ಇಥಿಯೋಪಿಯಾದಲ್ಲಿ ಜ್ವಾಲಾಮುಖಿ ಸ್ಪೋಟ: ಭಾರತದಲ್ಲಿ ವಿಮಾನ ಸಂಚಾರ ರದ್ದುಗೆ ಸಂಬಂಧವೇನು?

ಆಫ್ರಿಕಾ ಖಂಡದ ಇಥಿಯೋಪಿಯಾದಲ್ಲಿ ಮೊನ್ನೆ ಹೈಲಿ ಗುಬ್ಬಿ ಹೆಸರಿನ ಜ್ವಾಲಾಮುಖಿ ಸ್ಪೋಟವಾಗಿದೆ. ಇಥಿಯೋಪಿಯಾಗೂ ಭಾರತಕ್ಕೂ 4 ಸಾವಿರ ಕಿಲೋಮೀಟರ್ ದೂರ ಇದೆ. ಆದರೇ, ಇಥಿಯೋಪಿಯಾದಿಂದ ಜ್ವಾಲಾಮುಖಿಯ ಬೂದಿ ಭಾರತದವರೆಗೂ ಗಾಳಿಯಲ್ಲಿ ಬಂದಿದೆ. ಭಾರತದಲ್ಲಿ ವಿಮಾನ ಸಂಚಾರ ರದ್ದುಪಡಿಸಲಾಗುತ್ತಿದೆ.

author-image
Chandramohan
ETIOPIA VOLCANO ERUPTED

ಇಥಿಯೋಪಿಯಾ ದೇಶದಲ್ಲಿ ಜ್ವಾಲಾಮುಖಿ ಸ್ಪೋಟ

Advertisment
  • ಇಥಿಯೋಪಿಯಾ ದೇಶದಲ್ಲಿ ಜ್ವಾಲಾಮುಖಿ ಸ್ಪೋಟ
  • 4 ಸಾವಿರ ಕಿ.ಮೀ. ದೂರದ ಭಾರತದವರೆಗೂ ಬಂದ ಜ್ವಾಲಾಮುಖಿ ಬೂದಿ
  • ಜ್ವಾಲಾಮುಖಿ ಬೂದಿಯಿಂದ ಭಾರತದಲ್ಲಿ ವಿಮಾನಗಳ ಸಂಚಾರ ರದ್ದು!

ಇಥಿಯೋಪಿಯಾದಲ್ಲಿ ಮೊನ್ನೆ ( ನವಂಬರ್‌ 23) ಹೈಲಿ ಗುಬ್ಬಿ  ಎಂಬ ಜ್ವಾಲಾಮುಖಿ ಸ್ಪೋಟಿಸಿದೆ. ಜ್ವಾಲಾಮುಖಿ ಸ್ಪೋಟದ ಬಳಿಕ ಅದರ ಬೂದಿಯು 4 ಸಾವಿರ ಕಿಲೋಮೀಟರ್ ದೂರದ ಉತ್ತರ ಭಾರತದವರೆಗೂ ಬಂದಿವೆ. ಇದರಿಂದಾಗಿ ಉತ್ತರ ಭಾರತ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ವಿಮಾನ ಹಾರಾಟಕ್ಕೆ ತೊಂದರೆಯಾಗಿದೆ. ಕೆಲವು ವಿಮಾನಗಳ ಸಂಚಾರವನ್ನು ರದ್ದುಪಡಿಸಲಾಗಿದೆ.  ಜ್ವಾಲಾಮುಖಿಯ ಬೂದಿಯಿಂದ ಆಗುವ ಸಂಭಾವ್ಯ ತೊಂದರೆಗಳ ಮೇಲೆ ನಿಗಾ ವಹಿಸಲು ವಿಮಾನಯಾನ ಸಂಸ್ಥೆಗಳು ವಿಮಾನದ ಪೈಲಟ್ ಗೆ ಸೂಚಿಸಿದ್ದಾರೆ. ವಿಮಾನಗಳ ಇಂಜಿನ್ ಕಾರ್ಯದಕ್ಷತೆ ಪರೀಕ್ಷಿಸಲು ಮತ್ತು ವಿಮಾನದ ಕ್ಯಾಬಿನ್ ನಲ್ಲಿ ಬೂದಿಯ ಅಂಶ ಕಂಡು ಬಂದರೇ, ತಕ್ಷಣವೇ ವರದಿ ನೀಡುವಂತೆ ವಿಮಾನಯಾನ ಸಂಸ್ಥೆಗಳು ಪೈಲಟ್ ಗಳಿಗೆ ಸೂಚಿಸಿವೆ.  ಭಾರತದ ಡಿಜಿಸಿಎ ಕೂಡ ವಿಮಾನಯಾನ ಸಂಸ್ಥೆಗಳು ಮತ್ತು ಪೈಲಟ್ ಗಳಿಗೆ ಆಲರ್ಟ್ ಆಗಿರುವಂತೆ ಸೂಚಿಸಿದೆ.  ಜ್ವಾಲಾಮುಖಿಯ ಬೂದಿ ಕಂಡು ಬಂದ ಹಿನ್ನಲೆಯಲ್ಲಿ ಸೋಮವಾರ ಕೇರಳದ  ಕಣ್ಣೂರಿನಿಂದ ಅಬುಧಾಬಿಗೆ ತೆರಳುತ್ತಿದ್ದ ವಿಮಾನವನ್ನು ಅಹಮದಾಬಾದ್ ನಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡಲಾಗಿದೆ. ಆಕಾಶ್ ಏರ್, ಇಂಡಿಗೋ ಸೇರಿದಂತೆ ಕೆಲ ವಿಮಾನಯಾನ ಸಂಸ್ಥೆಗಳು ವಿಮಾನಗಳ ಹಾರಾಟವನ್ನು ರದ್ದುಪಡಿಸಿವೆ. ಜ್ವಾಲಾಮುಖಿಯ ಬೂದಿಯು ಮಧ್ಯಪ್ರಾಚ್ಯದಲ್ಲಿ ವಾಯು ಮಾಲಿನ್ಯಕ್ಕೆ ಕಾರಣವಾಗಿದೆ.

ETHIOPIA VOLCANO ERUPTED AND DISRUPT FLIGHT OPERATION IN INDIA
Advertisment