/newsfirstlive-kannada/media/media_files/2026/01/26/telangana-grand-mother-2026-01-26-10-10-43.jpg)
Photograph: (AI)
ತೆಲಂಗಾಣದ ನಾಗರ್ಕರ್ನೂಲ್ ಜಿಲ್ಲೆಯಲ್ಲಿ ಘೋರ ದುರಂತ ನಡೆದಿದೆ. ಅಜ್ಜಿಯ ಆರೋಗ್ಯ ವಿಚಾರಿಸಲು ಊರಿಗೆ ಹೋಗಿದ್ದ ಮೂವರು ಮಕ್ಕಳು ನೀರಿನ ಗುಂಡಿಗೆ ಬಿದ್ದು ಪ್ರಾಣಬಿಟ್ಟಿದ್ದಾರೆ. ಈ ಘಟನೆ ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.
ಉರುಕೊಂಡ ಮಂಡಲದ ಮುಚ್ಚರ್ಲಪಲ್ಲಿ ಗ್ರಾಮದ ನಿವಾಸಿ ಶ್ರೀಕಾಂತ್ ರೆಡ್ಡಿ ಹೈದರಾಬಾದ್‌ನ ತುರ್ಕಯಾಂಜಲ್‌ನಲ್ಲಿ ವಾಸಿಸುತ್ತಿದ್ದಾರೆ. ತಾಯಿ ಅಸ್ವಸ್ಥಳಾಗಿದ್ದರಿಂದ ಶ್ರೀಕಾಂತ್ ರೆಡ್ಡಿ ನಿನ್ನೆ ತಮ್ಮ ಕುಟುಂಬದೊಂದಿಗೆ ಮುಚ್ಚರ್ಲಪಲ್ಲಿಗೆ ಬಂದಿದ್ದರು.
ಭಾನುವಾರ ರಜೆ ದಿನವಾದ್ದರಿಂದ ಅವರು ಮಕ್ಕಳೊಂದಿಗೆ ಮಧ್ಯಾಹ್ನ ಹೊಲಕ್ಕೆ ಹೋಗಿದ್ದರು. ಶ್ರೀಕಾಂತ್ ರೆಡ್ಡಿ ಅವರ ಸಹೋದರಿಯ ಕುಟುಂಬವೂ ಅಲ್ಲಿಗೆ ಬಂದಿತು. ವಯಸ್ಕರು ಹೊಲಗಳನ್ನು ಪರಿಶೀಲಿಸುತ್ತಾ ಮಾತನಾಡುತ್ತಿದ್ದಾಗ ಮಕ್ಕಳು ಹೊಲದಲ್ಲಿ ಆಟವಾಡುತ್ತಿದ್ದರು.
ಆಡುತ್ತಿದ್ದ ವೇಳೆ ಚೆಂಡು, ಕೃಷಿ ಹೊಂಡದಲ್ಲಿ ಬಿದ್ದಿದೆ. ವಿದ್ಯಾದರಣಿ, ಶ್ರೀಮಾನ್ಯ ರೆಡ್ಡಿ, ಶ್ರೀಕೃತಿ (12), ಸ್ನೇಹ (15) ಮತ್ತು ವಿದ್ಯಾಧರಣಿ ರೆಡ್ಡಿ ಎಂಬ ಮೂವರು ಮಕ್ಕಳು ಬಾಲ್ ಮೇಲೆ ತೆಗೆಯಲು ಪ್ರಯತ್ನಿಸಿ, ಹೊಂಡಕ್ಕೆ ಜಾರಿದ್ದಾರೆ. ಮಕ್ಕಳ ಕಿರುಚಾಟ ಕೇಳಿ ಕುಟುಂಬದ ಸದಸ್ಯರು ಅಲ್ಲಿಗೆ ದೌಡಾಯಿಸಿದ್ದರು. ಆದರೆ ಅವರನ್ನು ಉಳಿಸಲು ಆಗಲಿಲ್ಲ.
ಇದನ್ನೂ ಓದಿ: ರಾಜ್ಯಪಾಲರ ಭಾಷಣದಲ್ಲಿ ಏನೇನಿದೆ ಗೊತ್ತಾ? ಸರ್ಕಾರದ ಭಾಷಣ ಯಥಾವತ್ ಓದಿದ ರಾಜ್ಯಪಾಲರು
ಇನ್ನು ವಿದ್ಯಾಧರಣಿ ರೆಡ್ಡಿ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಉಳಿದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಈ ಘಟನೆಯಿಂದ ಇಡೀ ಕುಟುಂಬ ಕಣ್ಣೀರಲ್ಲಿ ಮುಳುಗಿದೆ. ಒಂದೇ ಕುಟುಂಬದ ಮೂವರು ಮಕ್ಕಳ ಸಾವಿನ ಸುದ್ದಿ ಮುಚ್ಚರ್ಲಪಲ್ಲಿ ಗ್ರಾಮದಲ್ಲಿ ದುಃಖದ ಛಾಯೆ ಮೂಡಿಸಿದೆ. ಶ್ರೀಕಾಂತ್ ರೆಡ್ಡಿ ಅವರ ಕುಟುಂಬ ಸದಸ್ಯರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us