/newsfirstlive-kannada/media/media_files/2026/01/13/bharat-designed-manufactured-weapons-1-2026-01-13-14-06-14.jpg)
/newsfirstlive-kannada/media/media_files/2026/01/13/bharat-designed-manufactured-weapons-5-2026-01-13-14-06-30.jpg)
ಈ ವರ್ಷವೇ ಮೊದಲ ಬ್ಯಾಚ್ ವೆಪನ್ಗಳು
ಭಾರತೀಯ ಖಾಸಗಿ ರಕ್ಷಣಾ ಕಂಪನಿ SSS Defence ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ ಕೃಷ್ಣನ್ ಪ್ರಕಟಿಸಿದಂತೆ.. ತಮ್ಮ ಶಸ್ತ್ರಾಸ್ತ್ರ ತಯಾರಿಕ ಕೇಂದ್ರದಲ್ಲಿ ತಯಾರಿಸಿರುವ (Bharat designed & manufactured weapons) ಶಸ್ತ್ರಾಸ್ತ್ರಗಳ ಮೊದಲ ಬ್ಯಾಚ್, 2026ರಲ್ಲಿ ಸಿಗಲಿದೆ ಎಂದು ತಿಳಿಸಿದ್ದಾರೆ.
/newsfirstlive-kannada/media/media_files/2026/01/13/bharat-designed-manufactured-weapons-4-2026-01-13-14-06-59.jpg)
ಸಣ್ಣ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಎತ್ತಿದ ಕೈ
ಇವೆಲ್ಲ ಆತ್ಮನಿರ್ಭರ ಭಾರತ (Self-Reliant India) ಅಡಿಯಲ್ಲಿ ನಿರ್ಮಾಣಗೊಂಡ ವೆಪನ್ಗಳಾಗಿವೆ. ಇದೀಗ ದೇಶದ ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲಿ ಖಾಸಗಿ ರಕ್ಷಣಾ ಉದ್ಯಮಗಳು ಕೂಡ ಸಾಥ್ ನೀಡುತ್ತಿವೆ ಅನ್ನೋದು ಗಮನಾರ್ಹವಾಗಿದೆ. ಅಂದ್ಹಾಗೆ SSS Defence ಸಣ್ಣ ಶಸ್ತ್ರಾಸ್ತ್ರಗಳ ತಯಾರಿಕೆಗೆ ಹೆಚ್ಚು ಒತ್ತು ನೀಡುತ್ತದೆ. ಮುಂದಿನ ತಲೆಮಾರಿಗೆ ಅಗತ್ಯವಾದ ಇನ್ಫ್ಯಾಂಟ್ರಿ ಅಸ್ತ್ರಗಳು (infantry weapons), ಯುದ್ಧ ಸಾಮಗ್ರಿಗಳು ಮತ್ತು ಆಧುನಿಕ ಉತ್ಪಾದನಾ ತಂತ್ರಜ್ಞಾನಗಳು ಇದರಲ್ಲಿ ಬಳಕೆಯಾಗಿವೆ ಎಂದು ಕಂಪನಿ ಹೇಳಿಕೊಂಡಿದೆ.
/newsfirstlive-kannada/media/media_files/2026/01/13/bharat-designed-manufactured-weapons-3-2026-01-13-14-07-53.jpg)
ಆಂತರಿಕ ಭದ್ರತೆಗೆ ಉಪಯೋಗ
ಮೊದಲ ಬ್ಯಾಚ್ನಲ್ಲಿ ನಿರ್ಮಾಣಗೊಂಡಿರುವ ವೆಪನ್ಗಳನ್ನು ವಿವಿಧ ರಾಜ್ಯ ಪೊಲೀಸ್ ಪಡೆಗಳ (state police forces) ಹಾಗೂ ಇಂಟರ್ನಲ್ ಸೆಕ್ಯೂರಿಟಿ ಯುನಿಟ್ಸ್ಗಳ ಉದ್ದೇಶಕ್ಕಾಗಿ ನಿರ್ಮಾಣ ಮಾಡಲಾಗಿದೆ. ಅಂದರೆ ದೇಶದ ಆತಂಕರಿಕ ಭದ್ರತೆ ಮತ್ತು ಕಾನೂನು ಅನುಷ್ಠಾನದ ಸದ್ಭಳಕೆಗೆ ಇವು ಉಪಯೋಗ ಆಗಲಿವೆ.
