Advertisment

UPSC CSE 2025 ಅಂತಿಮ ಫಲಿತಾಂಶ ಪ್ರಕಟ: ಅನುಜ್ ಅಗ್ನಿಹೋತ್ರಿ ದೇಶಕ್ಕೆ ಟಾಪರ್..!

UPSC ನಡೆಸಿದ 2025ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ (CSE) ಅಂತಿಮ ಫಲಿತಾಂಶ ಇಂದು ಪ್ರಕಟವಾಗಿದ್ದು, ಅನುಜ್ ಅಗ್ನಿಹೋತ್ರಿ ಅಖಿಲ ಭಾರತ ಮಟ್ಟದಲ್ಲಿ ಮೊದಲನೇ ಱಂಕ್ ಪಡೆದು ಐಎಎಸ್ ಕನಸು ನನಸು ಮಾಡಿಕೊಂಡಿದ್ದಾರೆ. ರಾಜೇಶ್ವರಿ ಸುವೆ ಎಂ. ಅವರು ದ್ವಿತೀಯ ಸ್ಥಾನ ಪಡೆದು ಮಹಿಳಾ ಟಾಪರ್ ಆಗಿ ಹೊರಹೊಮ್ಮಿದ್ದಾರೆ.

author-image
Ganesh Kerekuli
upsc result (1)
Advertisment

ದೇಶದ ಅತ್ಯಂತ ಕಠಿಣ ಹಾಗೂ ಪ್ರತಿಷ್ಠಿತ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ನಾಗರಿಕ ಸೇವಾ ಪರೀಕ್ಷೆ 2025 (UPSC CSE 2025) ರ ಅಂತಿಮ ಫಲಿತಾಂಶವನ್ನು ಆಯೋಗವು ಮಾರ್ಚ್ 6ರಂದು ಪ್ರಕಟಿಸಿದೆ. ಈ ಬಾರಿ ಅನುಜ್ ಅಗ್ನಿಹೋತ್ರಿ (Anuj Agnihotri) ಅವರು ಅಖಿಲ ಭಾರತ ಮಟ್ಟದಲ್ಲಿ ಫಸ್ಟ್ ಱಂಕ್ (AIR 1) ಪಡೆದು ಇತಿಹಾಸ ನಿರ್ಮಿಸಿದ್ದಾರೆ.

Advertisment

ಅಭ್ಯರ್ಥಿಗಳು ಆಯೋಗದ ಅಧಿಕೃತ ವೆಬ್‌ಸೈಟ್‌ಗಳಾದ upsc.gov.in ಅಥವಾ upsconline.nic.in ಗೆ ಭೇಟಿ ನೀಡಿ ತಮ್ಮ ಫಲಿತಾಂಶವನ್ನು ವೀಕ್ಷಿಸಬಹುದು.

ಟಾಪ್ 3 ಸಾಧಕರು ಯಾರು?

  • ಅನುಜ್ ಅಗ್ನಿಹೋತ್ರಿ (Anuj Agnihotri) - 1ನೇ ಱಂಕ್
  • ರಾಜೇಶ್ವರಿ ಸುವೆ ಎಂ (Rajeshwari Suve M) - 2ನೇ ಱಂಕ್ (ಮಹಿಳಾ ಟಾಪರ್)
  • ಆಕಾಂಶ್ ಧುಲ್ (Akansh Dhull) - 3ನೇ ಱಂಕ್ 

ಅನುಜ್ ಅಗ್ನಿಹೋತ್ರಿ ಹಿನ್ನೆಲೆ ಏನು?

ದೇಶಕ್ಕೇ ಪ್ರಥಮ ಸ್ಥಾನ ಪಡೆದಿರುವ ಅನುಜ್ ಅಗ್ನಿಹೋತ್ರಿ ಅವರು ರಾಜಸ್ಥಾನದ ಜೋಧ್‌ಪುರ ಮೂಲದವರು. 2023ರಲ್ಲಿ ಜೋಧ್‌ಪುರದ ಪ್ರತಿಷ್ಠಿತ ಏಮ್ಸ್ (AIIMS Jodhpur) ನಲ್ಲಿ ಎಂಬಿಬಿಎಸ್ (MBBS) ಪದವಿ ಪೂರೈಸಿರುವ ಇವರು, ಪ್ರಸ್ತುತ ದೆಹಲಿ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ನಾಗರಿಕ ಸೇವೆಯಲ್ಲಿ (DANICS) ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ತವ್ಯದ ಜೊತೆಯಲ್ಲೇ ಕಠಿಣ ಪರಿಶ್ರಮ ಹಾಕಿ ಓದಿರುವ ಅವರು ಈಗ ಈ ಅತ್ಯುನ್ನತ ಸಾಧನೆ ಮಾಡಿದ್ದಾರೆ.

