/newsfirstlive-kannada/media/post_attachments/wp-content/uploads/2024/10/Davangere-SBI-Bank-Darode.jpg)
ಬೆಂಗಳೂರು: ವಾರಕ್ಕೆ 5 ದಿನ ಮಾತ್ರ ಕೆಲಸ, ನೇಮಕಾತಿ, ತಾತ್ಕಾಲಿಕ ನೌಕರರ ಕೆಲಸ ಕಾಯಂಗೊಳಿಸುವಂತೆ ಬ್ಯಾಂಕ್ ನೌಕರರ ಒಕ್ಕೂಟವು ಮುಷ್ಕರಕ್ಕೆ ಕರೆ ನೀಡಿತ್ತು. 5 ದಿನ ಮಾತ್ರ ಕೆಲಸ, ನೇಮಕಾತಿ ಸೇರಿದಂತೆ ಹಲವಾರು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬ್ಯಾಂಕ್ ನೌಕರರ ಒಕ್ಕೂಟವು ಮಾರ್ಚ್ 24 ಸೋಮವಾರ ಮತ್ತು 25 ಮಂಗಳವಾರದಂದು ರಾಷ್ಟ್ರವ್ಯಾಪಿ ಎರಡು ದಿನಗಳ ಮುಷ್ಕರಕ್ಕೆ ಕರೆ ನೀಡಿತ್ತು.
ಇದನ್ನೂ ಓದಿ: ಕರ್ನಾಟಕ ಬಂದ್! ನಾಳೆ ಏನಿರುತ್ತೆ? ಏನಿರಲ್ಲ? ಕನ್ನಡ ಪರ ಸಂಘಟನೆ ಇಟ್ಟ 20 ಬೇಡಿಕೆಗಳು ಏನೇನು?
ಇದೀಗ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ್ದ ಬ್ಯಾಂಕ್ ನೌಕರರ ಒಕ್ಕೂಟವು ಈ ಮುಷ್ಕರವನ್ನು ಮುಂದೂಡಿದೆ. ಹಣಕಾಸು ಇಲಾಖೆ ಮತ್ತು ಭಾರತೀಯ ಬ್ಯಾಂಕುಗಳ ಸಂಘ ಇದಕ್ಕೆ ಪರಿಹಾರ ಸೂಚಿಸಿಲ್ಲ. ಹೀಗಾಗಿ ಮುಷ್ಕರಕ್ಕೆ ಸ್ಪಂದಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಕೈ ಬಿಡಲಾಗಿದೆ.
9 ಬ್ಯಾಂಕ್ ನೌಕರರ ಸಂಘಗಳ ಒಕ್ಕೂಟವು ಮುಷ್ಕರಕ್ಕೆ ಕರೆ ನೀಡಿತ್ತು. ಇದರ ಜೊತೆಗೆ ನೇಮಕಾತಿ, ಪಿಎಲ್‌ಐ ಮತ್ತು 5 ದಿನಗಳ ಕೆಲಸ ಸೇರಿದಂತೆ ಇತರ ಬೇಡಿಕೆಗಳ ಈಡೇರಿಕೆಗೆ ಯುಎಫ್‌ಬಿಯು ಆಗ್ರಹಿಸಿತ್ತು. ಇದಕ್ಕೆ ಯಾವುದೇ ಸ್ಪಂದನೆ ಬಾರದ ಹಿನ್ನೆಲೆಯಲ್ಲಿ ಈ ಮುಷ್ಕರ ಮುಂದೂಡಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