ಕೇಂದ್ರದ ಇಂದಿನ ಬಜೆಟ್‌ನ ಟಾಪ್‌ 10 ಘೋಷಣೆಗಳೇನು?

ಕೇಂದ್ರದ ಇಂದಿನ ಬಜೆಟ್ ನಲ್ಲಿ ಸಾಕಷ್ಟು ಘೋಷಣೆ ಮಾಡಿದ್ದಾರೆ. ಕೃಷಿಯಿಂದ ಹಿಡಿದು ಕೈಗಾರಿಕೆಯವರೆಗೂ, ವಿದ್ಯಾಭ್ಯಾಸದಿಂದ ಹಿಡಿದು ಉದ್ಯೋಗ ಸೃಷ್ಟಿ, ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಪರಿಣಾಮದ ಅಧ್ಯಯದವರೆಗೂ ಘೋಷಣೆ ಮಾಡಲಾಗಿದೆ. ಟಾಪ್ 10 ಘೋಷಣೆಗಳ ವಿವರ ಇಲ್ಲಿದೆ ಓದಿ.

author-image
Chandramohan
union budget (1)
Advertisment

ಕೇಂದ್ರದ ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2026-27ರ ಕೇಂದ್ರದ ಬಜೆಟ್ ಮಂಡಿಸಿದ್ದಾರೆ. ಈ ಭಾರಿಯ ಬಜೆಟ್ ನಲ್ಲಿ ಜನಪ್ರಿಯ ಘೋಷಣೆಗಳೂ ಇಲ್ಲ. ಆದಾಯ ಗಳಿಸುವ ವರ್ಗಕ್ಕೆ ಯಾವುದೇ ವಿನಾಯಿತಿ ಮಿತಿಯನ್ನು ಈ ಭಾರಿ ಏರಿಸುವ ಗೋಜಿಗೆ ಹೋಗಿಲ್ಲ. ಕಳೆದ ವರ್ಷ 12.75 ಲಕ್ಷ ರೂಪಾಯಿವರೆಗೂ ಸಂಪೂರ್ಣ ಆದಾಯ ತೆರಿಗೆ ವಿನಾಯಿತಿಯನ್ನು ಕೇಂದ್ರ ಸರ್ಕಾರ ನೀಡಿದೆ. ಅದನ್ನೇ ಈ ವರ್ಷವೂ ಮುಂದುವರಿಸಲಾಗಿದೆ.  ಹಾಗಾದರೇ, ಈ ಭಾರಿಯ ಬಜೆಟ್ ಹೈಲೈಟ್ಸ್ ಗಳೇನು? ಈ ಪ್ರಶ್ನೆಗೆ ಉತ್ತರ ಇಲ್ಲಿದೆ ಓದಿ. 

1- ಬಂಡವಾಳ ವೆಚ್ಚವನ್ನು 12.2 ಲಕ್ಷ  ಕೋಟಿ ರೂಪಾಯಿಗೆ ಹೆಚ್ಚಳ ಮಾಡಲಾಗಿದೆ. ಕಳೆದ ವರ್ಷ 11.1 ಲಕ್ಷ ಕೋಟಿ ರೂಪಾಯಿ ಇದ್ದ ಬಂಡವಾಳ ವೆಚ್ಚ ಹೆಚ್ಚಳ. ಇದರಿಂದ ದೇಶದಲ್ಲಿ ಮೂಲಸೌಕರ್ಯ ನಿರ್ಮಾಣಕ್ಕೆ ಒತ್ತು.
2-ದೇಶದಲ್ಲಿ ಈ ಭಾರಿ 3 ಹೊಸ ಏಮ್ಸ್ ಆಸ್ಪತ್ರೆ ಹಾಗೂ ಐದು ಯೂನಿರ್ವಸಿಟಿ ಟೌನ್ ಷಿಪ್ ಸ್ಥಾಪನೆ, 3 ಆಯುರ್ವೇದ ಇನ್ಸಿ ಟಿಟ್ಯೂಟ್ ಸ್ಥಾಪನೆ

3- ಅಪರೂಪದ ಖನಿಜ ಕಾರಿಡಾರ್‌ ಸ್ಥಾಪನೆ, ತಮಿಳುನಾಡು, ಕೇರಳ,  ಒರಿಸ್ಸಾ, ಆಂಧ್ರ ಸೇರಿದಂತೆ 4 ರಾಜ್ಯಗಳಲ್ಲಿ ಅಪರೂಪದ ಖನಿಜ ಕಾರಿಡಾರ್ ಸ್ಥಾಪನೆ.
4- ದೇಶದಲ್ಲಿ 7 ಹೊಸ ಹೈ ಸ್ಪೀಡ್ ರೈಲು ಕಾರಿಡಾರ್ ಆರಂಭದ ಘೋಷಣೆ, ಬೆಂಗಳೂರು- ಹೈದರಾಬಾದ್, ಬೆಂಗಳೂರು- ಚೆನ್ನೈ ಸೇರಿ 7 ಹೈ ಸ್ಪೀಡ್ ರೈಲು ಕಾರಿಡಾರ್ ಸ್ಥಾಪನೆ

