/newsfirstlive-kannada/media/post_attachments/wp-content/uploads/2023/10/tirupathi.jpg)
ತಿರುಪತಿ ಲಡ್ಡುವಿನಲ್ಲಿ ನಕಲಿ ತುಪ್ಪ ಬಳಕೆ ದೃಢ ಎಂದ ಎಸ್‌ಐಟಿ!
ಆಂಧ್ರದ ತಿರುಮಲ ತಿರುಪತಿ ದೇವಸ್ಥಾನಕ್ಕೆ ನಕಲಿ ತುಪ್ಪ ಪೂರೈಕೆ ದೃಢಪಟ್ಟಿದೆ. ಸುಪ್ರೀಂಕೋರ್ಟ್ ರಚಿಸಿದ್ದ ಎಸ್‌ಐಟಿ ತನಿಖೆ ವೇಳೆ ನಕಲಿ ತುಪ್ಪ ಪೂರೈಕೆ ದೃಢಪಟ್ಟಿದೆ. 2019-2024 ರವರೆಗೆ ನಕಲಿ ತುಪ್ಪ ಪೂರೈಕೆ ದೃಢಪಟ್ಟಿದೆ ಎಂದು ಎಸ್‌ಐಟಿ ಅಧಿಕಾರಿಗಳು ಹೇಳಿದ್ದಾರೆ.
ಉತ್ತರಾಖಂಡ್ ರಾಜ್ಯದ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿಯಿಂದ ನಕಲಿ ತುಪ್ಪ ಪೂರೈಕೆ ಮಾಡಲಾಗಿದೆ. ಬರೋಬ್ಬರಿ 250 ಕೋಟಿ ರೂಪಾಯಿ ಮೌಲ್ಯದ ತುಪ್ಪದ ಬದಲು ನಕಲಿ ತುಪ್ಪ ಪೂರೈಕೆ ಮಾಡಲಾಗಿದೆ. ಈ ನಕಲಿ ತುಪ್ಪದಿಂದಲೇ ಟಿಟಿಡಿ ಲಡ್ಡು ತಯಾರಿಸಿ ಭಕ್ತರಿಗೆ ಹಂಚಿದೆ.
68 ಲಕ್ಷ ಕೆ.ಜಿ ನಕಲಿ ತುಪ್ಪವನ್ನು ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ಪೂರೈಕೆ ಮಾಡಿರುವ ಮಾಹಿತಿಯು ಎಸ್‌ಐಟಿಗೆ ಸಿಕ್ಕಿದೆ.
ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿ ರೈತರಿಂದ ನೇರವಾಗಿ ಹಾಲು ಸಂಗ್ರಹಿಸಿಲ್ಲ . ತುಪ್ಪವನ್ನು ಉತ್ಪಾದಿಸಿಯೂ ಇಲ್ಲ, ಆದರೇ ನಕಲಿ ತುಪ್ಪ ತಯಾರಿಸಿ ಪೂರೈಕೆ ಮಾಡಿದೆ!
ಪಾಮ್ ಆಯಿಲ್, ಪಾಮ್ ಕೆರನಲ್ ಆಯಿಲ್, ಹೈಡ್ರೋ ಜೆನೆಟೆಡ್ ಫ್ಯಾಟ್ಸ್ ನಿಂದ ನಕಲಿ ತುಪ್ಪ ತಯಾರಿಸಿದೆ.
ಬೇಟಾ ಕರಟೇನಿ ಮತ್ತು ಘೀ ಎಸೆನ್ಸ್ ಸೇರಿಸಿ ನಕಲಿ ತುಪ್ಪ ತಯಾರಿಕೆ ಮಾಡಲಾಗಿದೆ. ಕ್ವಾಲಿಟಿ ಟೆಸ್ಟ್ ಬೈಪಾಸ್ ಮಾಡಿ ಕಂಪನಿಯು ನಕಲಿ ತುಪ್ಪ ಪೂರೈಕೆ ಮುಂದುವರಿಸಿದೆ. ಕೆಮಿಕಲ್ ಬಳಸಿ ನಕಲಿ ತುಪ್ಪದಲ್ಲಿ ಆರ್‌ಎಂ ವ್ಯಾಲ್ಯೂ ಇದೆ ಎಂದು ಕಂಪನಿ ತೋರಿಸಿದೆ.
/filters:format(webp)/newsfirstlive-kannada/media/post_attachments/wp-content/uploads/2024/09/TIRUPATI_LADDU_CM.jpg)
ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರಿಸಿದ ಬಳಿಕವೂ ತುಪ್ಪ ಪೂರೈಕೆ ಮುಂದುವರಿದಿತ್ತು. 2022 ರಲ್ಲಿ ಭೋಲೆ ಬಾಬಾ ಆರ್ಗ್ಯಾನಿಕ್ ಡೈರಿಯನ್ನು ಬ್ಲಾಕ್ ಲಿಸ್ಟ್ ಗೆ ಸೇರ್ಪಡೆ ಮಾಡಲಾಗಿತ್ತು. ಬಳಿಕ ಆಂಧ್ರದ ವೈಷ್ಣವಿ ಡೈರಿ, ಮಾಲ್ ಗಂಗಾ ಡೈರಿ ಮೂಲಕ ನಕಲಿ ತುಪ್ಪ ಪೂರೈಕೆ ಮಾಡಲಾಗಿದೆ. ಜೊತೆಗೆ ತಮಿಳುನಾಡಿನ ಎ.ಆರ್. ಡೈರಿ ಪ್ರಾಡಕ್ಟ್ ಮೂಲಕ ನಕಲಿ ತುಪ್ಪ ಪೂರೈಕೆ ಮುಂದುವರಿಸಿದೆ.
ದಾಖಲೆ, ಇನ್ ವಾಯ್ಸ್ ಮತ್ತು ಇ- ಬಿಲ್ ಗಳನ್ನು ಫೇಕ್ ಆಗಿ ಸೃಷ್ಟಿಸಿ, ತುಪ್ಪದ ಮೂಲವನ್ನು ಕಂಪನಿಯು ಮರೆ ಮಾಚಿತ್ತು. ಸುಪ್ರೀಂಕೋರ್ಟ್ ತಿರುಪತಿ ಲಡ್ಡುವಿನಲ್ಲಿ ಹಂದಿ ಕೊಬ್ಬು ಬಳಸಲಾಗಿದೆ ಎಂಬ ಆರೋಪದ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿತ್ತು. ಸಿಬಿಐ, ಆಂಧ್ರದ ಪೊಲೀಸ್ ಒಳಗೊಂಡ ಎಸ್‌ಐಟಿ ರಚಿಸಿತ್ತು. ಈ ಎಸ್‌ಐಟಿ ತನಿಖೆಯ ವೇಳೆ ಈ ಹಿಂದಿನ ಟಿಟಿಡಿ ಅಧಿಕಾರಿಗಳು ಶಾಮೀಲಾಗಿ ನಕಲಿ ತುಪ್ಪ ಖರೀದಿ ಮಾಡಿರುವುದು ಬೆಳಕಿಗೆ ಬಂದಿದೆ. ಈಗಾಗಲೇ ಈ ಹಿಂದಿನ ಟಿಟಿಡಿ ಅಧ್ಯಕ್ಷ ಸುಬ್ಬಾರೆಡ್ಡಿ ಆಪ್ತನನ್ನು ಎಸ್‌ಐಟಿ ಬಂಧಿಸಿದೆ.
/filters:format(webp)/newsfirstlive-kannada/media/post_attachments/wp-content/uploads/2023/10/tirupathi-1.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us