ಸರ್ಫರಾಜ್​ ಖಾನ್​ಗೆ ಚಾಲೆಂಜ್; ಅಪ್ಪ-ಮಗ ಮಧ್ಯೆ ಫೈಟ್..! ಯಾವ ವಿಚಾರಕ್ಕೆ..?

author-image
Ganesh
Updated On
ಸರ್ಫರಾಜ್​ ಖಾನ್​ಗೆ ಚಾಲೆಂಜ್; ಅಪ್ಪ-ಮಗ ಮಧ್ಯೆ ಫೈಟ್..! ಯಾವ ವಿಚಾರಕ್ಕೆ..?
Advertisment
  • ಯುವ ಬ್ಯಾಟರ್​ ಸರ್ಫರಾಜ್ ಫಿಟ್​ನೆಸ್​​ ಧ್ಯಾನ
  • ದಢೂತಿ ದೇಹ, ಅಪ್ಪ-ಮಗನ ನಡುವೆ ‘ಫೈಟ್​’
  • ಪೈಪೋಟಿಗೆ ಬಿದ್ದ ಸರ್ಫರಾಜ್​, ನೌಶದ್​ ಖಾನ್​

ಟೀಮ್​ ಇಂಡಿಯಾದ ಭವಿಷ್ಯದ ಭರವಸೆ ಸರ್ಫರಾಜ್​ ಖಾನ್​​ ಮನೆಯಲ್ಲಿ ಅಪ್ಪ-ಮಕ್ಕಳ ನಡುವೆ ಫೈಟ್​ ನಡೀತಿದೆ. ಯಾವುದೋ ಹಣಕಾಸಿನ ವಿಚಾರಕ್ಕೋ, ಆಸ್ತಿ ವಿಚಾರಕ್ಕೋ ನಡಿತಿರೋ ಫ್ಲೈಟ್​​ ಇದಲ್ಲ. ಇದೊಂದು ಹೆಲ್ದಿ ಫೈಟ್​​. ಹೆಲ್ತ್​​ಗಾಗಿ, ಫಿಟ್​​ನೆಸ್​​ಗಾಗಿ ಅಪ್ಪ-ಮಗ ಪೈಪೋಟಿಗೆ ಬಿದ್ದಿದ್ದಾರೆ.

ಸರ್ಫರಾಜ್​ ಖಾನ್​​.. ಟೀಮ್​ ಇಂಡಿಯಾದ ಭವಿಷ್ಯದ ಭರವಸೆಯಾಗಿ ಗುರುತಿಸಿಕೊಂಡಿರೋ ಸೆನ್ಸೇಷನಲ್​ ಕ್ರಿಕೆಟರ್​​. 27 ವರ್ಷದ ಯುವ ಆಟಗಾರನ ಮಾಂತ್ರಿಕ ಆಟಕ್ಕೆ ಕ್ರಿಕೆಟ್​ ಲೋಕ ನಿಬ್ಬೆರಗಾಗಿದೆ. ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಧೂಳೆಬ್ಬಿಸಿದ ಈ ಯಂಗ್​​ಸ್ಟರ್​​​ನ ಲೆಜೆಂಡ್​ ಡಾನ್​ ಬ್ರಾಡ್ಮನ್​​ಗೆ ಕ್ರಿಕೆಟ್​ ಲೋಕ ಹೋಲಿಸ್ತಿದೆ.

ಸರ್ಫರಾಜ್​ ಫಿಟ್​ನೆಸ್​​ ಧ್ಯಾನ.!

ಕಳೆದ ಆಸ್ಟ್ರೇಲಿಯಾದ ಪ್ರವಾಸದಲ್ಲಿದ್ದ ಸರ್ಫರಾಜ್​ ಖಾನ್​​, ಇಂಗ್ಲೆಂಡ್​ ಪ್ರವಾಸದ ಇಂಡಿಯಾ ಎ ತಂಡದಲ್ಲೂ ಸ್ಥಾನ ಪಡೆದಿದ್ರು. ಇಂಗ್ಲೆಂಡ್​ ಟೂರ್​​ನ ಮೇನ್​ ಸ್ಕ್ವಾಡ್​​ನಿಂದ ಹೊರಬಿದ್ರು. ಸರ್ಫರಾಜ್​ ಖಾನ್​ರಲ್ಲಿ ಟ್ಯಾಲೆಂಟ್​​ ಇದೆ. ಟೆಕ್ನಿಕ್​ ಸೂಪರ್ಬ್​ ಆಗಿದೆ. ಸಾಮರ್ಥ್ಯದ ಬಗ್ಗೆ ಯಾವುದೇ ಡೌಟೆ ಬೇಡ. ಫಿಟ್​​ನೆಸ್​ ಅನ್ನೋದೆ ಸರ್ಫರಾಜ್​ಗೆ ದೊಡ್ಡ ಹಿನ್ನಡೆಯಾಗಿದೆ. ಇದೀಗ ಇದೇ ಫಿಟ್​​ನೆಸ್​ ಕಾರಣಕ್ಕೆ ಅಪ್ಪ-ಮಗನ ನಡುವೆ ಪೈಪೋಟಿ ಶುರುವಾಗಿದೆ.

