/newsfirstlive-kannada/media/media_files/2025/09/22/up_lover-2025-09-22-23-31-10.jpg)
ಲಕ್ನೋ: ಇನ್​ಸ್ಟಾಗ್ರಾಮ್​ನಲ್ಲಿ ಅರಳಿದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದೆ.
ರೆಸ್ಟೋರೆಂಟ್​​ನಲ್ಲಿ ಕೆಲಸ ಮಾಡುವ ಯುವತಿ ಆಕಾಂಕ್ಷಾ ಹಾಗೂ ಎಲೆಕ್ಟ್ರಿಷಿಯನ್ ಆಗಿದ್ದ ಸುರಾಜ್ ಕುಮಾರ್ ಉತ್ತಮ್ ಈ ಇಬ್ಬರು ಇನ್​ಸ್ಟಾಗ್ರಾಮ್​ನಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಪ್ರೀತಿ ಅರಳಿತ್ತು. ಆಗಾಗ ರೆಸ್ಟೋರೆಂಟ್​ಗೆ ಹೋಗಿ ಮಾತನಾಡುತ್ತಿದ್ದನು. ಇದು ಅಲ್ಲದೇ ಫೋನ್​ನಲ್ಲೂ ಮಾತನಾಡುತ್ತ ಬಳಿಕ ಇಬ್ಬರು ಲಿವಿಂಗ್​​ ಟುಗೆದರ್​ನಲ್ಲಿ ಒಟ್ಟಿಗೆ ಬದುಕಲು ಪ್ರಾರಂಭಿಸಿದ್ದರು. ಇತ್ತೀಚೆಗೆ ಅಂದರೆ ಎರಡು ತಿಂಗಳ ಹಿಂದೆ ಯುವತಿ ಬಗ್ಗೆ ಸುರಾಜ್ ಕುಮಾರ್​ಗೆ ಅನುಮಾನ ಮೂಡಿತ್ತು.
ಯುವತಿ, ಬೇರೊಬ್ಬನ ಜೊತೆ ಮಾತನಾಡುತ್ತಿದ್ದಾಳೆ ಎಂದು ಶಂಕೆ ವ್ಯಕ್ತಪಡಿಸಿದ್ದನು. ಇದರಿಂದ ಕಳೆದ ಎರಡು ತಿಂಗಳಿನಿಂದ ಇಬ್ಬರ ನಡುವೆ ಸಂಬಂಧ ಅಳಿಸಿ ಹೋಗಿ, ಹಿಂಸೆಗೆ ತಿರುಗಿತ್ತು. ಹೀಗಾಗಿ ಜುಲೈ 21 ರಂದು ಗಲಾಟೆಯಲ್ಲಿ ಆಕಾಂಕ್ಷಾಳ ತಲೆಯನ್ನು ಗೋಡೆಗೆ ಬಲವಾಗಿ ಇರಿದಿದ್ದನು. ಇದಾದ ಮೇಲೆ ಆಕೆಯ ಕತ್ತು ಹಿಸುಕಿ ಜೀವ ತೆಗೆದುಬಿಟ್ಟಿದ್ದನು. ಈ ಕೃತ್ಯವನ್ನು ಮುಚ್ಚಿಡಲು ಆರೋಪಿಯು ತನ್ನ ಸ್ನೇಹಿತ ಆಶಿಶ್ ಕುಮಾರ್ ಸಹಾಯ ಪಡೆದಿದ್ದನು ಎಂದು ಹೇಳಲಾಗಿದೆ.
