/newsfirstlive-kannada/media/media_files/2025/12/29/unnao-rape-case-bail-stayed-by-sc-2025-12-29-12-51-28.jpg)
ಉನ್ನಾವೋ ರೇಪ್ ಕೇಸ್ ಅಪರಾಧಿ ಬಿಡುಗಡೆಗೆ ಬ್ರೇಕ್
ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸೆಂಗಾರ್‌ಗೆ ದೆಹಲಿ ಹೈಕೋರ್ಟ್ ನೀಡಿದ್ದ ಜಾಮೀನಿಗೆ ಸುಪ್ರೀಂಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಉನ್ನಾವೋ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯನ್ನು ರೇಪ್ ಮಾಡಿದ ಆರೋಪ ಶಾಸಕರಾಗಿದ್ದ ಕುಲದೀಪ್ ಸೆಂಗಾರ್ ಮೇಲಿದೆ. ಈಗಾಗಲೇ ಕೆಳ ನ್ಯಾಯಾಲಯವು ವಿಚಾರಣೆ ನಡೆಸಿ ಕುಲದೀಪ್ ಸೆಂಗಾರ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ. ಈ ಶಿಕ್ಷೆಯನ್ನು ಪ್ರಶ್ನಿಸಿ ಕುಲದೀಪ್ ಸೆಂಗಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು. ದೆಹಲಿ ಹೈಕೋರ್ಟ್ , ಶಿಕ್ಷೆಯನ್ನು ಅಮಾನತ್ತಿನಲ್ಲಿಟ್ಟು ಜಾಮೀನು ನೀಡಿತ್ತು. ಇದನ್ನು ಪ್ರಶ್ನಿಸಿ ಕಳೆದ ವಾರ ಸಿಬಿಐ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಇಂದು ಸುಪ್ರೀಂಕೋರ್ಟ್ , ಸಿಬಿಐ ಮೇಲ್ಮನವಿ ಅರ್ಜಿಯನ್ನು ವಿಚಾರಣೆ ನಡೆಸಿ ಹೈಕೋರ್ಟ್ ನೀಡಿದ್ದ ಜಾಮೀನು ಆದೇಶಕ್ಕೆ ತಡೆಯಾಜ್ಞೆ ನೀಡಿದೆ.
ಸುಪ್ರೀಂಕೋರ್ಟ್ ಸಿಜೆಐ ಸೂರ್ಯಕಾಂತ್, ಜಸ್ಟೀಸ್ ಜೆ.ಕೆ. ಮಹೇಶ್ವರಿ, ಜಸ್ಟೀಸ್ ಆಗಸ್ಟೀನ್ ಜಾರ್ಜ್ ಅವರನ್ನೊಳಗೊಂಡ ಪೀಠ ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ಇಂದು ವಿಚಾರಣೆ ನಡೆಸಿತು.
ಈ ಕೇಸ್ ನಲ್ಲಿ ಕುಲದೀಪ್ ಸೆಂಗಾರ್ ಗೆ ಸುಪ್ರೀಂಕೋರ್ಟ್ ನೋಟೀಸ್ ಜಾರಿ ಮಾಡಿದೆ. ಸಿಬಿಐ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ವಾದಿಸಿದ್ದರು. ಕುಲದೀಪ್ ಸೆಂಗಾರ್ ಪರ ಹಿರಿಯ ವಕೀಲರೊಬ್ಬರು ವಾದಿಸಿದ್ದರು. ಈ ಕೇಸ್ ನಲ್ಲಿ ಕಾನೂನಿನ ಅನೇಕ ಮಹತ್ವದ ಪ್ರಶ್ನೆಗಳು ಉದ್ಭವವಾಗಿವೆ. ಅರ್ಜಿಗೆ ನಾಲ್ಕು ವಾರದಲ್ಲಿ ಪ್ರತಿಕ್ರಿಯೆ ಸಲ್ಲಿಸಬೇಕು. ಸಾಮಾನ್ಯವಾಗಿ ಅಪರಾಧಿಗಳು ಅಥವಾ ವಿಚಾರಣಾಧೀನ ಖೈದಿಗಳ ಬಿಡುಗಡೆಗೆ ಆದೇಶ ನೀಡಿದ್ದ ಕೇಸ್ ಗಳಲ್ಲಿ ಅವರ ವಾದ ಕೇಳದೇ ತಡೆಯಾಜ್ಞೆ ನೀಡಲ್ಲ ಎಂಬ ಅರಿವು ನಮಗೆ ಇದೆ. ಆದರೇ, ಈ ಕೇಸ್ ನಲ್ಲಿ ವಿಚಿತ್ರ ಸತ್ಯಾಂಶಗಳ ಹಿನ್ನಲೆಯಲ್ಲಿ ಅಪರಾಧಿಗೆ ಜಾಮೀನು ನೀಡಿದ್ದ ದೆಹಲಿ ಹೈಕೋರ್ಟ್ ನ ಡಿಸೆಂಬರ್ 23ರ ಆದೇಶಕ್ಕೆ ತಡೆಯಾಜ್ಞೆ ನೀಡುತ್ತಿದ್ದೇವೆ. ಹೀಗಾಗಿ ಪ್ರತಿವಾದಿ ಅಪರಾಧಿಯನ್ನು ಜೈಲಿನಿಂದ ಬಿಡುಗಡೆ ಮಾಡಬಾರದು ಎಂದು ಸುಪ್ರೀಂಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಸಾರ್ವಜನಿಕ ಸೇವಕರು ಯಾರು ಎಂಬ ಬಗ್ಗೆ ದೆಹಲಿ ಹೈಕೋರ್ಟ್ ವ್ಯಾಖ್ಯಾನವು ದೋಷಪೂರಿತವಾಗಿರಬಹುದು. ಇದು ಕಾನೂನು ರಚಿಸುವವರಿಗೆ ವಿನಾಯಿತಿ ನೀಡಬಹುದು.
ಕಾನೂನಿನ ಅಂಶಗಳನ್ನು ಪರಿಗಣಿಸಬೇಕಾಗಿದೆ. ಹೈಕೋರ್ಟ್ ನಲ್ಲಿ ಆದೇಶ ನೀಡಿದ್ದ ಜಡ್ಜ್ ಗಳು ಶ್ರೇಷ್ಠ ಜಡ್ಜ್ ಗಳು. ಆದರೇ, ನಾವೆಲ್ಲರೂ ತಪ್ಪುಗಳನ್ನು ಮಾಡುವ ಸಾಧ್ಯತೆ ಇರುತ್ತೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
/filters:format(webp)/newsfirstlive-kannada/media/media_files/2025/12/29/unnao-rape-case-bail-stayed-by-sc-1-2025-12-29-13-05-58.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us