ನಾಳೆಯ ಕೇಂದ್ರದ ಬಜೆಟ್‌ ನಿರೀಕ್ಷೆಗಳು ಏನೇನು ? ಬಂಡವಾಳ ವೆಚ್ಚ, ರೈಲ್ವೇ, ರಕ್ಷಣೆಗೆ ಸಿಗೋದು ಎಷ್ಟು?

ನಾಳೆ ಬೆಳಿಗ್ಗೆ 11 ಗಂಟೆಗೆ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2026-27 ನೇ ಸಾಲಿನ ಬಜೆಟ್ ಮಂಡಿಸುವರು. ಈ ಬಜೆಟ್ ಮೇಲಿನ ನಿರೀಕ್ಷೆಗಳು ಏನೇನು ಎಂಬ ವಿವರ ಇಲ್ಲಿದೆ ಓದಿ.

author-image
Chandramohan
UNION BUDGET EXPECTATIONS

2026ರ ಕೇಂದ್ರ ಬಜೆಟ್ ನಿರೀಕ್ಷೆಗಳೇನು?

Advertisment


ನಾಳೆ ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಬಜೆಟ್ ಮಂಡಿಸುವರು. ಈ ಬಜೆಟ್ ಮೇಲೆ ಹತ್ತಾರು ನಿರೀಕ್ಷೆಗಳಿವೆ.  2026ರ ಬಜೆಟ್ ನಿರೀಕ್ಷೆಗಳು ಏನೇನು ಅನ್ನೋದರ ಡೀಟೈಲ್ಸ್ ಇಲ್ಲಿದೆ ನೋಡಿ.

ಇನ್​ಕಂ ಟ್ಯಾಕ್ಸ್
ಟ್ಯಾಕ್ಸ್ ಸ್ಲ್ಯಾಬ್​ನಲ್ಲಿ ಭಾರೀ ಬದಲಾವಣೆಗಳು ಆಗೋದು ಡೌಟ್
ಹೊಸ ರೆಜೀಮ್​ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಹೆಚ್ಚಳ ನಿರೀಕ್ಷೆ
ಈಗಿರುವ 75 ಸಾವಿರದಿಂದ 1 ಲಕ್ಷ ರೂಪಾಯಿಗೆ ಹೆಚ್ಚಳ ಸಾಧ್ಯತೆ
ಗೃಹ ಸಾಲದ ಮೇಲಿನ ಬಡ್ಡಿಯ ವಿನಾಯಿತಿ ಮಿತಿ ಹೆಚ್ಚಳ ನಿರೀಕ್ಷೆ
ಇನ್ನಷ್ಟು ದಿನಗಳ ಕಾಲ ಹಳೇ ಟ್ಯಾಕ್ಸ್ ರೆಜೀಮ್ ಕೂಡ ಮುಂದುವರಿಕೆ
ವಿವಾಹಿತ ಜೋಡಿಗೆ ಜಂಟಿ ತೆರಿಗೆ ಪದ್ದತಿಯನ್ನ ಜಾರಿಗೆ ತರಬಹುದು
ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಸರಳೀಕರಣವನ್ನ ಬಯಸಲಾಗುತ್ತಿದೆ
ಟಿಡಿಎಸ್ ಸರಳೀಕರಣದ ಜೊತೆ ಟ್ರಾನ್ಸಿಷನ್ಸ್ ಪ್ರಾವಿಷನ್ಸ್, ರೂಲ್ಸ್
ಜೊತೆಗೆ ಎಫ್​ಎಕ್ಯೂಗಳನ್ನ ಸ್ಪಷ್ಟವಾಗಿ ಘೋಷಿಸಬೇಕೆಂಬ ಆಶಯ
============
ಜಿಎಸ್​ಟಿ
ಜಿಎಸ್​ಟಿ 2.0 ಜಾರಿಯಲ್ಲಿದ್ದು, ಇದರಲ್ಲಿ ಇನ್ನಷ್ಟು ಬದಲಾವಣೆ ಸಾಧ್ಯತೆ
ಕಸ್ಟಮ್ಸ್ ಲಿಟಿಗೇಷನ್ ಮತ್ತು ಸುಂಕ ಪದ್ದತಿಯಲ್ಲಿ ಬದಲಾವಣೆ ನಿರೀಕ್ಷೆ
ಕಸ್ಟಮ್ಸ್ ಸುಂಕ ಪದ್ದತಿಯನ್ನ ಪರಿಷ್ಕರಣೆ ಮಾಡಬಹುದೆಂಬ ನಿರೀಕ್ಷೆ
ಕಸ್ಟಮ್ಸ್ ಲಿಟಿಗೇಷನ್ ಇತ್ಯರ್ಥಕ್ಕೆ 1 ಬಾರಿ ಸೆಟ್ಲ್​ಮೆಂಟ್ ಸ್ಕೀಮ್ ಸಾಧ್ಯತೆ
--------------
ಬಂಡವಾಳ ವೆಚ್ಚ ಹೆಚ್ಚಳ ನಿರೀಕ್ಷೆ, ಪ್ರತಿ ವರ್ಷ ಶೇ.10 ರಷ್ಟು ಹೆಚ್ಚಳ
ಬಂಡವಾಳ ವೆಚ್ಚ ಹೆಚ್ಚಳದಿಂದ ಮೂಲಸೌಕರ್ಯ ಕ್ಷೇತ್ರದಲ್ಲಿ ಅಭಿವೃದ್ದಿ
============
2026ರ ಬಜೆಟ್ ನಿರೀಕ್ಷೆಗಳು


