/newsfirstlive-kannada/media/media_files/2025/12/21/gold-1-2025-12-21-08-55-29.jpg)
ಬೆಂಗಳೂರು: ಕೇಂದ್ರ ಬಜೆಟ್ 2026 ಮಂಡನೆಯಾದ ಮರುದಿನವೇ ಆಭರಣ ಪ್ರಿಯರಿಗೆ ಭರ್ಜರಿ ಸಿಹಿ ಸುದ್ದಿ ಸಿಕ್ಕಿದೆ. ದೇಶೀಯ ಫ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಗಳು ಇವತ್ತು ಗಣನೀಯವಾಗಿ ಕುಸಿದಿವೆ. ಮಲ್ಟಿ ಕಮೋಡಿಟಿ ಎಕ್ಸ್ಚೇಂಜ್ (MCX) ನಲ್ಲಿ ಹಳದಿ ಲೋಹದ ಬೆಲೆ ಭಾರೀ ಇಳಿಕೆ ಕಂಡಿದ್ದು, ಗ್ರಾಹಕರಿಗೆ ದೊಡ್ಡ ಮಟ್ಟದ ನಿರಾಳ ತಂದಿದೆ.
MCX ಮಾರುಕಟ್ಟೆಯಲ್ಲಿ ಎಷ್ಟಿದೆ ದರ?
ಸೋಮವಾರ ಬೆಳಗ್ಗೆ MCXನಲ್ಲಿ ಎಕ್ಸ್‌ಪೈರಿ ಗೋಲ್ಡ್ ಫ್ಯೂಚರ್ಸ್ ಪ್ರತಿ 10 ಗ್ರಾಂಗೆ 1,39,868 ರೂಪಾಯಿಗಳಲ್ಲಿ ಆರಂಭವಾಯಿತು. 10 ಗಂಟೆಯ ವೇಳೆಗೆ ಸುಮಾರು 6,900 ರೂಪಾಯಿಗಳಷ್ಟು ಕುಸಿದು 1,35,589 ರೂಪಾಯಿಗಳಿಗೆ ತಲುಪಿದೆ. ಬೆಳ್ಳಯ ಬೆಲೆಯಲ್ಲಿಯೂ ಹಠಾತ್ ಇಳಿಕೆ ಕಂಡುಬಂದಿದ್ದು, ಪ್ರತಿ ಕೆಜಿಗೆ ಸುಮಾರು 16,700 ರೂಪಾಯಿಗಳಷ್ಟು ಬೆಲೆ ಇಳಿಕೆಯಾಗಿ 2,48,875 ರೂಪಾಯಿಗಳಲ್ಲಿ ವಹಿವಾಟು ನಡೆಸುತ್ತಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್ ದರೋಡೆ; ಯುವಕನಿಗೆ ಲಾಂಗ್ ತೋರಿಸಿ 31 ಲಕ್ಷ ಲೂಟಿ..!
ಇನ್ನು ಬೆಂಗಳೂರಿನಲ್ಲಿ, 24 ಕ್ಯಾರೆಟ್ ಒಂದು ಗ್ರಾಂ ಚಿನ್ನದ ಬೆಲೆ 15,153 ರೂಪಾಯಿ ಆಗಿದ್ದರೆ, 22 ಕ್ಯಾರೆಟ್​ ಒಂದು ಗ್ರಾಂ ಚಿನ್ನದ ಬೆಲೆ 13890 ಆಗಿದೆ. 18 ಕ್ಯಾರೆಟ್​ನ ಒಂದು ಗ್ರಾಂ ಚಿನ್ನದ 11,365 ರೂಪಾಯಿ ಆಗಿದೆ. ನಿನ್ನೆ 22 ಕ್ಯಾರೆಟ್‌ನ ಒದು ಗ್ರಾಂ ಚಿನ್ನ 14720ರೂಪಾಯಿ ಇತ್ತು. ಆದರೆ ಇವತ್ತು 13,890 ರೂಪಾಯಿಗೆ ಮಾರಾಟ ಆಗುತ್ತಿದೆ. ಬೆಳ್ಳಿ ಬೆಲೆ ನೋಡೋದಾದ್ರೆ, ಒಂದು ಕೆಜಿ ಬೆಳ್ಳಿಯ ದರವು 3,20,000 ಆಗಿದೆ. ನಿನ್ನೆಯ ದಿನ 3,50,000 ರೂಪಾಯಿ ಇತ್ತು.
ಇಂದಿನ ಚಿನ್ನದ ದರ (ಪ್ರತಿ 10 ಗ್ರಾಂಗೆ, ಗುಡ್ ರಿಟರ್ನ್ಸ್ ಮಾಹಿತಿ ಪ್ರಕಾರ)
ದೆಹಲಿ
- 24 ಕ್ಯಾರೆಟ್: ₹1,51,680
- 22 ಕ್ಯಾರೆಟ್: ₹1,39,050
ಮುಂಬೈ, ಕೋಲ್ಕತ್ತಾ, ಹೈದರಾಬಾದ್
- 24 ಕ್ಯಾರೆಟ್: ₹1,51,530
- 22 ಕ್ಯಾರೆಟ್: ₹1,38,900
ಚೆನ್ನೈ:
- 24 ಕ್ಯಾರೆಟ್: ₹1,52,180
- 22 ಕ್ಯಾರೆಟ್: ₹1,39,500
ಅಹಮದಾಬಾದ್, ಪಾಟ್ನಾ
- 24 ಕ್ಯಾರೆಟ್: ₹1,51,580
- 22 ಕ್ಯಾರೆಟ್: ₹1,38,950
ಲಕ್ನೋ
- 24 ಕ್ಯಾರೆಟ್: ₹1,51,680
- 22 ಕ್ಯಾರೆಟ್: ₹1,39,050
ಬಜೆಟ್ 2026 ಘೋಷಣೆಯಾದ ನಂತರ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು ಮತ್ತು ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದಾಗಿ ಬೆಲೆ ಇಳಿಕೆಯಾಗಿದೆ ಎಂದು ವಿಶ್ಲೇಷಿಸಲಾಗಿದೆ. ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನದ ದರಕ್ಕೆ ಬಜೆಟ್ ನಂತರ ತುಸು ಬ್ರೇಕ್ ಬಿದ್ದಂತಾಗಿದೆ. ಮದುವೆ ಸಮಾರಂಭಗಳಿಗೆ ಚಿನ್ನ ಖರೀದಿಸಲು ಯೋಜಿಸುತ್ತಿರುವವರಿಗೆ ಇದು ಉತ್ತಮ ಸಮಯ ಎನ್ನಬಹುದು.
ಇದನ್ನೂ ಓದಿ: ರಾಮನಗರದಲ್ಲಿ ಅಡುಗೆ ಅನಿಲ ಸೋರಿಕೆ ದುರಂತ.. ತಂದೆ, ತಾಯಿ, ಮಗ ದಾರುಣ ಅಂತ್ಯ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us