/newsfirstlive-kannada/media/media_files/2025/11/22/marriage-at-hospital-bed-2025-11-22-14-28-38.jpg)
ಆಸ್ಪತ್ರೆಯ ಬೆಡ್ ಮೇಲೆಯೇ ಯುವತಿಗೆ ತಾಳಿ ಕಟ್ಟಿ ವಿವಾಹವಾದ ಯುವಕ!
ಕೇರಳದಲ್ಲಿ ಕಲ್ಯಾಣ ಮಂಟಪದಲ್ಲಿ ಮದುವೆಯಾಗಬೇಕಾದವರು, ಕೊನೆಗೆ ಆಸ್ಪತ್ರೆಯ ವಾರ್ಡ್ ನಲ್ಲೇ ವಿವಾಹವಾಗಿದ್ದಾರೆ.ಆಸ್ಪತ್ರೆಯ ಬೆಡ್ ಮೇಲೆ ಮಲಗಿದ್ದ ಯುವತಿಗೆ ಅಲ್ಲೇ ಬಂದು ಯುವಕ ತಾಳಿ ಕಟ್ಟಿದ್ದಾನೆ. ಕೇರಳದ ಕೊಚ್ಚಿಯ ಖಾಸಗಿ ಆಸ್ಪತ್ರೆಯ ಎಮರ್ಜೆನ್ಸಿ ವಾರ್ಡ್ ಬೆಡ್ ಮೇಲೆ ಯುವತಿ ಅವನಿಗೆ ಯುವಕ ತಾಳಿ ಕಟ್ಟಿ ವಿವಾಹವಾಗಿದ್ದಾನೆ. ಮದುವೆಗೂ ಕೆಲ ಗಂಟೆಗೂ ಮುನ್ನ ಆಕ್ಸಿಡೆಂಟ್ ನಲ್ಲಿ ಯುವತಿಯ ಬೆನ್ನು ಮೂಳೆಗೆ ಗಾಯವಾಗಿತ್ತು. ಆಸ್ಪತ್ರೆಗೆ ದಾಖಲಿಸಿ ಯುವತಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಕೇರಳದ ಆಲಪುಜ್ಜದಲ್ಲಿ ನಡೆಯಬೇಕಾಗಿದ್ದ ಮದುವೆಯನ್ನು ಕೊಚ್ಚಿ ಆಸ್ಪತ್ರೆಯ ಬೆಡ್ ಮೇಲೆಯೇ ಮಾಡಲು ಯುವಕ ಮತ್ತು ಯುವತಿ ಕಡೆಯವರಿಬ್ಬರೂ ಒಪ್ಪಿದ್ದರು. ಆಸ್ಪತ್ರೆಯ ವೈದ್ಯರು ಒಪ್ಪಿದ್ದರು. ಹೀಗಾಗಿ ಆಸ್ಪತ್ರೆಯ ಬೆಡ್ ಮೇಲೆಯೇ ಯುವಕ, ಯುವತಿಗೆ ತಾಳಿ ಕಟ್ಟಿ ಹಣೆಗೆ ಕುಂಕುಮ ಇಟ್ಟು ವಿವಾಹವಾದ. ಇದಕ್ಕೆ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಹಾಗೂ ಯುವಕ, ಯುವತಿಯ ಕಡೆಯವರು ಸಾಕ್ಷಿಗಳಾದರು.
ನಿಗದಿಯಾಗಿದ್ದ ಮುಹೂರ್ತದಲ್ಲೇ ವಿವಾಹವಾಗಲು ಆಸ್ಪತ್ರೆಯ ಬೆಡ್ ಮೇಲೆಯೇ ಯುವಕ, ಯುವತಿಗೆ ತಾಳಿ ಕಟ್ಟಿದ್ದಾನೆ. ಯುವತಿಯ ಬೆನ್ನು ಮೂಳೆ ಗಾಯದಿಂದ ಜೀವಕ್ಕೆ ಏನೂ ಅಪಾಯ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದರೇ, ಕೆಲ ದಿನ ವಿಶ್ರಾಂತಿ ಮತ್ತು ಚಿಕಿತ್ಸೆ ಪಡೆಯಬೇಕಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us