2026ರ ಜನವರಿ 1ರಿಂದಲೇ 8ನೇ ವೇತನ ಆಯೋಗ ಜಾರಿ ನಿರೀಕ್ಷೆ
ರಾಜ್ಯಗಳಿಗೆ ತೆರಿಗೆ ಹಂಚಿಕೆಯ ಬಗ್ಗೆಯೂ ಸಾಕಷ್ಟು ನಿರೀಕ್ಷೆಗಳು ಇವೆ
16ನೇ ಹಣಕಾಸು ಆಯೋಗ ಶಿಫಾರಸ್ಸಿಗೆ ಅನುಗುಣವಾಗಿ ಹಂಚಿಕೆ
ರಕ್ಷಣಾ ವಲಯ, ಕ್ಲೀನ್ ಎನರ್ಜಿ, ಎಐ, ಉತ್ಪಾದನಾ ವಲಯ
ಸಂಶೋಧನಾ ವಲಯಗಳ ಮೇಲೆ ಹೆಚ್ಚು ಹೂಡಿಕೆಯ ನಿರೀಕ್ಷೆ
ಜೊತೆಗೆ ರೇಲ್ವೆ, ರಸ್ತೆ & ನಗರಾಭಿವೃದ್ಧಿಗೆ ಹೆಚ್ಚು ಒತ್ತು ಸಾಧ್ಯತೆ
ರೇಲ್ವೆ ಇಲಾಖೆಗೆ 2.75 ಟ್ರಿಲಿಯನ್ ಅನುದಾನ ಸಿಗುವ ನಿರೀಕ್ಷೆ
ಗೇಜ್ ಕನ್ವರ್ಷನ್, ಟ್ರ್ಯಾಕ್ ಡಬ್ಲಿಂಗ್, ಹೊಸ ಮಾರ್ಗಗಳು
ರೇಲ್ವೆ ಸಾಮರ್ಥ್ಯವನ್ನ ಹೆಚ್ಚಿಸುವತ್ತ ಗಮನ ಹರಿಸಲಾಗುತ್ತೆ
ಎಂಎಸ್​ಎಂಇಗಳಿಗೆ ಸಾಂಸ್ಥಿಕ ಸಾಲ ವ್ಯವಸ್ಥೆಯ ವಿಸ್ತರಣೆ
ಅಗತ್ಯ ಔಷಧಿಗಳ ಮೇಲೆ ಕಸ್ಟಮ್ ಡ್ಯೂಟಿ ಕಡಿತ ಮಾಡಬಹುದು
ಕೃಷಿ ಇಲಾಖೆಗೆ 1.5 ಲಕ್ಷ ಕೋಟಿ ರೂಪಾಯಿ ಅನುದಾನ ನಿರೀಕ್ಷೆ
ಹೊಸ ಬೀಜ ಕಾಯ್ದೆಯನ್ನ ಮಂಡಿಸುವ ಸಾಧ್ಯತೆಯೂ ಇದೆ
ಉಗ್ರಾಣಗಳ ಉನ್ನತೀಕರಣ ಮತ್ತು ಸಂಖ್ಯೆಯಲ್ಲಿ ಹೆಚ್ಚಳ ಸಾಧ್ಯತೆ
ರಿಯಲ್ ಎಸ್ಟೇಟ್ ವಲಯದಲ್ಲಿ ಸ್ಟ್ಯಾಂಪ್ ಡ್ಯೂಟಿ ಚಾರ್ಜ್ ಇಳಿಕೆ
ಎಐ, ರೋಬೋಟಿಕ್, ಡೀಪ್ ಟೆಕ್ ಉತ್ಪಾದನೆಗೆ ಉತ್ತೇಜನ
ಆರೋಗ್ಯ, ಲಾಜಿಸ್ಟಿಕ್ಸ್, ಶಿಕ್ಷಣ & ಸಾರ್ವಜನಿಕ ಸೇವೆಗಳಲ್ಲಿ AIಗೆ ಉತ್ತೇಜನ
ಮೆಟ್ರೋ ನಗರಗಳ ಹೊರಗೂ ಇವಿ ಚಾರ್ಜಿಂಗ್ ನೆಟ್​ವರ್ಕ್​ಗಳ ವಿಸ್ತರಣೆ
ಸ್ಥಳೀಯವಾಗಿಯೇ ಬ್ಯಾಟರಿ ಉತ್ಪಾದನೆ ಮತ್ತು ಮರುಬಳಕೆಗೆ ಉತ್ತೇಜನ
ಕೃಷಿ ಮಾರುಕಟ್ಟೆ ವ್ಯವಸ್ಥೆ ಸುಧಾರಣೆಯ ನಿರೀಕ್ಷೆ
ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊತ್ತ ಹೆಚ್ಚಳ ನಿರೀಕ್ಷೆ
ಕೃಷಿ ಸಾಲದ ಮೊತ್ತದಲ್ಲಿ ಹೆಚ್ಚಳ ನಿರೀಕ್ಷೆ

central budgeT Nirmala seetharaman




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Nirmala Sitharaman union budget
Advertisment