/newsfirstlive-kannada/media/post_attachments/wp-content/uploads/2025/07/ZEE-WRITERS-1.jpg)
ಕಂಟೆಂಟ್ ಮತ್ತು ತಂತ್ರಜ್ಞಾನ ಶಕ್ತಿ ಕೇಂದ್ರವಾದ ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ (‘Z’), ದೇಶಾದ್ಯಂತ ಯುವ, ಉದಯೋನ್ಮುಖ ಚಿತ್ರಕಥೆ ಪ್ರತಿಭೆಗಳನ್ನು ಗುರುತಿಸಲು ಹೊರಟಿದೆ.
ಜೀ ರೈಟರ್ಸ್ ರೂಮ್ ಕೇವಲ ಪ್ರತಿಭೆಗಳನ್ನು ಹುಡುಕುವುದು ಮಾತ್ರವಲ್ಲದೇ ಅದಕ್ಕಿಂತಲೂ ಮಿಗಿಲಾದ ಯುವ, ಉದಯೋನ್ಮುಖ ಚಿತ್ರಕಥೆ ಬರಹಗಾರರ ಪ್ರತಿಭೆಯನ್ನು ಪತ್ತೆ ಹಚ್ಚಲಿದೆ. ಇದು ಕಂಪನಿಯ ಬ್ರಾಂಡ್ ಫಿಲಾಸಫಿಯಾದ ಯುವರ್ಸ್ ಟ್ರೂಲಿ, ಝೀ, ಜೊತೆಗೆ ತನ್ನ ಕಂಟೆಂಟ್ ಕೊಡುಗೆಯನ್ನು ಪ್ಲಾಟ್‌ಫಾರ್ಮ್‌ಗಳಾದ್ಯಂತ ಬೆಳೆಸುವ ಗುರಿಯೊಂದಿಗೆ ಉದ್ದೇಶಿಸಲಾದ ಸೃಜನಶೀಲ ಪ್ರಯತ್ನವಾಗಿದೆ. ಆಯ್ದ ಬರಹಗಾರರಿಗೆ ಜೀನ ವಿಸ್ತೃತ ಟಿವಿ, ಡಿಜಿಟಲ್ ಮತ್ತು ಚಲನಚಿತ್ರ ಪ್ಲಾಟ್‍ಫಾರ್ಮ್‌ಗಳಲ್ಲಿ ಕಥೆಗಳನ್ನು ರಚಿಸಲು ಅವಕಾಶ ನೀಡುತ್ತಿದೆ.
/newsfirstlive-kannada/media/post_attachments/wp-content/uploads/2025/07/ZEE-WRITERS-5.jpg)
ಅವಕಾಶ ಮಿಸ್​ ಮಾಡ್ಕೋಬೇಡಿ
ಭಾರತದ ಮನರಂಜನಾ ಪ್ರಪಂಚದಲ್ಲಿ ವಿಕಸನಗೊಳ್ಳುತ್ತಿರುವ ಅಗತ್ಯಗಳೊಂದಿಗೆ ಇನ್ನೂ ಗುರುತಿಸಲ್ಪಟ್ಟಿರದ ಪ್ರತಿಭೆಗಳನ್ನು ಸಂಪರ್ಕಿಸುವುದಕ್ಕಾಗಿ ‘ಜೀನ ಪ್ರಮುಖ ಕಂಟೆಂಟ್ ಮತ್ತು ಪ್ರಾದೇಶಿಕ ತಂಡಗಳ ನೇತೃತ್ವದಲ್ಲಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.
ಇದನ್ನೂ ಓದಿ: ಅಮೆರಿಕ, ರಷ್ಯಾ, ಚೀನಾ ಅಲ್ಲವೇ ಅಲ್ಲ.. ಈ ದೇಶದ ಸೈನಿಕರಿಗೆ ವಿಶ್ವದಲ್ಲೇ ಅತಿ ಹೆಚ್ಚು ಸಂಬಳ..!
