/newsfirstlive-kannada/media/media_files/2026/01/10/rat-poision-order-blinki-boy-saves-women-2026-01-10-15-33-00.jpg)
ಬ್ಲಿಂಕಿಟ್ ಡೆಲಿವರಿ ಬಾಯ್ ಒಬ್ಬರು ತಮ್ಮ ಸಮಯ ಪ್ರಜ್ಞೆಯಿಂದ ಮಹಿಳೆಯ ಜೀವ ಉಳಿಸಿದ ಘಟನೆ ತಮಿಳುನಾಡಿನ ಚೆನ್ನೈನಲ್ಲಿ ನಡೆದಿದೆ. ಮಧ್ಯರಾತ್ರಿ ಮಹಿಳೆಯೊಬ್ಬರು ಮೂರು ಇಲಿ ಪಾಷಾಣದ ಪ್ಯಾಕೆಟ್ ಗಳನ್ನ ಆರ್ಡರ್ ಮಾಡಿದ್ದರು. ಅದರಂತೆ ಬ್ಲಿಂಕಿಟ್ ಡೆಲಿವರಿ ಬಾಯ್ , ಇಲಿ ಪಾಷಾಣದ ಪ್ಯಾಕೆಟ್ ಗಳನ್ನು ತೆಗೆದುಕೊಂಡು ಮಹಿಳೆಯ ಮನೆ ಬಾಗಿಲಿಗೆ ಹೋಗಿದ್ದಾರೆ. ಆಗ ಡೆಲಿವರಿ ಬಾಯ್‌ಗೆ ಮಧ್ಯರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿರುವ ಬಗ್ಗೆ ಅನುಮಾನ ಬಂದಿದೆ. ಇಲಿ ಪಾಷಾಣದ ಡೆಲಿವರಿ ಸ್ವೀಕರಿಸಲು, ಮಹಿಳೆಯೊಬ್ಬರು ಮನೆ ಬಾಗಿಲು ತೆಗೆದಿದ್ದರು. ಆ ಮಹಿಳೆ ಕಣ್ಣೀರು ಹಾಕುತ್ತಾ ದುಃಖದಲ್ಲಿದ್ದರು. ಇದರಿಂದಾಗಿ ಡೆಲಿವರಿ ಬಾಯ್ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ಸಿಕ್ಕಿತ್ತು. ತಕ್ಷಣವೇ ಆ ಮಹಿಳೆಯನ್ನು ವಿಶ್ವಾಸದಿಂದ, ಗೌರವದಿಂದ ಮಾತನಾಡಿಸಿದ್ದಾರೆ. ಸೌಜನ್ಯದಿಂದ ಆ ಮಹಿಳೆಯನ್ನು ಮಾತನಾಡಿಸಿದಾಗ, ಆ ಮಹಿಳೆ ನೋವು, ದುಃಖದಲ್ಲಿರುವುದು ಗೊತ್ತಾಗಿದೆ. ಆಗ ಡೆಲಿವರಿ ಬಾಯ್, ಆ ಮಹಿಳೆಗೆ ಧೈರ್ಯದ ಮಾತುಗಳನ್ನು ಹೇಳಿದ್ದಾರೆ. ಜೀವನದಲ್ಲಿ ಕಷ್ಟಗಳು ಬರುತ್ತಾವೆ. ಈ ಕಷ್ಟಗಳು ನಿವಾರಣೆಯಾಗುತ್ತಾವೆ. ಜೀವ ಕಳೆದುಕೊಳ್ಳುವ ಕೆಲಸ ಮಾಡಿಕೊಳ್ಳಬೇಡಿ . ಮಧ್ಯರಾತ್ರಿ ಇಲಿ ಪಾಷಾಣದ ಆರ್ಡರ್ ಮಾಡುವ ಅಗತ್ಯ ಇರಲಿಲ್ಲ, ಏನೇ ಸಮಸ್ಯೆ ಇರಲಿ ಆತ್ಮಹತ್ಯೆಯ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ, ನಿಮ್ಮ ಜೀವ ಅಮೂಲ್ಯ, ಕಷ್ಟ ಶಾಶ್ವತ ಅಲ್ಲ., ಹೀಗೆ ಬಂದು ಹಾಗೆ ಹೋಗುತ್ತೆ ಅಂತ ಧೈರ್ಯ ತುಂಬಿದ್ದಾನೆ. ಯುವಕನ ಮಾತು ಕೇಳಿ ಮಹಿಳೆ ನಿರ್ಧಾರ ಬದಲಿಸಿ ಜೀವನ ಎದುರಿಸಲು ಸಂಕಲ್ಪ ಮಾಡಿದ್ದಾಳೆ. ಬಳಿಕ ಡೆಲಿವರಿ ಬಾಯ್ ಯಾವುದಕ್ಕೂ ರಿಸ್ಕ್ ಬೇಡ ಎಂದು ಆ ಮಹಿಳೆ ಆರ್ಡರ್ ಮಾಡಿದ್ದ, ಇಲಿ ಪಾಷಾಣದ ಆರ್ಡರ್ ಅನ್ನು ತಾನೇ ಕ್ಯಾನ್ಸಲ್ ಮಾಡಿದ್ದಾನೆ. ಇಲಿ ಪಾಷಾಣದ ಪ್ಯಾಕೆಟ್ ಗಳನ್ನು ಮಹಿಳೆಗೆ ನೀಡದೇ ವಾಪಸ್ ಹೋಗಿದ್ದಾನೆ. ಹೀಗೆ ಡೆಲಿವರಿ ಬಾಯ್ ಒಬ್ಬ ಮಧ್ಯರಾತ್ರಿ ಮಹಿಳೆಯ ಜೀವನ ಉಳಿಸಿದ್ದಾನೆ. ವಾಸ್ತವವಾಗಿ ನಡೆದ ಈ ಕಥೆಯನ್ನು ಬ್ಲಿಂಕಿಟ್ ಡೆಲಿವರಿ ಬಾಯ್ ಸೋಷಿಯಲ್ ಮೀಡಿಯಾದಲ್ಲಿ ತಾನೇ ಹಂಚಿಕೊಂಡಿದ್ದಾನೆ. ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us