/newsfirstlive-kannada/media/media_files/2025/12/02/saksham-tate-murder-02-2025-12-02-16-04-12.jpg)
ಸಕ್ಷಮ್ ತತೆ ಹಾಗೂ ಅಂಚಲ್
ಪ್ರೀತಿ ಅಂದ್ರೇನೆ ಹಾಗೇ.. ಅದು ಹೀಗೆ ಇರಬೇಕು.. ಹೀಗೆ ಹುಟ್ಟಬೇಕು.. ಇಂತವರ ಜೊತೆನೆ ಪ್ರೀತಿ ಆಗ್ಬೇಕು ಅನ್ನೋ ಯಾವ ನಿಯಮಗಳು ಇಲ್ಲ. ಕೇವಲ ಮನಸು, ಮನಸುಗಳು ಬೆರೆಯೋದಷ್ಟೇ ಇದಕ್ಕೆ ಗೊತ್ತಿರೋದು. ನಾವು-ನೀವು ಹಲವಾರು ಲವ್ ಸ್ಟೋರಿಗಳನ್ನ ಕೇಳಿದ್ದೀವಿ, ನಮ್ಮ ನಿಮ್ಮ ನಡುವೆ ಇರೋರನ್ನು ಕಂಡಿದ್ದೀವಿ. ಆದ್ರೆ ಇವತ್ತು ನಾವು ಹೇಳ್ತಿರೋ ಈ ಲವ್ ಸ್ಟೋರಿ ಇವೆಲ್ಲದಕ್ಕಿಂತಲೂ ಮಿಗಿಲು. ಪ್ರೇಮಿಗಳು ಸತ್ತರೆ, ಪ್ರೀತಿ ಸಾಯುತ್ತೆ ಅಂತಾರೆ. ನೋ.. ನೇವರ್.. ಇಲ್ಲಿ ಪ್ರೇಮಿ ಸತ್ತ ಮೇಲೂ ಪ್ರೀತಿ ಗೆದ್ದಿದೆ. ಅದು ಹೇಗೆ ಅಂತಾ ಹೇಳ್ತೀವಿ, ಈ ಸ್ಟೋರಿ ಮಿಸ್ ಮಾಡದೇ ಓದಿ.
ತಮಿಳಿನ ಕಾದಲಿಲ್ ವಿಳುಂದೇನ್ ಸಿನಿಮಾದಲ್ಲಿ ತನ್ನ ಪ್ರೇಯಸಿ ಸತ್ತಿದ್ದರೂ, ಆಕೆ ಇನ್ನೂ ಜೀವಂತವಾಗಿದ್ದಾಳೆ ಅಂತಾ ಪ್ರೇಮಿಯ ಶವದ ಜೊತೆ ದಿನ ಕಳೆಯುತ್ತಾನೆ. ಸಿನಿಮಾ ನೋಡೋರಿಗೆ ಗೊತ್ತು ಹೀರೋಯಿನ್ ಸತ್ತಿದ್ದಾಳೆ ಅಂತಾ. ಆದ್ರೆ, ಲವ್ವರ್‌ಬಾಯ್ ಆಗಿ ಌಕ್ಟ್ ಮಾಡ್ತಿರೋ ಈ ಹೀರೋಗೆ ಅವಳು ಎಂದೂ ಸತ್ತೇ ಇಲ್ಲ... ಇನ್ನೂ ಜೀವಂತ, ಸದಾ ಜೀವಂತ..
ಇದು ಸಿನಿಮಾ.. ಆದ್ರೆ, ಈಗ ನಾವು ಹೇಳ್ತಿರೋದು ಸಿನಿಮಾವನ್ನು ಮೀರಿಸೋ ಕಥೆಯನ್ನ.. ಇದು ಕೇವಲ ಕಥೆಯಲ್ಲ.. ಸತ್ತ ಮೇಲೂ ಪ್ರೀತಿ ಗೆದ್ದಿರೋ ಒಂದು ವಿಚಿತ್ರ ಘಟನೆಯನ್ನ..