80 ನಗರಗಳು ಮತ್ತು 32 ಈವೆಂಟ್ ಸೆಂಟರ್‌ಗಳಲ್ಲಿ ಹೊರಹೊಮ್ಮುತ್ತಿರುವ, ಈ ಅಭಿಯಾನವು ಪ್ರಸಾರ, ಡಿಜಿಟಲ್ ಮತ್ತು ಆನ್-ಗ್ರೌಂಡ್ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ-ಪ್ರಭಾವದ ಪ್ರೊಮೋಷನಲ್ ಬ್ಲಿಟ್ಜ್ ಮೂಲಕ ವಿಸ್ತರಿಸಲಾಗುತ್ತಿದೆ. ಈ ಕಾರ್ಯಕ್ರಮವು ಹಿಂದಿ, ಮರಾಠಿ, ಬಂಗಾಳಿ, ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿನ ಭರವಸೆಯ ಕಥೆಗಾರರನ್ನು ಗುರಿಯಾಗಿಸಿಕೊಂಡು, ಕಲ್ಪನೆ, ರಚನೆ ಮತ್ತು ನಿರೂಪಣಾ ಕರಕುಶಲತೆಯನ್ನು ಪೋಷಿಸುವಂತಹ ಸಂಯೋಜಿತ ಬರಹಗಾರರ ರೂಮ್‌ಗೆ ಪ್ರವೇಶಿಸಲು ಅಭೂತಪೂರ್ವ ಅವಕಾಶವನ್ನು ನೀಡುತ್ತದೆ.
/newsfirstlive-kannada/media/post_attachments/wp-content/uploads/2025/07/ZEE-WRITERS.jpg)
ಈ ಕಾರ್ಯಕ್ರಮದ ಬಗ್ಗೆ ಮತಾನಾಡಿದ ಝೀ ಎಂಟರ್‌ಟೈನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಚೀಫ್ ಕ್ರಿಯೇಟಿವ್ ಆಫೀಸರ್ ರಾಘವೇಂದ್ರ ಹುಣಸೂರು, ಭಾರತದ ಅತಿದೊಡ್ಡ ಕಥೆಗಾರರಲ್ಲಿ ಒಬ್ಬರಾಗಿ. ಇದು ಕೇವಲ ನಮ್ಮ ಅವಕಾಶ ಮಾತ್ರವಲ್ಲದೇ, ಮುಂದಿನ ಪೀಳಿಗೆಯ ಬರವಣಿಗೆಯ ಪ್ರತಿಭೆಯನ್ನು ಪೋಷಿಸುವುದು ನಮ್ಮ ಕರ್ತವ್ಯ ಕೂಡ ಆಗಿದೆ. ಝೀ ರೈಟರ್ಸ್ ರೂಮ್‌ನೊಂದಿಗೆ, ನಾವು ಹೊಸ ಧ್ವನಿಗಳು, ಕೇಳಿರದ ವಿಚಾರಗಳು ಮತ್ತು ಪ್ರಾಮಾಣಿಕ ಭಾವನೆಗಳು ಒಂದು ರೂಪ ತಾಳುವಂತೆ ಮಾಡುತ್ತೇವೆ. ಇದು ಒಂದು ಸ್ಪರ್ಧೆಯಲ್ಲ - ಇದು ಒಂದು ಬದ್ಧತೆಯಾಗಿದೆ. ನಾವು ಕ್ರಿಯೇಟರ್‌ಗಳನ್ನು ಸಬಲೀಕರಣಗೊಳಿಸುವುದು, ಅವರಿಗೆ ಕೌಶಲ, ಧೈರ್ಯ ಮತ್ತು ಅವಕಾಶ ನೀಡುವುದು. ಏಕೆಂದರೆ ಕಥೆ ಹೇಳುವುದರ ಭವಿಷ್ಯವು ನಾವು ಏನು ಮಾಡುತ್ತೇವೋ ಅದು ಮಾತ್ರವಾಗಿರದೇ - ನಾವು ಅದನ್ನು ಯಾರೊಂದಿಗೆ ಮಾಡುತ್ತಿದ್ದೇವೆ ಎಂಬುದು ಕೂಡ ಮುಖ್ಯವಾಗಿರುತ್ತದೆ ಎಂದರು.
