ಭಾರತದ ಉತ್ಪನ್ನಗಳ ಮೇಲೆ ಸುಂಕ ಇಳಿಸಿದ ಟ್ರಂಪ್! : ಭಾರತಕ್ಕೆ ಇರೋ ಲಾಭವೇನು?

ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಕೊನೆಗೆ ಮೋದಿ ಸ್ನೇಹಕ್ಕೆ ಮರಳಾಗಿದ್ದಾರೆ. ಭಾರತವು ರಷ್ಯಾದಿಂದ ಕಚ್ಚಾತೈಲ ಖರೀದಿ ನಿಲ್ಲಿಸಿದೆ. ಇದರಿಂದ ಭಾರತದ ಉತ್ಪನ್ನಗಳನ್ನು ಅಮೆರಿಕಾಕ್ಕೆ ರಫ್ತು ಮಾಡುವುದರ ಮೇಲೆ ಸುಂಕ ಇಳಿಸಿದ್ದಾರೆ. ಇದರಿಂದ ಭಾರತಕ್ಕೆ ಆಗುವ ಲಾಭಗಳೇನು? ಇಲ್ಲಿದೆ ಡೀಟೈಲ್ಸ್. ಓದಿ.

author-image
Chandramohan
trump reduces tariff on india

ಭಾರತದ ಉತ್ಪನ್ನಗಳ ಮೇಲಿನ ಅಮದು ಸುಂಕ ಇಳಿಸಿದ ಅಮೆರಿಕಾ

Advertisment
  • ಭಾರತದ ಉತ್ಪನ್ನಗಳ ಮೇಲಿನ ಅಮದು ಸುಂಕ ಇಳಿಸಿದ ಅಮೆರಿಕಾ
  • ಶೇ.50 ರಿಂದ ಶೇ.18 ಕ್ಕೆ ಸುಂಕ ಇಳಿಸಿದ ಟ್ರಂಪ್‌
  • ರಷ್ಯಾದ ಕಚ್ಚಾತೈಲ ಖರೀದಿ ನಿಲ್ಲಿಸಿದ್ದರಿಂದ ಅಮೆರಿಕಾದ ಅಮದು ಸುಂಕ ಇಳಿಕೆ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಕರೆ ಮಾಡಿ ಮಾತನಾಡಿದ ನಂತರ, ಭಾರತದ  ಉತ್ಪನ್ನಗಳ  ಮೇಲಿನ ಸುಂಕವನ್ನು  ಶೇ.25 ರಿಂದ ಶೇ.18 ಕ್ಕೆ ಇಳಿಕೆ ಮಾಡುತ್ತಿರುವುದಾಗಿ ಘೋಷಿಸಿದ್ದಾರೆ.  ಪ್ರಧಾನಿ ಮೋದಿ ಅವರೊಂದಿಗಿನ ಚರ್ಚೆಯ ನಂತರ ಪರಸ್ಪರ ಸುಂಕಗಳನ್ನು ಕಡಿಮೆ ಮಾಡಿರುವುದಾಗಿ ಟ್ರೂತ್ ಸೋಶಿಯಲ್‌ನಲ್ಲಿ ಘೋಷಿಸಿದ ಟ್ರಂಪ್, "ಪ್ರಧಾನಿ ಮೋದಿಯವರೊಂದಿಗಿನ ಸ್ನೇಹ ಮತ್ತು ಗೌರವದಿಂದ, ತಕ್ಷಣವೇ ಜಾರಿಗೆ ಬರುವಂತೆ, ನಾವು ಅಮೆರಿಕಾ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಕ್ಕೆ ಒಪ್ಪಿಕೊಂಡೆವು, ಆ ಮೂಲಕ, ಇನ್ನೂ ಮುಂದೆ ಅಮೆರಿಕಾವು ಭಾರತದ ಮೇಲಿನ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ.25 ರಿಂದ ಶೇ.18 ಕ್ಕೆ ಇಳಿಸುತ್ತೇವೆ ಎಂದು ಬರೆದಿದ್ದಾರೆ. 


ಅಮೆರಿಕಾ ಟ್ಯಾಕ್ಸ್‌ ಇಳಿಕೆ ಭಾರತಕ್ಕೇನು ಲಾಭ?

ಲಾಭ  01) ರಫ್ತು ಹೆಚ್ಚಳವಾಗುತ್ತೆ- ಅಮೆರಿಕಾಕ್ಕೆ ಭಾರತದ ಉತ್ಪನ್ನಗಳ ರಫ್ತು ಹೆಚ್ಚಳವಾಗುತ್ತೆ. 
ಲಾಭ 02) ಜಾಗತಿಕ ಮಾರುಕಟ್ಟೆಯಲ್ಲಿ ಭಾರತೀಯ ವಸ್ತುಗಳ ಸ್ಪರ್ಧೆ ಮಾಡಲು ಅವಕಾಶ. 
ಲಾಭ 03) ಷೇರು ಮಾರುಕಟ್ಟೆ ಏರಿಕೆ, ರೂಪಾಯಿ ಮೌಲ್ಯಕ್ಕೆ ಬಲ
ಲಾಭ 04)  ಭಾರತದ ಉತ್ಪನ್ನಗಳು ಅಮೆರಿಕಾಕ್ಕೆ ರಫ್ತಾಗುವುದರಿಂದ ಭಾರತದಲ್ಲಿ ಹೆಚ್ಚಿನ  ಉದ್ಯೋಗ ಸೃಷ್ಟಿ ಆಗುತ್ತೆ. 
ಲಾಭ 05) ದೇಶದಲ್ಲಿ ರಫ್ತು ಹೆಚ್ಚಳದಿಂದ  ಆರ್ಥಿಕ ಸ್ಥಿರತೆ ಉಂಟಾಗುತ್ತೆ. 
ಲಾಭ 06) ಭಾರತ-ಅಮೆರಿಕಾ ಬಾಂಧವ್ಯ ಬಲಗೊಳ್ಳುತ್ತೆ. 