/filters:format(webp)/newsfirstlive-kannada/media/media_files/2025/12/02/saksham-tate-murder-03-2025-12-02-15-57-01.jpg)
ಅಬ್ಬಾ... ಈ ಪೋಟೋದಲ್ಲಿರುವ ಹುಡುಗಿ ಅಳ್ತಿರೋದನ್ನ ನೋಡಿದರೇ, ಒಂದು ಕ್ಷಣ ನಮ್ಮ ಗಂಟಲು ಕಟ್ಟುತ್ತೆ. ಹೃದಯವೂ ಭಾರವಾಗುತ್ತೆ. ಯಾಕಂದ್ರೆ ಇಲ್ಲಿ ಸತ್ತಿರೋದು ತಾನ್ನ ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸ್ತಿದ್ದ ಪ್ರೇಮಿ. ತನ್ನ ಪ್ರೇಮಿಯ ಶವದ ಮುಂದೆ ಎದೆಯೊಡೆದುಕೊಂಡು ಅಳ್ತಿದ್ದಾಳೆ. ಜೀವನವೆಲ್ಲಾ ಜೊತೆಯಾಗಿ ಸಾಗ್ತೀನಿ ಅಂತ ಹೇಳಿದ್ದವ ಇಂದು ಕಣ್ಣಮಂದೆ ಹೆಣವಾಗಿ ಮಲಗಿದ್ದಾನೆ. ಪ್ರೇಮಿ ಸಕ್ಷಮ್ ಈ ಅಂಚಲ್‌ನನ್ನು ಅನಾಥಳನ್ನಾಗಿ ಮಾಡಿ ಬಹುದೂರ ಸಾಗಿದ್ದಾನೆ.
ಇಂತಾದ್ದೊಂದು ಹೃದಯ ವಿದ್ರಾವಕ ಘಟನೆ ನಡೆದಿರೋದು ಮಹಾರಾಷ್ಟ್ರದ ನಾಂದೇಡ ಜಿಲ್ಲೆಯಲ್ಲಿ. ಇಲ್ಲಿ ಫೋಟೋದಲ್ಲಿ ನಗುನಗುತ್ತಾ ಪೋಸ್ ಕೊಟ್ಟಿದ್ದಾರಲ್ಲ ಇವರೇ ನೋಡಿ ಲವ್ವರ್ಸ್.
/filters:format(webp)/newsfirstlive-kannada/media/media_files/2025/12/02/saksham-tate-murder-04-2025-12-02-15-57-37.jpg)
ಹುಡುಗಿ ಹೆಸರು ಅಂಚಲ್. 20 ವರ್ಷ. ಹುಡುಗ ಸಕ್ಷಮ್ ತಾಟೆ, ಕೇವಲ 25 ವರ್ಷ. ಇದೇ ಸಕ್ಷಮ್ ಈಗ ಹೆಣವಾಗಿ ಮಲಗಿದ್ದಾನೆ. ಇಷ್ಟೊಂದು ಮುದ್ದು ಮುದ್ದಾಗಿರೋ ಜೋಡಿಯ ಮೇಲೆ ವಿಧಿ ವಕ್ರದೃಷ್ಟಿ ಬೀರಿದ್ದ.. ಪ್ರೀತಿಸುತ್ತಿದ್ದ ಈ ಜೋಡಿಹಕ್ಕಿಗಳಿಗೆ ದೇವರ ದ್ರೋಹ ಬಗೆದ ಅಂತಾ ಕಾಣಿಸುತ್ತೆ.
ಪ್ರೀತಿಸಿದ ಯುವಕ ಸಾವನ್ನಪ್ಪಿದ್ರೆ, ಅವನನ್ನೇ ಪ್ರಾಣ ಎಂದುಕೊಂಡಿದ್ದ ಈಕೆಗೆ ಈಗ ಆಕಾಶವೇ ಕಳಚಿಬಿದ್ದಂತಾಗಿದೆ... ಅಕ್ಷರಶಃ ನಿಂತ ನೆಲವೇ ಕುಸಿದು ಹೋಗಿದೆ. ಸಾವು ಅನ್ನೋದು ಪ್ರೀತಿಸಿದ್ದ ಇವರಿಬ್ಬರನ್ನ ದೂರವಾಗಿಸಿಬಿಟ್ಟಿದೆ. ಇಲ್ಲ.. ಇಲ್ಲ.. ಇಲ್ಲಿ ಪ್ರೇಮಿ ಸತ್ತಿರಬಹುದು. ಆದ್ರೆ ‘ಪ್ರೀತಿ’ ಗೆದ್ದಿದೆ.. ಹೇಗೆ ಗೊತ್ತಾ..?
