Advertisment

ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!

author-image
Ganesh
Updated On
ತಲೆ ನೋವಿಗೆ ಮಾತ್ರೆ ನುಂಗುತ್ತೀರಾ..? ಇಂದೇ ಬಿಟ್ಟುಬಿಡಿ.. ಯಾಕೆಂದರೆ..!
Advertisment
  • ತಲೆ ನೋವಿಗೆ ಮಾತ್ರ ಸೇವನೆ ಎಷ್ಟು ಡೇಂಜರ್?
  • ತಲೆ ನೋವು ಯಾಕೆ ಬರುತ್ತದೆ? ಕಾರಣ ಇಲ್ಲದೆಯೂ ಬರುತ್ತಾ?
  • ಮನೆ ಮದ್ದಿನಿಂದ ತಲೆ ನೋವಿಗೆ ಪರಿಹಾರ ಇದೆ

ಜನರ ಜೀವನಶೈಲಿಯಲ್ಲಿ ಗಮನಾರ್ಹ ಬದಲಾವಣೆಗಳು ಸಂಭವಿಸುತ್ತಿವೆ. ವೃತ್ತಿಪರ ಒತ್ತಡ ಹಾಗೂ ವೈಯಕ್ತಿಕ ಕಾರಣಗಳಿಂದ ತೀವ್ರ ಮಾನಸಿಕ ಆಯಾಸ ಅನುಭವಿಸ್ತಿದ್ದಾರೆ. ಈ ರೀತಿಯ ಜೀವನಶೈಲಿ ವಿವಿಧ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತಿದೆ.

Advertisment

ಅದರಲ್ಲೂ ತಲೆನೋವು ಸಾಮಾನ್ಯ ಸಮಸ್ಯೆ. ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ತಲೆನೋವು ಕೆಲವರಿಗೆ ಸಾಮಾನ್ಯವಾಗಿದ್ದರೆ, ಇನ್ನೂ ಕೆಲವರಿಗೆ ಆಗಾಗ ಬರುತ್ತಿರುತ್ತದೆ. ಈ ನೋವು ದೈನಂದಿನ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಇದಕ್ಕೆ ಒತ್ತಡ, ಹೆಚ್ಚಿದ ಆತಂಕ, ಆಯಾಸ, ಅತಿಯಾದ ಕೆಲಸ, ಕೆಟ್ಟ ಅಭ್ಯಾಸಗಳು ಕಾರಣಗಳಿರಬಹುದು. ಕೆಲವೊಮ್ಮೆ ಕಾರಣವಿಲ್ಲದೆಯೂ ತಲೆನೋವು ಬರಬಹುದು!

ಇದನ್ನೂ ಓದಿ: ಬೆಳ್ ಬೆಳಗ್ಗೆ ಟೀ ಜೊತೆ ರಸ್ಕ್​​ ಸೇವನೆ ಡೇಂಜರ್​​! ಏನಾಗುತ್ತೆ ಗೊತ್ತಾ?

ತಲೆನೋವು ಬಂದಾಗ ಕೆಲವರು ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಆರೋಗ್ಯದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಬೀರುತ್ತದೆ. ಈ ನೋವು ನಿವಾರಕ ಮಾತ್ರೆಗಳು ವಿವಿಧ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು. ಇದರಿಂದ ದೊಡ್ಡ ದೊಡ್ಡ ಸಮಸ್ಯೆಗಳೇ ಎದುರಾಗಬಹುದು! ತಲೆನೋವು ನಿವಾರಿಸಲು ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಈ ಕೆಳಗಿನ ವಿಶಿಷ್ಟ ಮನೆಮದ್ದುಗಳನ್ನು ಮಾಡಿ. ಇದರಿಂದ ನೋವಿನ ಸಮಸ್ಯೆ ದೂರವಾಗುತ್ತದೆ ಎನ್ನುತ್ತಾರೆ ತಜ್ಞರು.