ಉತ್ಸಾಹಭರಿತ ಬರಹಗಾರರಿಗೆ ಅವಕಾಶ
ಜೀನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ಕಾರ್ತಿಕ್ ಮಹಾದೇವ್ ಮಾತನಾಡಿ, " ಜೀ ರೈಟರ್ಸ್ ರೂಮ್ ಮೂಲಕ ಕಥೆ ಹೇಳುವ ಕೌಶಲ್ಯವನ್ನು ಹೆಚ್ಚಿಸುವ ಮೂಲಕ ಒಂದು ಹೆಜ್ಜೆ ಮುಂದೆ ಇಡುತ್ತಿದ್ದೇವೆ. ಇದು ಉತ್ಸಾಹಭರಿತ ಬರಹಗಾರರಿಗೆ ನಾಳೆಯ ಕಥೆಗಾರರಾಗಲು ಉತ್ತಮ ಅವಕಾಶ ನೀಡುತ್ತಿದ್ದೇವೆ ಎಂದರು.
ಇದನ್ನೂ ಓದಿ: ಹಿಂದೂಸ್ತಾನ್ ಯೂನಿಲಿವರ್​ಗೆ ಸಿಇಓ ಆಗಿ ಪ್ರಿಯಾ ನಾಯರ್ ನೇಮಕ; ಶೇ.5 ರಷ್ಟು ಷೇರುಬೆಲೆ ಏರಿಕೆ!
/newsfirstlive-kannada/media/post_attachments/wp-content/uploads/2025/07/ZEE-WRITERS-6.jpg)
ಜೀ ಎಂಟರ್ಟೈನ್ಮೆಂಟ್ ಎಂಟರ್‌ಪ್ರೈಸಸ್ ಲಿಮಿಟೆಡ್‌ನ ಪೂರ್ವ, ಉತ್ತರ, ಪ್ರೀಮಿಯಂ ಕ್ಲಸ್ಟರ್‌ನ ಮುಖ್ಯ ಕ್ಲಸ್ಟರ್ ಅಧಿಕಾರಿ ಸಾಮ್ರಾಟ್ ಘೋಷ್ ಮಾತನಾಡಿ "ಬಂಗಾಳ ಯಾವಾಗಲೂ ಸಾಹಿತ್ಯ ಮತ್ತು ಸಿನಿಮಾ ಪ್ರತಿಭೆಯ ಕೇಂದ್ರವಾಗಿದೆ. ಜೀ ರೈಟರ್ಸ್ ರೂಮ್ ಮೂಲಕ ಉದಯೋನ್ಮುಖ ಬಂಗಾಳಿ ಕಥೆಗಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ನಾವು ನವಯುಗದ ಪ್ಲಾಟ್‌ಫಾರ್ಮ್ ಅನ್ನು ನಿರ್ಮಿಸುತ್ತಿದ್ದೇವೆ" ಎಂದರು.
ಸಿಜು ಪ್ರಭಾಕರನ್, ಚೀಫ್ ಕ್ಲಸ್ಟರ್ ಆಫೀಸ್-ಸೌತ್, ವೆಸ್ಟ್, ಜೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಮಾತನಾಡಿ "ದಕ್ಷಿಣ ಮತ್ತು ಪಶ್ಚಿಮ ಪ್ರದೇಶಗಳು ದೇಶದಲ್ಲಿಯೇ ಅತ್ಯಂತ ರೋಮಾಂಚನಕಾರಿ ಕಥೆಗಳನ್ನು ಹೇಳುವ ಸಂಸ್ಕೃತಿಗಳ ತವರೂರಾಗಿವೆ. ಜೀ ರೈಟರ್ಸ್ ರೂಮ್, ಇಂತಹ ಉತ್ಸಾಹ ಮತ್ತು ಸೃಜನಶೀಲತೆಯನ್ನು ಟಿವಿ, ಒಟಿಟಿ ಮತ್ತು ಚಲನಚಿತ್ರದಾದ್ಯಂತ ಬೆಳೆದು ನಿಲ್ಲಬಹುದಾದ ವೃತ್ತಿಪರವಾದ ರಚನಾತ್ಮಕ ಕಂಟೆಂಟ್ ರಚಿಸಲು ಸಹಾಯ ಮಾಡುತ್ತದೆ" ಎಂದರು.
