/newsfirstlive-kannada/media/media_files/2025/12/02/vladimir-putin-aircraft-10-2025-12-02-11-20-40.jpg)
/newsfirstlive-kannada/media/media_files/2025/12/02/vladimir-putin-aircraft-8-2025-12-02-11-21-06.jpg)
ಡಿ 4 ಮತ್ತು 5ರಂದು ಭಾರತಕ್ಕೆ ಭೇಟಿ
ಡಿಸೆಂಬರ್ 4 ಮತ್ತು 5ರಂದು ರಷ್ಯಾ ಅಧ್ಯಕ್ಷ ಪುಟಿನ್ ಭಾರತಕ್ಕೆ ಬರಲಿದ್ದಾರೆ. ಭಾರತ, ರಷ್ಯಾ ನಡುವಿನ 23ನೇ ವಾರ್ಷಿಕ ಶೃಂಗಸಭೆಗಾಗಿ ಭಾರತಕ್ಕೆ ಬರುತ್ತಿದ್ದಾರೆ. ಭಾರತ ಭೇಟಿ ವೇಳೆ ಹಲವು ಒಪ್ಪಂದಗಳಿಗೆ ಸಹಿ ಸಾಧ್ಯತೆ ಹಿನ್ನೆಲೆ ಪುಟಿನ್ ಭೇಟಿ ಜಾಗತಿಕವಾಗಿ ಮಹತ್ವದ್ದು ಎನಿಸಿದೆ.
/newsfirstlive-kannada/media/media_files/2025/12/02/vladimir-putin-aircraft-9-2025-12-02-11-21-40.jpg)
ರಷ್ಯಾದ ಭದ್ರತಾ ಸಂಸ್ಥೆಗಳು ಭಾರತಕ್ಕೆ ಆಗಮನ
ಪುಟಿನ್ ಭೇಟಿ ಹಿನ್ನೆಲೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ರಷ್ಯಾದ ಭದ್ರತಾ ಸಂಸ್ಥೆಗಳು ಸಹ ಭಾರತಕ್ಕೆ ಆಗಮಿಸಿವೆ. ಯಾವುದೇ ರಾಷ್ಟ್ರದ ಮುಖ್ಯಸ್ಥರು ಆಗಮಿಸಿದಾಗ ವಿಶೇಷ ಭದ್ರತಾ ಶಿಷ್ಟಾಚಾರ ಅನುಸರಿಸಲಾಗುತ್ತದೆ. ಆದರೂ ಪುಟಿನ್ ಅವರ ಭದ್ರತೆ ಸ್ವಲ್ಪ ಭಿನ್ನವಾಗಿದೆ. ಅವರ ಆಹಾರ, ಪಾನೀಯಗಳ ಜೊತೆ ತಮ್ಮದೇ ಆದ ಪೋರ್ಟಬಲ್ ಶೌಚಾಲಯ ಸಹ ಹೊತ್ತು ತರುತ್ತಾರೆ.
/newsfirstlive-kannada/media/media_files/2025/12/02/vladimir-putin-aircraft-6-2025-12-02-11-22-16.jpg)
ಐಷಾರಾಮಿ ವಿಮಾನ
ಪುಟಿನ್ ಪ್ರಯಾಣಕ್ಕೆ 390 ಮಿಲಿಯನ್ ಡಾಲರ್ ಮೌಲ್ಯದ ಐಷಾರಾಮಿ ವಿಮಾನವಿದೆ. ಈ ವಿಮಾನ ಎಲ್ಲಾ ರೀತಿಯ ವಾಯು, ಭೂ ದಾಳಿಯಿಂದ ಬರುವ ಬೆದರಿಕೆಗಳನ್ನ ತಡೆದುಕೊಳ್ಳುವ ಶಕ್ತಿ ಹೊಂದಿದೆ. ಪ್ರಯಾಣದ ವೇಳೆ ಯಾವುದೇ ಬೆದರಿಕೆ ಎದುರಿಸಲು ಪುಟಿನ್ ವಿಮಾನವನ್ನು ರಷ್ಯಾದ ಯುದ್ಧ ವಿಮಾನಗಳು ಸುತ್ತುವರೆದಿರುತ್ತವೆ. ಈ ಐಷಾರಾಮಿ ವಿಮಾನದಲ್ಲಿ ಮತ್ತೊಂದು ವಿಶೇಷವಿದೆ. ಪುಟಿನ್ ವಿಮಾನದಲ್ಲಿನ ಚಿನ್ನದ ಲೇಪಿತ ಶೌಚಾಲಯದ ಆಸನ ಹೊಂದಿದೆ.