/newsfirstlive-kannada/media/media_files/2026/01/13/bharat-designed-manufactured-weapons-2-2026-01-13-14-08-17.jpg)
ಡಮಾಸ್ಕಸ್ ಕತ್ತಿಗಳು
ಇನ್ನು, ಕೃಷ್ಣನ್ ಅವರು ಐತಿಹಾಸಿಕ ಪರ್ಷಿಯನ್ ಪದವಾದ ‘Jawab-e-Hind’ (ಅರ್ಥ: ‘ಭಾರತೀಯ ಉತ್ತರ’) ಅನ್ನು ಸಹ ಉಲ್ಲೇಖಿಸಿದ್ದಾರೆ. ಇದು ಮೂಲತಃ ಭಾರತೀಯ ವೂಟ್ಜ್ ಸ್ಟೀಲ್ನಿಂದ (Wootz steel) ತಯಾರಾದ ಭೀಕರ ಕತ್ತರಿಸುವ ಶಕ್ತಿ (lethal cutting power) ಹೊಂದಿರುವ ತಲವಾರುಗಳನ್ನು ಸೂಚಿಸುತ್ತದೆ. ಪ್ರಾಚೀನ ಭಾರತದಲ್ಲಿ ನಿರ್ಮಾಣ ಮಾಡ್ತಿದ್ದ ವೂಟ್ಜ್ ಸ್ಟೀಲ್ ವಿಶ್ವದ ವಿವಿಧ ಭಾಗಗಳಿಗೆ ರಫ್ತು ಆಗಿವೆ. ಅವು ತುಂಬಾನೇ ಪ್ರಸಿದ್ಧಿಯನ್ನೂ ಹೊಂದಿವೆ. ಅದರ ಆಧಾರದ ಮೇಲೆಯೇ ಲೆಜೆಂಡರಿ ಡಮಾಸ್ಕಸ್ ಕತ್ತಿಗಳು (Damascus blades) ರೂಪುಗೊಂಡಿವೆ. ಅವು ತಮ್ಮ ಬಲ, ಕುಶಲತೆ ಮತ್ತು ಶಾರ್ಪನೆಸ್ ವಿನ್ಯಾಸಕ್ಕಾಗಿ ಪ್ರಸಿದ್ಧಗೊಂಡಿವೆ.
/newsfirstlive-kannada/media/media_files/2026/01/13/bharat-designed-manufactured-weapons-2026-01-13-14-08-39.jpg)
ಕೃಷ್ಣನ್ ಪ್ರಕಾರ, ಭಾರತವು ಯಾವಾಗಲೂ ಯೋಧರ ಮತ್ತು ಪರಿಣತಿ ಶಸ್ತ್ರಶಿಲ್ಪಿಗಳ ನಾಡಾಗಿದೆ. ಇಂದಿನ ತಲೆಮಾರಿಗೆ, ಮುಂದಿನ ತಲೆಮಾರಿಗೆ ತಂತ್ರಜ್ಞಾನಗಳು, ಇಂಜಿನಿಯರಿಂಗ್ ಮತ್ತು ಆಧುನಿಕ ಯುದ್ಧಭೂಮಿಯ ಅಗತ್ಯಗಳ ಮೂಲಕ ಆ ಪರಂಪರೆಯನ್ನು ಮುಂದುವರಿಸುವ ಗೌರವ ದೊರಕಿದೆ ಎಂದಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us