ಇದನ್ನೂ ಓದಿ: ಇಂಜಿನಿಯರ್​ ಕೋರ್ಸ್​ಗಳಿಗೆ ಬೇಡಿಕೆ ಕುಸಿತ.. ಸರ್ಕಾರದಿಂದ ಶೇ.50 ರಷ್ಟು ವಿನಾಯತಿ
/newsfirstlive-kannada/media/post_attachments/wp-content/uploads/2025/07/ZEE-WRITERS-3.jpg)
ಜೀ ರೈಟರ್ಸ್ ರೂಮ್ ಮೂಲಕ ಇಂಡಸ್ಟ್ರಿಗೆ ಪ್ರವೇಶಿಸದಂತಹ ಪ್ರತಿಭೆಗಳನ್ನು ಸ್ವಾಗತಿಸಲಾಗುತ್ತಿದೆ. 70 ಹೊಸ ಲೇಖಕರು ಮತ್ತು 30 ಬೆಳೆಯುತ್ತಿರುವ ಪರಿಣತರನ್ನು ಐಡಿಯಾ-ರೂಪಿಸುವ ವ್ಯವಸ್ಥೆಯಾಗಿ ಬೆಳೆಸಲಾಗುತ್ತದೆ. ಜೀ ಟಿವಿ, ಓಟಿಟಿ ಮತ್ತು ಸಿನಿಮಾ ಕಂಟೆಂಟ್‍ಗಳಿಗೆ ಅವರು ಕಥೆಗಾರರು ಮತ್ತು ಲೌಕಿಕ ವಿಚಾರಗಳನ್ನು ಹೊಸ ಜಗತ್ತಿಗೆ, ಹೊಸ ಪಾತ್ರಗಳಾಗಿ ಮತ್ತು ಹೊಸ ವಿವರಣಾ ವಿನ್ಯಾಸಗಳಾಗಿ ಪರಿವರ್ತಿಸಲಿದ್ದಾರೆ.
/newsfirstlive-kannada/media/post_attachments/wp-content/uploads/2025/07/ZEE-WRITERS-4.jpg)
ನೋಂದಾಯಿಸಲು [www.zeewritersroom.com] ಗೆ ಭೇಟಿ ನೀಡಿ ಹಾಗು ಈ ಕೆಳಕಂಡ ಅಂಶಗಳನ್ನು ಗಮನಿಸಿ:
- ಲಿಖಿತ ಪರೀಕ್ಷೆ: ಭಾಗವಹಿಸುವವರು ಸೆಲೆಕ್ಷನ್ ಈವೆಂಟ್‌ಗೆ ಹಾಜರಾಗಬೇಕು ಮತ್ತು ಪರೀಕ್ಷೆಯನ್ನು ನೀಡಬೇಕು.
ಸಲ್ಲಿಕೆಯ ಮೌಲ್ಯಮಾಪನ: ಒಂದು ಓದುವ ಸಮಿತಿಯು ಬರವಣಿಗೆಯ ಅರ್ಹತೆಯ ಆಧಾರದ ಮೇಲೆ ಅಗ್ರ 10% ಅನ್ನು ಶಾರ್ಟ್‌ಲಿಸ್ಟ್ ಮಾಡುತ್ತದೆ. - ಸಂದರ್ಶನ ಪ್ರಕ್ರಿಯೆ: ಫೈನಲಿಸ್ಟ್‌ಗಳನ್ನು ಇಂಡಸ್ಟ್ರಿ ಪ್ಯಾನೆಲ್ ಮೂಲಕ ಮೌಲ್ಯಮಾಪನ ಮಾಡಲಾಗುತ್ತದೆ.
- ಜೀ ರೈಟರ್ಸ್ ರೂಮ್‌ಗೆ ಸೇರ್ಪಡೆ: ಅಗ್ರ 100 ಜನರ ಜೀ ರೈಟರ್ಸ್ ರೂಮ್‌ಗೆ ಸೇರಿಸಲಾಗುತ್ತದೆ, ಅಲ್ಲಿ ಅವರು ಪರಿಣತರ ಮಾರ್ಗದರ್ಶನದಲ್ಲಿ ಕಥೆಯ ಕಲ್ಪನೆಗಳನ್ನು ಅಭಿವೃದ್ಧಿಪಡಿಸಿಕೊಳ್ತಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us