Advertisment

ದೆಹಲಿಯಲ್ಲಿ ಕಾರ್ ಸ್ಪೋಟಿಸಿದ್ದ ಉಮರ್ ನಬಿಯ ಮನೆ ಧ್ವಂಸ: ಜಮ್ಮು ಕಾಶ್ಮೀರ ಪೊಲೀಸರಿಂದ ಮನೆ ಧ್ವಂಸ!

ನವಂಬರ್ 10ರ ಸಂಜೆ ದೆಹಲಿಯ ರೆಡ್ ಪೋರ್ಟ್ ಬಳಿ ಕಾರ್ ಸ್ಪೋಟಿಸಿ 13 ಮಂದಿಯ ಸಾವಿಗೆ ಕಾರಣನಾದ ಉಮರ್ ನಬಿಯ ಮನೆಯನ್ನು ಧ್ವಂಸ ಮಾಡಲಾಗಿದೆ. ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೋಲಿ ಗ್ರಾಮದಲ್ಲಿದ್ದ ಮನೆಯನ್ನು ಕಾಶ್ಮೀರ ಪೊಲೀಸರು ಧ್ವಂಸ ಮಾಡಿದ್ದಾರೆ.

author-image
Chandramohan
UMAR NABI HOUSE DEMOLISHED

ಕಾಶ್ಮೀರದಲ್ಲಿದ್ದ ಉಮರ್ ನಬಿಯ ಮನೆ ಧ್ವಂಸ

Advertisment
  • ಕಾಶ್ಮೀರದಲ್ಲಿದ್ದ ಉಮರ್ ನಬಿಯ ಮನೆ ಧ್ವಂಸ
  • ಜಮ್ಮು ಕಾಶ್ಮೀರ ಪೊಲೀಸರಿಂದ ಉಮರ್ ನಬಿ ಮನೆ ಧ್ವಂಸ
ದೆಹಲಿಯ ರೆಡ್ ಪೋರ್ಟ್ ಬಳಿ ಕಾರ್ ನಲ್ಲಿ ಬಾಂಬ್ ಸ್ಪೋಟಿಸಿ ಮೃತಪಟ್ಟ ಡಾ.ಉಮರ್ ನಬಿಯ ಕಾಶ್ಮೀರದ ಮನೆಯನ್ನು ಜಮ್ಮು ಕಾಶ್ಮೀರ ಪೊಲೀಸರು ಧ್ವಂಸ ಮಾಡಿದ್ದಾರೆ.   ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಕೋಲಿ ಗ್ರಾಮದಲ್ಲಿ ಡಾ.ಉಮರ್ ನಬಿಯ ಮನೆ ಇತ್ತು. ಈ ಮನೆಯಲ್ಲಿ ಉಮರ್ ನಬಿ ತಾಯಿ, ಸೋದರರು, ಅತ್ತಿಗೆ ವಾಸ ಇದ್ದರು.
ಕಳೆದ ತಿಂಗಳು ಕೋಲಿ ಗ್ರಾಮದ ಮನೆಗೆ ಹೋಗಿದ್ದ ಉಮರ್ ನಬಿ ಕೆಲ ದಿನ ತನಗೆ ಟೆನ್ಷನ್ ಇದೆ. ನಾನು ಯಾರ ಕೈಗೂ ಸಿಗಲ್ಲ ಎಂದು ಹೇಳಿ ಹರಿಯಾಣದ ಫರೀದಾಬಾದ್ ಗೆ ಹೋಗಿದ್ದ. ಕಳೆದ ತಿಂಗಳೇ ದೊಡ್ಡ ಸ್ಪೋಟ ನಡೆಸಿ, ಭೂಗತನಾಗುವ ಪ್ಲ್ಯಾನ್ ಅನ್ನು ಈತ ಮಾಡಿಕೊಂಡಿದ್ದ ಎಂಬುದು ಇದರಿಂದ ಸ್ಪಷ್ಟವಾಗುತ್ತೆ. 

Advertisment
ಭಾರತದ ನೆಲದಲ್ಲಿ ಭಯೋತ್ಪಾದನೆ ನಡೆಸುವವರಿಗೆ ಕಠಿಣ ಸಂದೇಶ ರವಾನಿಸುವ ಉದ್ದೇಶದಿಂದ ಮನೆ ನೆಲಸಮ ಮಾಡಲಾಗಿದೆ. ಭಯೋತ್ಪಾದನೆ ನಡೆಸವವರನ್ನು ಸಹಿಸಲ್ಲ. ಅವರನ್ನು ಮಟ್ಟ ಹಾಕದೇ ಬಿಡಲ್ಲ ಎಂಬ ಸಂದೇಶವನ್ನು ಈ ಮೂಲಕ ರವಾನಿಸಲಾಗಿದೆ. 
ಈ ಹಿಂದೆ ಪಹಲ್ಗಾಮ್ ದಾಳಿಕೋರರಿಗೆ ನೆರವು ನೀಡಿದವರು ಮತ್ತು ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾದ ಕಾಶ್ಮೀರದ ಸ್ಥಳೀಯ ಮನೆಗಳನ್ನು ಇದೇ ರೀತಿ ನೆಲಸಮ ಮಾಡಲಾಗಿತ್ತು. 
ಈಗ ದೆಹಲಿಯ ರೆಡ್ ಪೋರ್ಟ್ ಕಾರ್ ಬಾಂಬ್ ಸ್ಪೋಟ ಕೇಸ್ ನಲ್ಲೂ ಅದೇ ತಂತ್ರವನ್ನು ಭಾರತದ ಭದ್ರತಾ ಪಡೆಗಳು  ಅನುಸರಿಸಿವೆ. ಭಯೋತ್ಪಾದನೆ ನಡೆಸುವವರಿಗೆ ಆಶ್ರಯ, ವಾಸಕ್ಕೂ ಮನೆ ಇಲ್ಲದಂತೆ ಮಾಡಲಾಗುತ್ತಿದೆ. ಭಯೋತ್ಪಾದನೆ ನಡೆಸುವವರಿಗೆ ಭಾರತದಲ್ಲಿ ನೆಲೆ ಸಿಗಲ್ಲ. ನೆಲೆ ಕೊಡಬಾರದು ಎಂಬುದು ಭಾರತದ ಭದ್ರತಾ ಪಡೆಗಳು, ಸರ್ಕಾರದ ಕಠಿಣ ನಿಲುವು. 
UMAR NABI HOUSE DEMOLISHED
Advertisment
Advertisment
Advertisment