/newsfirstlive-kannada/media/media_files/2025/08/02/usa-prez-donald-trump-2025-08-02-17-48-47.jpg)
ವಲಸೆ ತಡೆಯುವ ಉದ್ದೇಶದಿಂದ ಅಮೆರಿಕದಲ್ಲಿ ವಾಸ ಹಾಗು ಕೆಲಸ ಮಾಡಲು ಬರುವ ಭಾರತ ಹಾಗೂ ವಿದೇಶಿ ಪ್ರಜೆಗಳಿಗೆ ಎಚ್​1 ಬಿ ವೀಸಾಕ್ಕೆ ಒಂದು ಲಕ್ಷ ಶುಲ್ಕ ವಿಧಿಸಲು ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಒಪ್ಪಿಗೆ ನೀಡಿದ್ದಾರೆ. ಎಚ್​1 ಬಿ ವೀಸಾದ ದುರುಪಯೋಗವು ರಾಷ್ಟ್ರೀಯ ಭದ್ರತೆಗೆ ಸವಾಲಾಗಿದೆ. ಈ ಹಿನ್ನಲೆ 1 ಲಕ್ಷ ಡಾಲರ್ ಶುಲ್ಕ ಪಾವತಿಸದ ಹೊರತಾಗಿ ವೀಸಾ ನೀಡಲು ಅನುಮತಿ ನೀಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ.ಅಮೆರಿಕಾದ ಕಂಪನಿಗಳು ವಿದೇಶಿ ನೌಕರರನ್ನು ಮುಖ್ಯವಾಗಿ ಟೆಕ್ನಿಕಲ್ ಕ್ಷೇತ್ರದಲ್ಲಿ ಭಾರತ ಹಾಗು ಚೀನಾದ ಸಾವಿರಾರು ನೌಕರರನ್ನು ನೇಮಕ ಮಾಡಿಕೊಳ್ಳುತ್ತಿದ್ದವು. 2016 ರ ಬಳಿಕ ಮೊದಲ ಬಾರಿಗೆ 2024ರ ಫೆಬ್ರವರಿ 1 ರಂದು ವಲಸಿಗರಲ್ಲದವರಿಗೆ ನೀಡುವ ಎಲ್​-1 ಹಾಗು ಇಬಿ-5 ವಿಸಾಗಳ ಶುಲ್ಕಗಳ ಮೇಲೆ ಅಮೆರಿಕಾ ಶುಲ್ಕವನ್ನು ಏರಿಸಿತ್ತು.
ಭಾರತದ ಉದ್ಯೋಗಿಗಳ ಮೇಲೆ ಅಮೆರಿಕಾ ಕಂಪನಿಗಳ ಒತ್ತಡ..!
ಟ್ರಂಪ್ ಶುಲ್ಕವನ್ನು ಘೋಷಿಸಿದ ನಂತರ, ಮೈಕ್ರೋಸಾಫ್ಟ್, ಜೆಪಿ ಮಾರ್ಗನ್ ಮತ್ತು ಅಮೆಜಾನ್ ಕಂಪನಿಗಳು ಎಚ್1ಬಿ ವೀಸಾಗಳನ್ನು ಹೊಂದಿರುವ ತಮ್ಮ ಉದ್ಯೋಗಿಗಳಿಗೆ ಅಮೆರಿಕವನ್ನು ತೊರೆಯದಂತೆ ಸೂಚಿಸಿವೆ. ಇದಲ್ಲದೆ ಡೊನಾಲ್ಡ್ ಟ್ರಂಪ್ ಆದೇಶ ಜಾರಿಗೆ ಬರುವ ಸೆಪ್ಟೆಂಬರ್ 21 ರ ಬೆಳಿಗ್ಗೆ 12 ಗಂಟೆಯೊಳಗೆ ಅಮೆರಿಕಕ್ಕೆ ಮರಳುವಂತೆ ಅಮೆಜಾನ್ ತನ್ನ ಉದ್ಯೋಗಿಗಳಿಗೆ ಹೇಳಿದೆ ಎಂದು ಮಾಹಿತಿ ಸಿಕ್ಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.