಮಗೆ 20 ಲಕ್ಷ ರೂಪಾಯಿ ಲಾಭ ಬರುತ್ತದೆ. ಹಣ ನೇರವಾಗಿ ನಿಮ್ಮ ಖಾತೆಗೆ ಬೀಳುತ್ತದೆ ಎಂದು ನಂಬಿಸಲಾಗುತ್ತಿದೆ. ವಿಡಿಯೋದ ಕಮೆಂಟ್ ಬಾಕ್ಸ್‌ನಲ್ಲಿ ವಂಚಕರು ಲಿಂಕ್ ಒಂದನ್ನು ಹಾಕಿರುತ್ತಾರೆ. ಆಸಕ್ತರು ಅಲ್ಲಿ ಕ್ಲಿಕ್ ಮಾಡಿ ರಿಜಿಸ್ಟರ್ ಮಾಡಿಕೊಳ್ಳುವಂತೆ ಸೂಚಿಸುತ್ತಾರೆ.

Advertisment

ಹಣ ಮಾತ್ರವಲ್ಲ, ಖಾತೆಯೇ ಖಾಲಿ!

ಸಚಿವರೇ ಹೇಳಿದ್ದಾರೆ ಎಂದು ನಂಬಿ ಅಮಾಯಕರು ಲಿಂಕ್ ಕ್ಲಿಕ್ ಮಾಡಿ, ತಮ್ಮ ಬ್ಯಾಂಕ್ ವಿವರಗಳು ಹಾಗೂ ಇತರೆ ದಾಖಲೆಗಳನ್ನು ಸಲ್ಲಿಸಿ 21,000 ರೂ. ಪಾವತಿಸುತ್ತಾರೆ. ವಂಚಕರು ಕೇವಲ 21 ಸಾವಿರವನ್ನಷ್ಟೇ ಕದಿಯುವುದಿಲ್ಲ. ಜನರು ನೀಡಿದ ಬ್ಯಾಂಕ್ ಮಾಹಿತಿಯನ್ನು ಬಳಸಿಕೊಂಡು, ಅವರ ಖಾತೆಯಲ್ಲಿದ್ದ ಸಂಪೂರ್ಣ ಹಣವನ್ನೂ ಗುಳುಂ ಮಾಡುತ್ತಿದ್ದಾರೆ.

ಇದನ್ನೂ ಓದಿ:ಆಲ್​​​ ದಿ ಬೆಸ್ಟ್​ ಮಕ್ಕಳೇ.. ಇವತ್ತಿನಿಂದ ದ್ವಿತಿಯ ಪಿಯುಸಿ ಪರೀಕ್ಷೆ..!

ಈ ಬಗ್ಗೆ ಸೈಬರ್ ಕ್ರೈಮ್ ಪೊಲೀಸರು ಎಚ್ಚೆತ್ತುಕೊಂಡಿದ್ದು, ಸುಮೋಟೋ (Suo Moto) ದೂರುಗಳನ್ನು ದಾಖಲಿಸಿಕೊಳ್ಳುತ್ತಿದ್ದಾರೆ. ಫೇಸ್‌ಬುಕ್‌ನಲ್ಲಿ ಇಂತಹ ನಕಲಿ ವಿಡಿಯೋಗಳನ್ನು ಹುಡುಕಿ ಡಿಲೀಟ್ ಮಾಡಿಸುವ ಕೆಲಸವನ್ನೂ ಪೊಲೀಸರು ಮಾಡುತ್ತಿದ್ದಾರೆ.
ಸಾರ್ವಜನಿಕರಿಗೆ ಎಚ್ಚರಿಕೆ

Advertisment

ಕೇಂದ್ರ ಸಚಿವರಾಗಲಿ ಅಥವಾ ಯಾವುದೇ ಸರ್ಕಾರದ ಪ್ರತಿನಿಧಿಯಾಗಲಿ ಸಾಮಾಜಿಕ ಜಾಲತಾಣದಲ್ಲಿ ಬಂದು ಇಂತಹ ಹೂಡಿಕೆ ಯೋಜನೆಗಳ ಬಗ್ಗೆ ಪ್ರಚಾರ ಮಾಡುವುದಿಲ್ಲ. ಕಡಿಮೆ ಅವಧಿಯಲ್ಲಿ ಹೆಚ್ಚು ಹಣ ಗಳಿಸುವ ಆಮಿಷವೊಡ್ಡುವ ಇಂತಹ ಎಐ ವಿಡಿಯೋಗಳನ್ನು ನಂಬಬೇಡಿ. ಯಾವುದೇ ಕಾರಣಕ್ಕೂ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ ಎಂದು ಪೊಲೀಸ್ ಇಲಾಖೆ ಮನವಿ ಮಾಡಿದೆ.

ಇದನ್ನೂ ಓದಿ:PPF ಖಾತೆದಾರರೇ ಗಮನಿಸಿ.. ಒಂದಕ್ಕಿಂತ ಹೆಚ್ಚು ಖಾತೆ ಇದ್ದರೆ ಏನಾಗುತ್ತದೆ? ಇಲ್ಲಿದೆ ಮಾಹಿತಿ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman cyber crime
Advertisment
Advertisment
Advertisment