ಇನ್ನೂ ಭಾರತವು ಇತ್ತೀಚೆಗೆ ಯೂರೋಪಿಯನ್ ಯೂನಿಯನ್ ಜೊತೆಗೂ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಇದರಿಂದಲೂ ಭಾರತಕ್ಕೆ ಹತ್ತಾರು ಲಾಭಗಳಿವೆ. ಆ ಲಾಭಗಳೇನು ಅಂತ ನೋಡೋಣ. 

ಭಾರತ ಮತ್ತು ಯುರೋಪಿಯನ್‌  ಒಕ್ಕೂಟದ ನಡುವಿನ ವ್ಯಾಪಾರ ಒಪ್ಪಂದದ  ಲಾಭಗಳು?

1. ರಫ್ತು ಹೆಚ್ಚಳ! : ವಸ್ತ್ರ, ಚರ್ಮ, ಔಷಧಿ, ಆಟೋ ಭಾಗಗಳು, ಕೃಷಿ ಉತ್ಪನ್ನಗಳಿಗೆ EU ಮಾರುಕಟ್ಟೆಯಲ್ಲಿ ಸುಲಭ ಪ್ರವೇಶ. ಸುಂಕ (Customs Duty) ಕಡಿಮೆಯಾಗುವುದರಿಂದ ಭಾರತೀಯ ವಸ್ತುಗಳು ಸ್ಪರ್ಧಾತ್ಮಕವಾಗುತ್ತವೆ
2. ಉದ್ಯೋಗಾವಕಾಶಗಳು!:  ರಫ್ತು ಮತ್ತು ಉತ್ಪಾದನೆ ಹೆಚ್ಚಾದರೆ ಹೊಸ ಉದ್ಯೋಗಗಳು ಸೃಷ್ಟಿಯಾಗುತ್ತವೆ MSME (ಸಣ್ಣ ಮತ್ತು ಮಧ್ಯಮ ಉದ್ಯಮಗಳು)ಗಳಿಗೆ ವಿಶೇಷ ಲಾಭ
3. ಹೂಡಿಕೆ (FDI) ಹೆಚ್ಚಳ! :ಯುರೋಪಿನ ಕಂಪನಿಗಳು ಭಾರತದಲ್ಲಿ ಹೆಚ್ಚು ಹೂಡಿಕೆ ಮಾಡಲು ಆಸಕ್ತಿ ತೋರುತ್ತವೆ. ತಂತ್ರಜ್ಞಾನ, ಮೂಲಸೌಕರ್ಯ, ಗ್ರೀನ್ ಎನರ್ಜಿ ಕ್ಷೇತ್ರಗಳಿಗೆ ಲಾಭ
4. ತಂತ್ರಜ್ಞಾನ ಮತ್ತು ಕೌಶಲ್ಯ ವರ್ಗಾವಣೆ! : EU ದೇಶಗಳಿಂದ ಉನ್ನತ ತಂತ್ರಜ್ಞಾನ, ಸಂಶೋಧನೆ ಮತ್ತು ಇನೋವೇಷನ್‌ಗೆ ಸಹಕಾರ ಭಾರತೀಯ ಕಾರ್ಮಿಕರಿಗೆ ಹೊಸ ಕೌಶಲ್ಯಗಳು
5. ಸೇವಾ ಕ್ಷೇತ್ರಕ್ಕೆ ಲಾಭ!  :  IT, ಸಾಫ್ಟ್‌ವೇರ್, ಹಣಕಾಸು, ಸಲಹೆ ಸೇವೆಗಳಿಗೆ ಯುರೋಪಿನಲ್ಲಿ ಹೆಚ್ಚಿನ ಅವಕಾಶ. ಭಾರತೀಯ ವೃತ್ತಿಪರರಿಗೆ ಕೆಲಸದ ಅವಕಾಶಗಳು
6. ಜಾಗತಿಕ ಮಟ್ಟದಲ್ಲಿ ಭಾರತದ ಸ್ಥಾನ ಬಲವಾಗುತ್ತದೆ! : EU ಜೊತೆ ಒಪ್ಪಂದದಿಂದ ಭಾರತ ವಿಶ್ವಾಸಾರ್ಹ ವ್ಯಾಪಾರ ಪಾಲುದಾರನಾಗಿ ಕಾಣಿಸುತ್ತದೆ. ಚೀನಾ ಮೇಲಿನ ಅವಲಂಬನೆ ಕಡಿಮೆ ಮಾಡಲು EU–ಭಾರತ ಸಹಕಾರ ಸಹಾಯಕ
7. ಗ್ರಾಹಕರಿಗೆ ಲಾಭ! : ಉತ್ತಮ ಗುಣಮಟ್ಟದ ಯುರೋಪಿಯನ್ ಉತ್ಪನ್ನಗಳು ಕಡಿಮೆ ಬೆಲೆಗೆ ಲಭ್ಯ. ಆಯ್ಕೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ.


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

india-EU TRADE DEAL USA TARIFF DOWN TO 18%
Advertisment