/newsfirstlive-kannada/media/media_files/2025/10/26/up_snake_boy-2025-10-26-13-20-31.jpg)
ಲಕ್ನೋ: ಹಾವು ಕಚ್ಚಿ ಮೃತಪಟ್ಟಿದ್ದ 4ನೇ ತರಗತಿ ಬಾಲಕನನ್ನು ಬದುಕಿಸಲು ಪೋಷಕರು ಮೂರು ದಿನ ಬೇವಿನ ಎಲೆ ಹಾಗೂ ಸಗಣಿಯಿಂದ ಮುಚ್ಚಿಟ್ಟಿದ್ದಾರೆ. ಕೊನೆಗೆ ಪೊಲೀಸರಿಗೆ ವಿಷಯ ಗೊತ್ತಾಗಿ ಅಂತಿಮ ಸಂಸ್ಕಾರ ನಡೆಸಿ ಈ ಬಗ್ಗೆ ತನಿಖೆ ಕೈಗೊಂಡಿದ್ದಾರೆ. ಈ ಘಟನೆಯು ಉತ್ತರ ಪ್ರದೇಶದ ಆಗ್ರಾ ನಗರದ ಹತ್ರಾಸ್‌ನ ಹಸಾಯನ್ ಪ್ರದೇಶದ ಇಟಾರ್ನಿ ಗ್ರಾಮದಲ್ಲಿ ನಡೆದಿದೆ.
ಆಗ್ರಾದ ಇಟಾರ್ನಿ ಗ್ರಾಮದ ನರೇಂದ್ರ ಜಾತವ್ ಮಗ ಕಪಿಲ್ ಜಾತವ್ (10) ಮೃತಪಟ್ಟ ಬಾಲಕ. ಕಪಿಲ್​ಗೆ ಅಕ್ಟೋಬರ್​ 20, ದೀಪಾವಳಿಯ ರಾತ್ರಿ ವೇಳೆ ಮನೆಯ ಬಳಿಯೇ ಹಾವೊಂದು ಕಚ್ಚಿತ್ತು. ತಕ್ಷಣವೇ ಮಗನನ್ನು ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದರೆ ವೈದ್ಯರು ಈಗಾಗಲೇ ಮಗುವಿನ ಜೀವ ಹೋಗಿದೆ ಎಂದು ಹೇಳಿದ್ದರು.
ಮಗನ ಶವದೊಂದಿಗೆ ಮನೆಗೆ ಬಂದಿದ್ದ ಪೋಷಕರಿಗೆ ಅಕ್ಕಪಕ್ಕದ ಮನೆಯವರು ಮಥುರಾದಲ್ಲಿನ ಮಂತ್ರವಾದಿಗಳ ಬಳಿಗೆ ಹೋದರೆ ಬದುಕಬಹುದು ಎಂದು ತಿಳಿಸಿದ್ದಾರೆ. ಅದಕ್ಕೆ ಪೋಷಕರು ಅಲ್ಲಿಗೆ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಆದರೆ ಮಂತ್ರವಾದಿಗಳ ಪ್ರಯತ್ನಗಳೆಲ್ಲಾ ವಿಫಲವಾಗಿದ್ದರಿಂದ ಮಗನನ್ನು ವಾಪಸ್​ ಊರಿಗೆ ತಂದಿದ್ದರು.
ಇದನ್ನೂ ಓದಿ: ನೀರಲ್ಲಿ ಮುಳುಗುತ್ತಿದ್ದವನ್ನ ಕಾಪಾಡಿ ವರುಣ ನಾಲೆಯಲ್ಲಿ ಜೀವ ಬಿಟ್ಟ ಅಣ್ಣ-ತಮ್ಮ
/filters:format(webp)/newsfirstlive-kannada/media/media_files/2025/10/26/up_snake_boy_1-2025-10-26-13-20-41.jpg)
ಆದರೂ ಬದುಕ ಬಹುದು ಎನ್ನುವ ಕೊನೆ ಆಸೆಯಿಂದ ಮಗನ ಮೃತದೇಹವನ್ನು ಊರಿನ ಹೊರಗಿನ ಪ್ರದೇಶವೊಂದರಲ್ಲಿ ಬೇವಿನ ಎಲೆಗಳು ಹಾಗೂ ಸಗಣಿಯಿಂದ ಮೂರು ದಿನಗಳ ಕಾಲ ಮುಚ್ಚಿಟ್ಟಿದ್ದಾರೆ. ಅಲ್ಲದೇ ಮಗನ ಕಾಲುಗಳಿಗೆ ಕೋಲುಗಳಿಂದ ಜೋರು ಜೋರಾಗಿ ಹೊಡೆದಿದ್ದಾರೆ. ಆದರೆ ಮಗ ಮಾತ್ರ ಬದುಕಿ ಬರಲಿಲ್ಲ. ಈ ಎಲ್ಲ ವಿಷ್ಯವನ್ನು ಯಾರೋ ಪೊಲೀಸರಿಗೆ ತಿಳಿಸಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮರಣೋತ್ತರ ಪರೀಕ್ಷೆ ಮುಗಿದ ಮೇಲೆ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಸಂಬಂಧ ಯಾರೂ ಕೂಡ ಕೇಸ್ ದಾಖಲಿಸಿಲ್ಲವಾದರೂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇನ್ನು ಮೃತ ಬಾಲಕನ ತಂದೆ ನರೇಂದ್ರ ಜಾತವ್ ದಿನಗೂಲಿ ಕೆಲಸಗಾರನಾಗಿದ್ದು ಮೂವರು ಮಕ್ಕಳು ಇದ್ದಾರೆ. ಹಾವು ಕಚ್ಚಿ ಮೃತಪಟ್ಟ ಬಾಲಕ ಅದೇ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದನು ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us