/newsfirstlive-kannada/media/media_files/2025/12/02/vladimir-putin-aircraft-7-2025-12-02-11-22-46.jpg)
ಪುಟಿನ್ ಐಷಾರಾಮಿ ಜೆಟ್ನ ವಿಶೇಷತೆ
ಒಂದು ವರದಿಯ ಪ್ರಕಾರ ಪುಟಿನ್ ವಿಮಾನದ ಒಳಭಾಗ ಅರಮನೆಯಂತೆ ಇದೆ. ಇದು ಚರ್ಮದ ಪೀಠೋಪಕರಣಗಳನ್ನ ಹೊಂದಿದೆ. ಗೋಡಂಬಿ ಮರದ ತೆಳುವಾದ ಶೀಟ್ ಇದೆ. ಚಿನ್ನದ ಕೆತ್ತನೆಗಳನ್ನ ಸಹ ಹೊಂದಿದೆ. ಇದರಲ್ಲಿ ಖಾಸಗಿ ಕಚೇರಿಗಳು, ಸಮ್ಮೇಳನ ಕೊಠಡಿಗಳನ್ನ ಒಳಗೊಂಡಿದೆ. ಈ ವಿಮಾನದಲ್ಲಿ ವಿಶ್ರಾಂತಿ ಕೊಠಡಿಗಳು, ಮಿನಿ ಜಿಮ್, ಊಟದ ಹಾಲ್, ಬಾರ್, ಶವರ್, ವೈದ್ಯಕೀಯ ಕೊಠಡಿ ಸಹ ಒಳಗೊಂಡಿದೆ.
/newsfirstlive-kannada/media/media_files/2025/12/02/vladimir-putin-aircraft-5-2025-12-02-11-23-15.jpg)
ದುಬಾರಿ ವಿಮಾನ
ಪುಟಿನ್ ರಷ್ಯಾದ ಇತರ ನಾಯಕರಿಗಿಂತ ಅತಿ ಹೆಚ್ಚು ಬಾರಿ ವಿಮಾನ ಪ್ರಯಾಣ ಮಾಡಿದ್ದಾರೆ. ಪುಟಿನ್ ಅವರ ಐಶಾರಾಮಿ ವಿಮಾನ ನಿರ್ಮಿಸಿದ್ದು ವೊರೊನಿಶ್ ಏರ್ಕ್ರಾಫ್ಟ್ ಪ್ರೊಡಕ್ಷನ್ ಅಸೋಸಿಯೇಷನ್ ನಿರ್ಮಿಸಿದೆ.
/newsfirstlive-kannada/media/media_files/2025/12/02/vladimir-putin-aircraft-4-2025-12-02-11-23-44.jpg)
ಈ ವಿಮಾನದ ಗರಿಷ್ಟ ವೇಗ ಗಂಟೆಗೆ 900 ಕಿಮೀ. ಇದರ ಇಂಧನ ಸಾಮರ್ಥ್ಯ 1.50 ಲಕ್ಷ ಲೀಟರ್. ಇದು ನಿರಂತರವಾಗಿ 13.500 ಕಿಮೀಗಳಷ್ಟು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ.
/newsfirstlive-kannada/media/media_files/2025/12/02/vladimir-putin-aircraft-3-2025-12-02-11-24-02.jpg)
ಪುಟಿನ್ ರಕ್ಷಣೆಗಿದೆ ಅದೃಶ್ಯ ಸೇನೆ
ವರದಿಯ ಪ್ರಕಾರ ಪುಟಿನ್ ಎಲ್ಲೆಲ್ಲಿ ಪ್ರಯಾಣಿಸುತ್ತಾರೋ ಅವರ ಮುಂದು ಒಂದು ಅದೃಶ್ಯ ಸೈನ್ಯ ನಿಯೋಜಿಸಲಾಗುತ್ತದೆ ಅಂತೆ. ಅವರು ಸಾಮಾನ್ಯ ನಾಗರಿಕರೊಂದಿಗೆ ಬೆರೆಯುತ್ತಾರಂತೆ.
/newsfirstlive-kannada/media/media_files/2025/12/02/vladimir-putin-aircraft-2-2025-12-02-11-24-29.jpg)
2022ರಲ್ಲಿ ಜಪಾನ್ ಪ್ರಧಾನಿ ಶಿಂಜೋ ಅಬೆ ಹತ್ಯೆ ಬಳಿಕ ಪುಟಿನ್ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ ಅಂತ ರಷ್ಯಾದ ಅಧಿಕಾರಿಗಳು ಹೇಳುತ್ತಾರೆ. -ವಿಶೇಷ ವರದಿ: ವಿಶ್ವನಾಥ್ ಜಿ
/newsfirstlive-kannada/media/media_files/2025/12/02/vladimir-putin-aircraft-1-2025-12-02-11-25-32.jpg)
/newsfirstlive-kannada/media/media_files/2025/12/02/vladimir-putin-aircraft-2025-12-02-11-25-49.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us