ಪ್ರೇಮಿ ಸತ್ತಿದ್ದರೂ ಅವನ ಶವದ ಜೊತೆ ಮದುವೆ!
ಅರಿಶಿಣ, ಕುಂಕುಮ ಹಚ್ಚಿ ತಾಳಿಕಟ್ಟಿಕೊಂಡ ಯುವತಿ!
ಇದನ್ನು ನೀವು ವಿಚಿತ್ರ ಘಟನೆ ಅಂತೀರೋ.. ಇಲ್ಲಾ, ಇದಪ್ಪಾ ಪ್ರೀತಿ ಅಂದ್ರೆ ಅಂತಾ ಮನಸಾರೆ ಮೆಚ್ಚುತ್ತಿರೋ ನಿಮಗೆ ಬಿಟ್ಟಿದ್ದು. ಇಲ್ಲಿ ಸಕ್ಷಮ್ ಟಾಟೆ ಶವದ ಜೊತೆ ಇವನನ್ನ ಪ್ರೀತಿಸಿದ ಹುಡುಗಿ ಅಂಚಲ್ ಮದುವೆಯಾಗಿದ್ದಾಳೆ. ಮದುವೆ ಅಂದ್ರೆ ಸಂಬಂಧಿಕರೆಲ್ಲಾ ನೆರೆದಿರ್ತಾರೆ.. ಚಪ್ಪರ ಹಾಕಿರ್ತಾರೆ.. ಅಲ್ಲಿ ಗಂಡು-ಹೆಣ್ಣು ಇಬ್ಬರೂ ನಗು ನಗುತ್ತಾ ಹಸೆಮಣೆ ಏರ್ತಾರೆ. ಆದ್ರೆ ಇಲ್ಲಿ ಆಗಿರೋ ಮದುವೆ ಮಾತ್ರ ವಿಚಿತ್ರ.
ಸತ್ತು ಹೋದ ಪ್ರೇಮಿಯ ಶವದ ಜೊತೆ ಅಂಚಲ್ ಮದುವೆಯಾಗಿದ್ದಾಳೆ. ಇವರಿಬ್ಬರು ಮೂರು ವರ್ಷದಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಆದ್ರೆ ಮೊನ್ನೆ ಅಂದ್ರೆ ಗುರುವಾರ ಸಕ್ಷಮ್ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಈ ಸುದ್ದಿ ಕೇಳಿ ಓಡೋಡಿ ಬಂದ ಹುಡುಗಿ ಅಂಚಲ್‌ಗೆ ಹೃದಯವೇ ಒಡೆದು ಹೋಗಿದೆ. ಪ್ರೇಮಿಯ ಶವ ಕಂಡು ಕಣ್ಣೀರಾಗಿ ಹೋಗಿದ್ದಾಳೆ. ತಲೆ ತಲೆ ಹೊಡೆದುಕೊಂಡು, ಎದೆ ಬಡಿದುಕೊಂಡು ಅತ್ತಿದ್ದಾಳೆ. ಅಲ್ಲೇ ಸಕ್ಷಮ್ ಶವದ ಮುಂದೆ ತಾನು ಮೈಗೆಲ್ಲಾ ಅರಿಶಿಣ ಹಚ್ಚಿಕೊಂಡು, ಅವನ ಹೆಸರಲ್ಲೇ ಹಣೆಗೆ ಕುಂಕುವಿಟ್ಟುಕೊಂಡಿದ್ದಾಳೆ. ಈ ವೇಳೆ, ಸಕ್ಷಮ್ ಶವಕ್ಕೂ ಅರಿಶಿಣ ಹಚ್ಚಲಾಗಿದೆ. ಇವರಿಬ್ಬರು ಕೇವಲ ಪ್ರೇಮಿಗಳಷ್ಟೇ ಆಗಿದ್ದವರು. ಮುಂದೆ ಮದುವೆಯಾಗುವ ಯೋಚನೆಯಲ್ಲೂ ಇದ್ರು. ಆದ್ರೆ ಅಷ್ಟರಲ್ಲಿ ಸಕ್ಷಮ್ ಕೊಲೆಯಾಗಿದ್ದು, ಇವನ ಶವದ ಮುಂದೆ ಅಂಚಲ್ ತನಗೆ ತಾನೇ ತಾಳಿ ಕಟ್ಟಿಕೊಂಡುಬಿಟ್ಟಿದ್ದಾಳೆ. ಸತ್ತು ಹೋದ ಸಕ್ಷಮ್‌ನನ್ನ ಅಂಚಲ್ ಈ ರೀತಿಯಾಗಿ ಬದುಕಿಸಿಕೊಂಡಿದ್ದಾಳೆ.