Advertisment

ಹೈಡ್ರೇಟೆಡ್ ಆಗಿರಿ!
ತಲೆನೋವಿಗೆ ಸಾಮಾನ್ಯ ಕಾರಣವೆಂದರೆ ನಿರ್ಜಲೀಕರಣ. ಪ್ರತಿದಿನ ಕನಿಷ್ಠ 8 ರಿಂದ 10 ಗ್ಲಾಸ್ ನೀರು ಕುಡಿದರೆ ನಿರ್ಜಲೀಕರಣದ ಅಪಾಯ ಕಡಿಮೆ ಮಾಡಬಹುದು. ಇದು ತಲೆನೋವನ್ನು ಸಹ ಕಡಿಮೆ ಮಾಡುತ್ತದೆ.

ಯೋಗ-ಧ್ಯಾನ
ಯೋಗ-ಧ್ಯಾನ ಮಾನಸಿಕ ಆರೋಗ್ಯಕ್ಕೆ ಒಳ್ಳೆಯದು. ಸಾಮಾನ್ಯ ದಿನಗಳಲ್ಲಿಯೂ ಮಾಡಬೇಕು. ಪ್ರತಿದಿನ ಹೀಗೆ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ತಲೆನೋವನ್ನು ತಡೆಯುತ್ತದೆ.

ಇದನ್ನೂ ಓದಿ:ಕಿತ್ತಳೆ ಹಣ್ಣಿನಿಂದ ಆರೋಗ್ಯಕ್ಕೆ ಹಲವಾರು ಉಪಯೋಗಗಳು.. ಚಳಿಗಾಲದಲ್ಲಿ ಮೂಸಂಬಿ ಒಳ್ಳೆಯದಾ?

Advertisment

ಬೀಜಗಳನ್ನು ತಿನ್ನಿರಿ
ವಾಲ್‌ನಟ್ಸ್, ಬಾದಾಮಿ ಮತ್ತು ಗೋಡಂಬಿಯನ್ನು ತಿನ್ನುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಅವುಗಳಲ್ಲಿ ಉತ್ತಮ ಮೆಗ್ನೀಸಿಯಮ್ ಹೊಂದಿವೆ. ಇದು ತಲೆನೋವನ್ನು ನಿವಾರಿಸುತ್ತದೆ.

ಶುಂಠಿ ಚಹಾ
ಶುಂಠಿ ಟೀ ಕುಡಿಯುವುದರಿಂದ ತಲೆನೋವು ಕಡಿಮೆಯಾಗುತ್ತದೆ. ಶುಂಠಿಯು ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದು ತಲೆನೋವನ್ನು ಕಡಿಮೆ ಮಾಡುತ್ತದೆ. ಶುಂಠಿ ಚಹಾ ಅನೇಕ ಜನರಿಗೆ ಮಾನಸಿಕ ನೋವು ನಿವಾರಕವಾಗಿಯೂ ಕಾರ್ಯನಿರ್ವಹಿಸುತ್ತದೆ.

ಸಾಕಷ್ಟು ವಿಶ್ರಾಂತಿ ಪಡೆಯಿರಿ
ನಿಮಗೆ ಆಗಾಗ್ಗೆ ತಲೆನೋವು ಇದ್ದರೆ ಸಾಕಷ್ಟು ವಿಶ್ರಾಂತಿ ಪಡೆಯುವುದು ಮುಖ್ಯ. ಇದು ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತದೆ. ಚೆನ್ನಾಗಿ ನಿದ್ದೆ ಮಾಡಲು ಪ್ರಯತ್ನಿಸಿ.

Advertisment

ಇದನ್ನೂ ಓದಿ:ಪ್ರತಿಭಾವಂತ ನಿರ್ದೇಶಕನನ್ನು ಬಲಿ ಪಡೀತಾ ಅವರ ಲೈಫ್​ಸ್ಟೈಲ್​? ಗುರುಪ್ರಸಾದ್​ ಬದುಕಲ್ಲಿ ನಡೆದಿದ್ದು ಏನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment