/newsfirstlive-kannada/media/media_files/2025/12/29/truck-overturn-on-bolero-at-rampura-2025-12-29-14-22-38.jpg)
ಬೊಲೆರೋ ಮೇಲೆ ಉರುಳಿಬಿದ್ದ ಟ್ರಕ್, ಡ್ರೈವರ್ ಸಾವು
ಉತ್ತರ ಪ್ರದೇಶದ ರಾಂಪುರದಲ್ಲಿ ಹೊಟ್ಟು ತುಂಬಿದ ಟ್ರಕ್ ಚಲಿಸುತ್ತಿದ್ದ ಬೊಲೆರೊ ಮೇಲೆ ಉರುಳಿ ಬಿದ್ದ ಪರಿಣಾಮ ಒಬ್ಬ ವ್ಯಕ್ತಿ ಸಾವನ್ನಪ್ಪಿದ ಭೀಕರ ರಸ್ತೆ ಅಪಘಾತ ಇದು. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಘಟನೆ ಆನ್‌ಲೈನ್‌ನಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದ್ದು, ರಾಂಪುರ-ನೈನಿತಾಲ್ ಹೆದ್ದಾರಿಯಲ್ಲಿರುವ ಜನನಿಬಿಡ ಪಹಾಡಿ ಗೇಟ್ ಸರ್ಕಲ್ ನಲ್ಲಿ ಭಾನುವಾರ ಸಂಜೆ ನಡೆದಿದೆ.
ಹೆದ್ದಾರಿ ಸಿಗ್ನಲ್ ನಲ್ಲಿ ತಿರುವು ಪಡೆಯಲು ಬೊಲೆರೊ ಪ್ರಯತ್ನಿಸಿದಾಗ, ಟ್ರಕ್ ಡಿಕ್ಕಿ ತಪ್ಪಿಸಲು ಬಲಭಾಗಕ್ಕೆ ಚಲಿಸಿತು. ಟ್ರಕ್‌ನ ಚಕ್ರವು ಕೇಂದ್ರ ರಸ್ತೆ ವಿಭಜಕವನ್ನು ಹತ್ತಿದ್ದರಿಂದ ಭಾರ ಹೊತ್ತ ವಾಹನವು ಸಮತೋಲನ ಕಳೆದುಕೊಂಡು ನೇರವಾಗಿ ಬೊಲೆರೊ ಮೇಲೆ ಉರುಳಿ ಬಿದ್ದು, ಅದು ಸಂಪೂರ್ಣವಾಗಿ ನಜ್ಜುಗುಜ್ಜಾಯಿತು. ಈ ವೇಳೆ ಬೊಲೆರೋ ವಾಹನದಲ್ಲಿ ಡ್ರೈವರ್ ಮಾತ್ರ ಇದ್ದರು. ಡ್ರೈವರ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಈ ಬೊಲೆರೋ ವಾಹನವು ಇಂಧನ ಇಲಾಖೆಯ ಉಪವಿಭಾಗಾಧಿಕಾರಿಗೆ ನೀಡಲಾಗಿತ್ತು. ಅಪಘಾತ ಸಂಭವಿಸಿದ ಸಮಯದಲ್ಲಿ ಉಪವಿಭಾಗಾಧಿಕಾರಿ ವಾಹನದಲ್ಲಿ ಇರಲಿಲ್ಲ. ಸಬ್ ಸ್ಟೇಷನ್ ಗೆ ಉಪವಿಭಾಗಾಧಿಕಾರಿಯನ್ನ ಡ್ರಾಪ್ ಮಾಡಿ ಡ್ರೈವರ್ ವಾಪಸ್ ಬರುತ್ತಿದ್ದರು.
ಅಪಘಾತದ ಬಳಿಕ ಮೂರು ಪೊಲೀಸ್ ಠಾಣೆಯ ಸಿಬ್ಬಂದಿ ಕ್ರೇನ್ ಬಳಸಿ, ಟ್ರಕ್ ಅನ್ನು ಮೇಲಕ್ಕೆ ಎತ್ತಿ, ಬೊಲೆರೋದಲ್ಲಿ ಸಿಲುಕಿದ್ದ ಚಾಲಕನ ಶವವನ್ನು ಹೊರ ತೆಗೆದಿದ್ದಾರೆ.
#Rampur🚨⚠️
— Dave (Road Safety: City & Highways) (@motordave2) December 28, 2025
Disturbing Visuals🚨#Chaos around #Intersection
- Overloaded Lorry overturned on Bolero
- Bolero Driver does’t look like checked RV mirrors
- Everyone riding/driving everywhere 🤷♂️
What’s with India DL?@DriveSmart_IN
pic.twitter.com/8Mnh2lz1HF
ಈ ಅಪಘಾತದ ವಿಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಭಾರಿ ಭಾರದ ಟ್ರಕ್ ಗಳ ಸುರಕ್ಷತೆ, ರಸ್ತೆ ಟ್ರಾಫಿಕ್ ರಿಸ್ಕ್ ಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಚರ್ಚೆ ಮಾಡುತ್ತಿದ್ದಾರೆ.
ಗ್ರಾಮೀಣಾ ಹೆದ್ದಾರಿಗಳಲ್ಲಿ ರಸ್ತೆ ಸುರಕ್ಷತಾ ಕ್ರಮಗಳನ್ನು ಸರಿಯಾಗಿ ಜಾರಿಗೊಳಿಸಬೇಕು ಎಂಬ ಒತ್ತಾಯ ಕೇಳಿ ಬಂದಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us