ಅಷ್ಟಕ್ಕೂ ಸಕ್ಷಮ್‌ಗೆ ಏನಾಗಿತ್ತು? ಅವನು ಹೇಗೆ ಕೊಲೆಯಾದ? ಅದೆಲ್ಲವನ್ನೂ ಹೇಳ್ತೀವಿ. ಆದ್ರೆ ಅದಕ್ಕೂ ಮೊದ್ಲು ಅಂಚಲ್‌ನ ಈ ನಿರ್ಧಾರವನ್ನ ಅವರ ಮನೆಯವ್ರು ಸ್ವಾಗತಿಸಿದ್ರಾ ಅನ್ನೋದನ್ನ ಹೇಳ್ತೀವಿ. ನಾವು ನೀವು ಅದೆಷ್ಟೋ ಪ್ರೇಮಕಥೆಗಳನ್ನ ಕೇಳಿದ್ದೀವಿ.. ಆದ್ರೆ, ಇದು ಅದೆಲ್ಲದಕ್ಕಿಂತಲೂ ತುಂಬಾ ವಿಶೇಷವಾಗಿದೆ. ಸತ್ತು ಹೋಗಿರೋ ಸಕ್ಷಮ್‌ನ ಜೊತೆ ಪ್ರೇಮಿ ಅಂಚಲ್ ಮದುವೆಯಾಗಿದ್ದನ್ನ ಹುಡುಗನ ಮನೆಯವ್ರು ಒಪ್ಪಿಕೊಂಡಿದ್ದಾರೆ. ಅವಳನ್ನ ಸೊಸೆಯಾಗಿ ಸ್ವೀಕರಿಸಿದ್ದಾರೆ. ಮಗ ಇಲ್ಲದಿದ್ರೆ ಏನಾಯ್ತು? ಅವನ ಪ್ರೀತಿಯ ಪ್ರತಿರೂಪವಾಗಿ ಬಂದಿರೋ ಅಂಚಲ್‌ನನ್ನ ನಾವು ನೋಡಿಕೊಳ್ತೀವಿ ಅಂತ ತಿಳಿಸಿದ್ದಾರೆ. ಅಂಚಲ್ ಕೂಡಾ ಇನ್ಮುಂದೆ ಇವರ ಮನೆಯಲ್ಲೇ ವಾಸವಿರೋದಾಗಿ ಹೇಳಿಕೆ ಕೊಟ್ಟಿದ್ದಾಳೆ.
ಒಳ್ಳೆಯ ಹುಡುಗ ಎನಿಸಿಕೊಂಡಿದ್ದ ಸಕ್ಷಮ್‌ಗೆ ಏನಾಯ್ತು?
ಅಂಚಲ್ ಬಿಎಸ್‌ಸಿ ಓದುತ್ತಿದ್ದಳು. ಈ ವೇಳೆಯೇ ಇಬ್ಬರು ಪ್ರೀತಿಯಲ್ಲಿ ಬಿದಿದ್ದಾರೆ. ಸಕ್ಷಮ್ ಕೂಡಾ ಅಷ್ಟೇ ಒಳ್ಳೆ ಹುಡುಗ.. ತಾನಾಯ್ತು, ತನ್ನ ಫ್ರೆಂಡ್ಸ್ ಆಯ್ತು ಅಂತಾ ಇದ್ದೋನು. ಮನೆಯವರ ಮಾತನ್ನೂ ಮೀರದ ಹುಡುಗ.. ಆದ್ರೆ, ಅಂತ ಸಕ್ಷಮ್‌ನದ್ದು ಸಾಧಾರಣ ಸಾವಲ್ಲ.. ಕೊಲೆ. ಭೀಕರ ಕೊಲೆ. ಇದು ಇಡೀ ಮಹಾರಾಷ್ಟ್ರವನ್ನೇ ದಂಗಾಗಿಸಿದ ಕೊಲೆ. ಈ ಕೊಲೆ ಮಾಡಿದೋರು ಯಾರು ಅಂತ ಕೇಳಿದ್ರೆ ನೀವು ಒಂದು ಕ್ಷಣ ಶಾಕ್ ಆಗಿಬಿಡ್ತೀರಾ.. ಹೇಗೆ ಕೊಂದ್ರು ಅಂತಾ ಕೇಳಿದ್ರೆ ಬೆಚ್ಚಿಬೀಳ್ತೀರಾ... ಇವರಿಬ್ಬರ ಪ್ರೀತಿಯ ಕಥೆಯಲ್ಲಿ, ಈ ಕೊಲೆಯಲ್ಲಿ ಅಡಗಿರೋ ಸತ್ಯ ಕೇಳಿದ್ರೆ, ಆ ನರರಾಕ್ಷಸರ ಕೃತ್ಯ ಕೇಳಿದ್ರೆ ದಂಗಾಗಿಬಿಡ್ತೀರಾ...