4- ತೆಂಗು ಪ್ರಮೋಷನ್ ಸ್ಕೀಮ್ ಜಾರಿ ಘೋಷಿಸಿದ ಕೇಂದ್ರ ಸರ್ಕಾರ, ತೆಂಗು ಬೆಳೆಗೆ ಉತ್ತೇಜನ, ವಿದೇಶಕ್ಕೆ ರಫ್ತು, ಹೊಸದಾಗಿ ತೆಂಗಿನ ಗಿಡ ನೆಡುವಿಕೆ, ಹಳೆ ಗಿಡ ಕಿತ್ತು ಹೊಸ ಗಿಡ ನೆಡಲು ಪೋತ್ಸಾಹ
5- 16ನೇ ಹಣಕಾಸು ಆಯೋಗದ ಶಿಫಾರಸ್ಸು, ವರದಿಗಳನ್ನು ಒಪ್ಪಿರುವ ಕೇಂದ್ರ ಸರ್ಕಾರ. ಆದಾಯದಲ್ಲಿ ಶೇ.41 ರಷ್ಟುನ್ನು ರಾಜ್ಯಗಳಿಗೆ ನೀಡಲು ಒಪ್ಪಿಗೆ . ರಾಜ್ಯಗಳಿಗೆ 1.4 ಲಕ್ಷ ಕೋಟಿ ರೂಪಾಯಿ ನೀಡಿಕೆ
6-ಭಾರತದಲ್ಲಿ ಡಾಟಾ ಸೆಂಟರ್ ಸ್ಥಾಪಿಸುವ, ಕ್ಲೌಡ್ ಸರ್ವೀಸ್ ನೀಡುವ ವಿದೇಶಿ ಕಂಪನಿಗಳಿಗೆ 2047 ರವರೆಗೆ ತೆರಿಗೆ ರಜೆ ಘೋಷಣೆ
7-ಮಿನಿಮಮ್ ಆಲ್ಟಾರ್ನೇಟ್ ಟ್ಸಾಕ್ಸ್ (MAT) ಫೈನಲ್ ಟ್ಯಾಕ್ಸ್ ಆಗಿದ್ದು ಶೇ.14 ರಷ್ಟು ತೆರಿಗೆ ಜಾರಿ
8- ದೇಶದಲ್ಲಿ 15 ಸಾವಿರ ಸೆಕೆಂಡರಿ ಸ್ಕೂಲ್ ಗಳಲ್ಲಿ ಹಾಗೂ 500 ಕಾಲೇಜುಗಳಲ್ಲಿ  ಎವಿಜಿಸಿ ಕಂಟೆಂಟ್ ಕ್ರಿಯೇಟರ್ಸ್ ಲ್ಯಾಬ್ ಸ್ಥಾಪನೆ
9- ಮುಂದಿನ 5 ವರ್ಷದಲ್ಲಿ 20 ರಾಷ್ಟ್ರೀಯ ಜಲಮಾರ್ಗಗಳ ಸ್ಥಾಪನೆ, ಪಶ್ಚಿಮ ಬಂಗಾಳದ ದಂಗಾಕುಣಿಯಿಂದ ಗುಜರಾತ್‌ನ  ಸೂರತ್ ವರೆಗೂ  ರೈಲು ಸರಕು ಸಾಗಣೆ ಕಾರಿಡಾರ್‌

10- ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಸೇರಿದಂತೆ ಹೊಸ ಟೆಕ್ನಾಲಜಿಯಿಂದ ಕಾರ್ಮಿಕ ಮಾರುಕಟ್ಟೆಯ ಮೇಲಾಗುವ ಪರಿಣಾಮದ ಅಧ್ಯಯನಕ್ಕಾಗಿ ಎಜುಕೇಷನ್ ಟು ಎಂಪ್ಲಾಯಮೆಂಟ್, ಉದ್ಯಮದ ಹೊಸ ಉನ್ನತ ಸ್ಥಾಯಿ ಸಮಿತಿ ರಚಿಸಿ ಅಧ್ಯಯನ




ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

union budget
Advertisment