/newsfirstlive-kannada/media/media_files/2025/10/29/delhi-cloud-seeding-2025-10-29-13-08-22.jpg)
ದೆಹಲಿಯಲ್ಲಿ ಮಳೆಗಾಗಿ ಮೋಡ ಬಿತ್ತನೆ ನಡೆಸಿದ ಸರ್ಕಾರ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ವಿಪರೀತವಾಗಿದೆ. ಹೀಗಾಗಿ ಮೋಡಬಿತ್ತನೆಯ ಮೂಲಕ ಕೃತಕ ಮಳೆ ಬರಿಸುವ ಪ್ರಯತ್ನಕ್ಕೆ ದೆಹಲಿ ಸರ್ಕಾರ ಕೈ ಹಾಕಿತ್ತು. ಐಐಟಿ ಕಾನ್ಪುರಕ್ಕೆ 3.2 ಕೋಟಿ ರೂಪಾಯಿ ವೆಚ್ಚದಲ್ಲಿ ಮೋಡಬಿತ್ತನೆಯ ಮೂಲಕ ಮಳೆ ಬರಿಸುವ ಗುತ್ತಿಗೆ ನೀಡಿತ್ತು. ನಿನ್ನೆ ಐಐಟಿ ಕಾನ್ಪುರದಿಂದ ದೆಹಲಿಯ ಕೆಲ ಪ್ರದೇಶಗಳಲ್ಲಿ ಮೋಡಬಿತ್ತನೆ ಕೂಡ ಮಾಡಲಾಯಿತು. ಆದರೂ ಮಳೆ ಬಂದಿಲ್ಲ. ಮೋಡ ಬಿತ್ತನೆಯ ಮೂಲಕ ಮಳೆ ಬರಿಸುವ ಪ್ರಯೋಗ ವಿಫಲವಾಗಿದೆ. ಆದರೇ ಇದಕ್ಕೆ ಐಐಟಿ ಕಾನ್ಪುರದ ನಿರ್ದೇಶಕರು ಬೇರೆಯದೇ ಕಾರಣ ನೀಡಿದ್ದಾರೆ.
ಮೋಡಗಳಲ್ಲಿ ತೇವಾಂಶ ಕಡಿಮೆ ಇತ್ತು. ಹೀಗಾಗಿ ಮಳೆ ಬಂದಿಲ್ಲ. ಮಾಲಿನ್ಯಯ ಸಮಸ್ಯೆಗೆ ಮೋಡ ಬಿತ್ತನೆಯ ಮ್ಯಾಜಿಕ್ ಬುಲೆಟ್ ಅಲ್ಲ. ಬುಧವಾರ ಕೂಡ ದೆಹಲಿಯಲ್ಲಿ ಮೋಡ ಬಿತ್ತನೆ ಮಾಡುತ್ತೇವೆ ಎಂದು ಐಐಟಿ ಕಾನ್ಪುರ ನಿರ್ದೇಶಕ ಮಣೀಂದ್ರ ಅಗರವಾಲ್ ಹೇಳಿದ್ದಾರೆ. ನಾವು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿದ್ದೇವೆ. ಇಲ್ಲಿಯವರೆಗೂ ಮಳೆಯಾಗಿಲ್ಲ. ಆದ್ದರಿಂದ ಮೋಡಬಿತ್ತನೆ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಆದರೇ, ದುರಾದೃಷ್ಟವಶಾತ್ ಇಂದು ಇರುವ ಮೋಡಗಳು ಹೆಚ್ಚಿನ ತೇವಾಂಶ ಹೊಂದಿಲ್ಲ. ತೇವಾಂಶವು ಶೇ.15- 20 ರಷ್ಟು ಮಾತ್ರ ಇತ್ತು . ಆದ್ದರಿಂದ ಕಡಿಮೆ ತೇವಾಂಶದಲ್ಲಿ ಮಳೆಯಾಗುವ ಸಾಧ್ಯತೆ ತುಂಬ ಹೆಚ್ಚು ಇರಲ್ಲ. ಆದರೇ, ಈ ಪ್ರಯೋಗವು ನಮ್ಮ ತಂಡಕ್ಕೆ ಮೋಡ ಬಿತ್ತನೆಯನ್ನು ಮುಂದುವರಿಸಬಹುದು ಎಂಬ ವಿಶ್ವಾಸವನ್ನು ನೀಡಿದೆ ಎಂದು ಐಐಟಿ ಕಾನ್ಪುರ ನಿರ್ದೇಶಕ ಮಣೀಂದ್ರ ಅಗರವಾಲ್ ಹೇಳಿದ್ದಾರೆ.
ಇಂದು ಮಳೆಯ ಮುನ್ಸೂಚನೆಯ ಬಗ್ಗೆ ಭಿನ್ನಾಭಿಪ್ರಾಯದ ವರದಿಗಳಿವೆ. ಕೆಲವರು ಮಳೆ ಬರುತ್ತದೆ ಎಂದು ಹೇಳಿದರೇ, ಕೆಲವರು ಮಳೆ ಬರಲ್ಲ ಎಂದು ಹೇಳುತ್ತಿದ್ದಾರೆ. ಆದರೇ, ಮೋಡದಲ್ಲಿ ತೇವಾಂಶ ಕಡಿಮೆ ಇತ್ತು. ಆದ್ದರಿಂದ ಇಂದು ಯಾವುದೇ ಮಳೆ ಬೀಳುತ್ತೆ ಎಂದು ನಾವು ನಿರೀಕ್ಷಿಸುವುದಿಲ್ಲ ಎಂದು ಮಣೀಂದ್ರ ಅಗರವಾಲ್ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/29/delhi-cloud-seeding-02-2025-10-29-13-10-27.jpg)
ದೆಹಲಿಯಲ್ಲಿ ಬುಧವಾರ 2 ವಿಮಾನಗಳೊಂದಿಗೆ ಮೋಡಬಿತ್ತನೆಯನ್ನು ಮುಂದುವರಿಸಲಾಗುವುದು. ಮೋಡ ಕವಿದಿರುವಾಗ ಮೋಡ ಬಿತ್ತನೆಯ ಪ್ರಯೋಗ ನಡೆಸಲಾಗುತ್ತೆ ಎಂದು ಮಣೀಂದ್ರ ಅಗರವಾಲ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us