/newsfirstlive-kannada/media/media_files/2025/08/22/laddu-complaiant-to-cm-helpline-2025-08-22-13-50-38.jpg)
ಸಿಎಂ ಹೆಲ್ಪ್ ಲೇನ್ ಗೆ ದೂರು ನೀಡಿದ್ದ ಕಮಲೇಶ್ ಕುಶ್ವಾಹ
ಸಾಮಾನ್ಯವಾಗಿ ಜನರು ತಮ್ಮ ದೂರುಗಳ ಬಗ್ಗೆ ಪೊಲೀಸ್ ಕಂಟ್ರೋಲ್ ರೂಮುಗೆ ಪೋನ್ ಮಾಡ್ತಾರೆ. ಸಿಎಂ ಹೆಲ್ಪ್ ಲೇನ್ ಗೂ ಪೋನ್ ಮಾಡಿ ದೂರುಗಳನ್ನು ಹೇಳಿಕೊಳ್ಳುತ್ತಾರೆ. ತಮ್ಮ ಮನೆಯ ರೋಡ್ ಸರಿ ಇಲ್ಲ. ಕರೆಂಟ್ ಇಲ್ಲ. ಊರಿಗೆ ಹೋಗಲು ರಸ್ತೆ ಇಲ್ಲ. ಜಮೀನಿನ ಸಮಸ್ಯೆ ಬಗ್ಗೆ ಹೇಳಿಕೊಳ್ಳೋದು ಸಾಮಾನ್ಯ.
ಆದರೇ, ಮಧ್ಯಪ್ರದೇಶದ ಭೀಂಡ್ ಜಿಲ್ಲೆಯಲ್ಲಿ ಕಮಲೇಶ್ ಕುಶ್ವಾಹಾ ಎಂಬ ವ್ಯಕ್ತಿ ಸ್ವಾತಂತ್ರ್ಯ ದಿನಾಚರಣೆಯಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ವಿಚಿತ್ರ ದೂರು ನೀಡಿದ್ದಾನೆ. ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಎಲ್ಲರಿಗೂ ಎರಡೆರಡು ಲಡ್ಡು ನೀಡಿದ್ದರು. ನನಗೆ ಮಾತ್ರವೇ ಒಂದೇ ಒಂದು ಲಡ್ಡು ನೀಡಿದ್ದಾರೆ. ನನಗೂ ಎರಡು ಲಡ್ಡು ನೀಡಬೇಕಾಗಿತ್ತು ಎಂದು ಸಿಎಂ ಹೆಲ್ಪ್ ಲೇನ್ ಗೆ ದೂರು ನೀಡಿದ್ದಾನೆ. ಗ್ರಾಮ ಪಂಚಾಯತ್ ಭವನದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಲಡ್ಡು ವಿತರಣೆ ವೇಳೆ ತನಗೆ 2 ಲಡ್ಡು ನೀಡಬೇಕಾಗಿತ್ತು. ನಾನು 2 ಲಡ್ಡು ನೀಡುವಂತೆ ಕೇಳಿದರೂ ಕೊಟ್ಟಿಲ್ಲ ಎಂದು ಸಿಎಂ ಹೆಲ್ಪ್ ಲೇನ್ ಗೆ ಪೋನ್ ಮಾಡಿ ದೂರು ಅನ್ನು ಕಮಲೇಶ್ ಕುಶ್ವಾಹ ರಿಜಿಸ್ಟರ್ ಮಾಡಿದ್ದಾನೆ.
ದ್ವಜಾರೋಹಣದ ಬಳಿಕ ಗ್ರಾಮ ಪಂಚಾಯತ್ ಸರಿಯಾಗಿ ಎಲ್ಲರಿಗೂ ಸಿಹಿ ಹಂಚುವಲ್ಲಿ ವಿಫಲವಾಗಿದೆ. ಈ ಸಮಸ್ಯೆಯನ್ನು ಬಗೆಹರಿಸಿ ಎಂದು ದೂರು ನೀಡಿದ್ದಾನೆ.
ಈ ಸಮಸ್ಯೆ ಬಗ್ಗೆ ಪಂಚಾಯತ್ ಕಾರ್ಯದರ್ಶಿ ರವೀಂದ್ರ ಶ್ರೀವಾಸ್ತವ್ ಇದು ನಿಜವಾಗಿ ನಡೆದ ಘಟನೆ ಎನ್ನುವುದನ್ನು ಖಚಿತಪಡಿಸಿದ್ದಾರೆ. ಜೊತೆಗೆ ಘಟನೆ ಹೇಗಾಯ್ತು ಎನ್ನುವುದನ್ನು ವಿವರಿಸಿದ್ದಾರೆ. ಗ್ರಾಮಸ್ಥರು ರಸ್ತೆಯ ಪಕ್ಕದಲ್ಲಿ ನಿಂತಿದ್ದರು. ಪಂಚಾಯತ್ ಪಿವನ್, ಕಮಲೇಶ್ ಕುಶ್ವಾಹಾಗೆ ಒಂದು ಲಡ್ಡು ನೀಡಿದ್ದಾರೆ. ಆದರೇ, ಕಮಲೇಶ್ ಕುಶ್ವಾಹ ತನಗೆ ಎರಡು ಲಡ್ಡು ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ. ಎರಡು ಲಡ್ಡು ಕೊಡಲು ಪಿವನ್ ನಿರಾಕರಿಸಿದ್ದಾನೆ. ಆಗ ಕಮಲೇಶ್ ಕುಶ್ವಾಹ ಸಿಎಂ ಹೆಲ್ಪ್ ಲೇನ್ ಗೆ ಕರೆ ಮಾಡಿದ್ದಾನೆ ಎಂದು ಪಂಚಾಯತ್ ಸೆಕ್ರೆಟರಿ ರವೀಂದ್ರ ಶ್ರೀವಾಸ್ತವ್ ಹೇಳಿದ್ದಾರೆ.
ಈಗ ಡ್ಯಾಮೇಜ್ ಕಂಟ್ರೋಲ್ ಮಾಡಲು ಗ್ರಾಮ ಪಂಚಾಯತ್ ಒಂದು ಕೆಜಿ ಸ್ವೀಟ್ ಖರೀದಿಸಿ, ಕಮಲೇಶ್ ಕುಶ್ವಾಹಗೆ ನೀಡಿ ಕ್ಷಮೆ ಕೇಳಲು ನಿರ್ಧರಿಸಿದೆ. ಈ ಮೂಲಕ ಕಮಲೇಶ್ ಕುಶ್ವಾಹನನ್ನು ಸಮಾಧಾನಪಡಿಸಲು ಗ್ರಾಮ ಪಂಚಾಯತ್ ನಿರ್ಧರಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.