ಈ ಇಬ್ಬರು ಸೇರಿ ಯುವತಿಯ ಮೃತದೇಹವನ್ನು ಬ್ಯಾಗ್​​ವೊಂದರಲ್ಲಿ ತುಂಬಿಕೊಂಡು ಬೈಕ್​ ಮೂಲಕ 100 ಕಿಲೋ ಮೀಟರ್​ ದೂರದ ಬಂಡಾ ಪ್ರದೇಶಕ್ಕೆ ರವಾನೆ ಮಾಡಿದ್ದರು. ಮೃತದೇಹವನ್ನು ಯಮುನಾ ನದಿಗೆ ಎಸೆಯಲು ಪ್ಲಾನ್ ಮಾಡಿದ್ದರು. ಆದರೆ ಇದಕ್ಕೂ ಮೊದಲು ಆರೋಪಿಯು ಮೃತದೇಹ ಇರುವ ಬ್ಯಾಗ್​ ಜೊತೆ ಸೆಲ್ಫಿ ಫೋಟೋ ತೆಗೆದುಕೊಂಡಿದ್ದನು ಎನ್ನುವುದು ತನಿಖೆಯಿಂದ ತಿಳಿದು ಬಂದಿದೆ.
ಈ ಕೃತ್ಯ ಬಯಲಿಗೆ ಬಂದಿದ್ದು ಹೇಗೆ?
ಆಗಸ್ಟ್​ 8 ರಂದು ಯುವತಿಯ ತಾಯಿ ಪೊಲೀಸ್​ ಠಾಣೆಗೆ ಸುರಾಜ್ ಕುಮಾರ್ ವಿರುದ್ಧ ಪ್ರಕರಣ ದಾಖಲು ಮಾಡಿದ್ದರು. ನನ್ನ 20 ವರ್ಷದ ಮಗಳನ್ನು ಸುರಾಜ್ ಕಿಡ್ನಾಪ್ ಮಾಡಿದ್ದಾನೆ ಎಂದು ಆರೋಪಿಸಿ ಕೇಸ್ ಹಾಕಿದ್ದರು. ಈ ಸಂಬಂಧ ಸೂರಾಜ್ ಹಾಗೂ ಸ್ನೇಹಿತನನ್ನ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಎಲ್ಲ ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾರೆ. ಸದ್ಯ ಪೊಲೀಸರು ಸೆಲ್ಫಿ ಫೋಟೋವನ್ನು ಅವನಿಂದ ಪಡೆದುಕೊಂಡು, ಮೊಬೈಲ್ ಅನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕೃತ್ಯ ನಡೆಸಿದ್ದಕ್ಕಾಗಿ ಇಬ್ಬರನ್ನು ಜೈಲಿಗೆ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ವಿಚಾರಣೆಯಲ್ಲಿ ಮೊದಲು ಆರೋಪಿಯು ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದನು. ಆದರೆ ಫೋನ್ ಕಾಲ್ ಡಿಟೇಲ್ಸ್​ ಬಗ್ಗೆ ಹೇಳಿದಾಗ ಸತ್ಯ ಬಾಯಿ ಬಿಟ್ಟಿದ್ದಾನೆ. ಇಬ್ಬರು ಮೊದಲು ಇನ್​​ಸ್ಟಾದಲ್ಲೇ ಪರಿಚಯವಾಗಿ ನಂತರ ಪ್ರೀತಿ ಮಾಡುತ್ತಿದ್ದೇವು. ಆಗಾಗ ರೆಸ್ಟೋರೆಂಟ್​ಗೆ ಹೋಗಿ ಮಾತನಾಡುತ್ತಿದ್ದೆ. ಅವರ ಸಹೋದರಿ ಜೊತೆ ಕಾನ್ಪುರದ ಬರ್ರಾದಲ್ಲಿ ವಾಸ ಮಾಡುತ್ತಿದ್ದಳು. ನಾನು ಪರಿಚಯವಾದ ಮೇಲೆ ಹನುಮಂತ ವಿಹಾರಕ್ಕೆ ನನ್ನ ಜೊತೆ ಆಕಾಂಕ್ಷಾ ಬಂದಳು ಎಂದು ಆರೋಪಿ ಹೇಳಿದ್ದಾನೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