ಹಾಗಾದ್ರೆ ಸಕ್ಷಮ್‌ನದ್ದು ಸಾಧಾರಣ ಸಾವಲ್ಲ.. ಕೊಲೆ ಅಂತಾ ಗೊತ್ತಾಗಿದೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳೂ ಅರೆಸ್ಟ್ ಆಗಿದ್ದಾರೆ. ಇಷ್ಟೆಲ್ಲಾ ಕಥೆ ಕೇಳಿದ ನಿಮಗೆ ಆರೋಪಿಗಳು ಯಾರು ಅನ್ನೋದು ಪ್ರಶ್ನೆ ಇದ್ಯಲ್ಲಾ.. ಆ ಪ್ರಶ್ನೆಗೆ ನಿಮ್ಮನ್ನೇ ದಂಗಾಗಿಸೋ ಉತ್ತರ ಇದೆ.
ಸಕ್ಷಮ್ ನನ್ನು ಕೊಲೆ ಮಾಡಲಾಗಿದೆ. ಕೊಲೆ ಮಾಡಿರೋದು ಬೇರಾರೋ ಅಲ್ಲ. ಸಕ್ಷಮ್ ಪ್ರೀತಿಸಿದ್ದ ಅಂಚಲ್ ತಂದೆ, ಸೋದರರೇ ಕೊಲೆ ಮಾಡಿದ್ದಾರೆ.
ತಂದೆ ಗಜಾನನ ಹಾಗೂ ಆತನ ಮಕ್ಕಳು ಸೇರಿಕೊಂಡು ಸಕ್ಷಮ್ ನನ್ನು ಕೊಲೆ ಮಾಡಿದ್ದಾರೆ.
ಈ ಕೊಲೆಗೆ ಕೆಲವು ದಿನ ಮುನ್ನ ಸಕ್ಷಮ್ ಜೊತೆ ಅಂಚಲ್ ತಂದೆ ಗಜಾನನ ಡ್ಯಾನ್ಸ್ ಮಾಡಿದ್ದಾರೆ.
/filters:format(webp)/newsfirstlive-kannada/media/media_files/2025/12/02/saksham-tate-murder-05-2025-12-02-16-00-34.jpg)
ಭೀಮ್ ಜಯಂತಿಯಂದು ಗಜಾನನ ಹಾಗೂ ಸಕ್ಷಮ್ ಜೊತೆಯಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಆದರೇ ಮನಸ್ಸಿನಲ್ಲೇ ದ್ವೇಷ ತುಂಬಿಕೊಂಡಿದ್ದ ಗಜಾನನ, ತನ್ನ ಮಗಳು ಪ್ರೀತಿಸಿದ್ದ ಹುಡುಗನನ್ನು ಕೊಲೆ ಮಾಡಿ ಬಿಟ್ಟಿದ್ದಾರೆ.
ಈಗ ಅಂಚಲ್ ತನ್ನ ಪ್ರೇಮಿ ಸಕ್ಷಮ್ ನನ್ನು ಕೊಂದ ತನ್ನ ತಂದೆ ಹಾಗೂ ಸೋದರರಿಗೆ ಗಲ್ಲುಶಿಕ್ಷೆಯಾಗಬೇಕೆಂದು ಒತ್ತಾಯಿಸಿದ್ದಾಳೆ. ತನ್ನ ಕುಟುಂಬವೇ ತನಗೆ ದ್ರೋಹ ಬಗೆಯಿತು ಎಂದು ಅಂಚಲ್ ನೋವಿನಿಂದ ಹೇಳಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us