Advertisment

958 ಅಭ್ಯರ್ಥಿಗಳ ನೇಮಕಕ್ಕೆ ಶಿಫಾರಸು

ಆಯೋಗದ ಪ್ರಕಟಣೆಯ ಪ್ರಕಾರ, ಒಟ್ಟು 958 ಅಭ್ಯರ್ಥಿಗಳು ಐಎಎಸ್ (IAS), ಐಪಿಎಸ್ (IPS), ಐಎಫ್ಎಸ್ (IFS) ಹಾಗೂ ಕೇಂದ್ರ ಸರ್ಕಾರದ 'ಗ್ರೂಪ್ ಎ' ಮತ್ತು 'ಗ್ರೂಪ್ ಬಿ' ಸೇವೆಗಳಿಗೆ ಅಂತಿಮವಾಗಿ ಆಯ್ಕೆಯಾಗಿದ್ದಾರೆ. ಈ ಬಾರಿ ಒಟ್ಟು 1,087 ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಯುಪಿಎಸ್‌ಸಿ ಅಧಿಸೂಚನೆ ಹೊರಡಿಸಿತ್ತು.

ಪರೀಕ್ಷಾ ಪ್ರಕ್ರಿಯೆ ನಡೆದಿದ್ದು ಹೇಗೆ?

  • ಪೂರ್ವಭಾವಿ ಪರೀಕ್ಷೆ (Prelims): 2025ರ ಮೇ 25ರಂದು ನಡೆದಿತ್ತು.
  • ಮುಖ್ಯ ಪರೀಕ್ಷೆ (Mains): 2025ರ ಆಗಸ್ಟ್ 22 ರಿಂದ ಆಗಸ್ಟ್ 31ರವರೆಗೆ ನಡೆದಿತ್ತು.
  • ಸಂದರ್ಶನ (Personality Test): 2026ರ ಜನವರಿಯಲ್ಲಿ ನವದೆಹಲಿಯ ಯುಪಿಎಸ್‌ಸಿ ಕೇಂದ್ರ ಕಚೇರಿಯಲ್ಲಿ ಆರಂಭವಾಗಿದ್ದ
  • ಸಂದರ್ಶನ ಪ್ರಕ್ರಿಯೆಗಳು ಫೆಬ್ರವರಿ 27ರಂದು ಮುಕ್ತಾಯಗೊಂಡಿದ್ದವು. ಸಂದರ್ಶನ ಮುಕ್ತಾಯಗೊಂಡ ಕೇವಲ ಒಂದು ವಾರದ
  • ಅಂತರದಲ್ಲೇ ಯುಪಿಎಸ್‌ಸಿ ತ್ವರಿತವಾಗಿ ಅಂತಿಮ ಫಲಿತಾಂಶವನ್ನು ಪ್ರಕಟಿಸಿ ಅಚ್ಚರಿ ಮೂಡಿಸಿದೆ.

ಫಲಿತಾಂಶ ಚೆಕ್ ಮಾಡುವುದು ಹೇಗೆ?

  • ಯುಪಿಎಸ್‌ಸಿ ಅಧಿಕೃತ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
  • ಮುಖಪುಟದಲ್ಲಿ (Homepage) ಕಾಣುವ "Final Result: Civil Services Examination, 2025" ಲಿಂಕ್ ಮೇಲೆ ಕ್ಲಿಕ್ ಮಾಡಿ.
  • ಪರದೆಯ ಮೇಲೆ ಪಿಡಿಎಫ್ (PDF) ಫೈಲ್ ಒಂದು ತೆರೆದುಕೊಳ್ಳುತ್ತದೆ.
  • ಅದರಲ್ಲಿ ನಿಮ್ಮ ರೋಲ್ ನಂಬರ್ (Roll Number) ಅಥವಾ ಹೆಸರನ್ನು ಟೈಪ್ ಮಾಡುವ ಮೂಲಕ ಫಲಿತಾಂಶವನ್ನು
  • ಪರಿಶೀಲಿಸಬಹುದು ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದು.
Advertisment

ಇದನ್ನೂ ಓದಿ: ಯುವ ಜನತೆಯ ಕೌಶಾಲ್ಯಾಭಿವೃದ್ದಿಗೆ ಬಜೆಟ್ ನಲ್ಲಿ ಹತ್ತಾರು ಸ್ಕೀಮ್ ಪ್ರಸ್ತಾಪ: ಯುವನಿಧಿ ಯೋಜನೆಗೆ ಹಣ ಹಂಚಿಲ್ಲ!!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Civil Services Examination UPSC
Advertisment
Advertisment
Advertisment