ಉತ್ತರಾಖಂಡದಲ್ಲಿ ಭೀಕರ ಮೇಘಸ್ಫೋಟ ಸಂಭವಿಸಿದ್ದು 60ಕ್ಕೂ ಹೆಚ್ಚು ಜನರು ಜಲಸಮಾಧಿ ಆಗಿದ್ದಾರೆ ಎನ್ನುವ ಅನುಮಾನ ಇದೆ. ಧರಾಲಿಯದಲ್ಲಿ ಸಾಕಷ್ಟು ಜನರು ನಾಪತ್ತಯಾಗಿದ್ದಾರೆ. 25ಕ್ಕೂ ಹೆಚ್ಚು ಮನೆಗಳು, ಹೋಟೆಲ್​ಗಳು, ಕಟ್ಟಡಗಳು ಮೇಘಸ್ಫೋಟದಿಂದ ನಾಶವಾಗಿವೆ. ಇದರ ನಡುವೆ ಎನ್​​ಡಿಆರ್​ಎಫ್​, ಎಸ್​ಡಿಆರ್​ಎಫ್ ತಂಡಗಳು ರಕ್ಷಣಾ ಕಾರ್ಯ ನಡೆಸುತ್ತಿವೆ ಎಂದು ಹೇಳಲಾಗಿದೆ.
ನದಿಯ ಎರಡು ಭಾಗದಲ್ಲಿ ಮನೆಗಳು, ಹೋಟೆಲ್​ಗಳು ಇದ್ದವು. ಭಾರೀ ಪ್ರಮಾಣದಲ್ಲಿ ನೀರು ರಭಸವಾಗಿ ನುಗ್ಗಿದ್ದರಿಂದ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಇದರಲ್ಲಿ ಎಷ್ಟು ಜನರು ಜೀವ ಕಳೆದುಕೊಂಡಿದ್ದಾರೆ, ಎಷ್ಟು ಜನ ನಾಪತ್ತೆ ಆಗಿದ್ದಾರೆ ಎನ್ನುವುದು ಯಾರಿಗೂ ಸ್ಪಷ್ಟವಾಗಿಲ್ಲ. ವಾಹನಗಳು ಹೂತು ಹೋಗಿವೆ. ಮನೆಯಲ್ಲಿ ಇದ್ದವರು ಏನಾಗಿದ್ದಾರೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ. ರಕ್ಷಣಾ ತಂಡ ಸ್ಥಳಕ್ಕೆ ಹೋಗಬೇಕು ಎಂದರೆ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ ಎಂದು ಹೇಳಲಾಗಿದೆ.
ಮರದ ದಿಮ್ಮಿಗಳ ಜೊತೆಗೆ ಮಣ್ಣುನೀರು ಹರಿದು ಬಂದಿದ್ದರಿಂದ ಎಲ್ಲವೂ ಕೊಚ್ಚಿಕೊಂಡು ಹೋಗಿವೆ. ಉತ್ತರಾಖಂಡ ಸರ್ಕಾರ ಈ ಬಗ್ಗೆ ಮಾಹಿತಿ ಪಡೆಯುತ್ತಿದೆ. ಸಿಎಂ ಪುಷ್ಕರ್ ಚಂದ್ ಧಾಮಿ ಅವರು ಎಲ್ಲರು ಸುರಕ್ಷಿತವಾಗಿರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ. ಆದರೆ ಭಾರೀ ಪ್ರಮಾಣದಲ್ಲಿ ಹಾನಿಯಾದಿದೆ ಎನ್ನುವ ಮಾಹಿತಿ ಸಿಕ್ಕಿದೆ. ಇದು ತುಂಬಾ ದುಃಖಕರ ವಿಷಯ ಎಂದು ಸಿಎಂ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
 Follow Us