ಇದನ್ನೂ ಓದಿ: ಶಾಲೆ ಮೇಲೆ ಬಿದ್ದ ಯುದ್ಧ ವಿಮಾನ.. ಮಕ್ಕಳು ಶಿಕ್ಷಕರು ಸೇರಿ 20 ಮಂದಿಯ ದಾರುಣ ಅಂತ್ಯ..

publive-image

ತೂಕದ ವಿಚಾರಕ್ಕೆ ಅಪ್ಪ-ಮಗ ‘ಫೈಟ್​’.!

ನೌಶದ್​ ಖಾನ್​.. ಸರ್ಫರಾಜ್​ ಖಾನ್​​ರ ತಂದೆ-ಗುರು. ಕ್ರಿಕೆಟ್​ನಲ್ಲಿ ಸರ್ಫರಾಜ್​​ ಏನನ್ನಾದರೂ ಸಾಧಿಸಿದ್ದಾರೆ ಅಂದ್ರೆ ಅದಕ್ಕೆ ಕಾರಣ ಈ ನೌಶದ್​ ಖಾನ್​. ಮುಂಬೈನ ಫೇಮಸ್​​ ಕ್ರಿಕೆಟ್​ ಕೋಚ್​ ಆಗಿರೋ ನೌಶದ್​ ಖಾನ್​, ಬಾಲ್ಯದಲ್ಲೇ ಮಗನಲ್ಲಿದ್ದ ಟ್ಯಾಲೆಂಟ್​ ಗುರುತಿಸಿ ತಿದ್ದಿ ತೀಡಿ ಬೆಳೆಸಿದವರು. ತಮ್ಮದೇ ಗರಡಿಯಲ್ಲಿ ಮಗನಿಗೆ ಕ್ರಿಕೆಟ್​ನ ಪಟ್ಟುಗಳನ್ನ ಕಲಿಸಿದ್ರು. ನೌಶಾದ್​ ಖಾನ್​ ಹೇಳಿಕೊಟ್ಟ ಪಾಠಗಳೇ ಇದು ಸರ್ಫರಾಜ್​ನ ಪ್ರತಿಭಾವಂತ ಆಟಗಾರನನ್ನಾಗಿ ರೂಪಿಸಿದೆ. ಇದೀಗ ಫಿಟ್​ನೆಸ್​ ವಿಚಾರದಲ್ಲೂ ತಂದೆಯೇ ಮಗನಿಗೆ ಗುರುವಾಗಿದ್ದಾರೆ. ಇಷ್ಟೇ ಅಲ್ಲ.. ಮಗನಿಗೆ ತಾವೇ ಫೈಟ್​ ಕೊಡ್ತಿದ್ದಾರೆ.

2 ತಿಂಗಳಲ್ಲಿ 17 ಕೆಜಿ ತೂಕ ಇಳಿಸಿಕೊಂಡ

ಇಂಗ್ಲೆಂಡ್​ ಟೂರ್​​​ಗೂ ಮುನ್ನವೇ ಫಿಟ್​ನೆಸ್​ ಮೇಲೆ ಸಿಕ್ಕಾಪಟ್ಟೆ ವರ್ಕೌಟ್​ ಮಾಡಿದ್ದ ಸರ್ಫರಾಜ್​ ಖಾನ್​ 10 ಕೆಜಿ ತೂಕ ಇಳಿಸಿಕೊಂಡಿದ್ರು. ಇದೀಗ ಕಠಿಣ ವರ್ಕೌಟ್​​​​ ಜೊತೆಗೆ ಕಟ್ಟುನಿಟ್ಟಿನ ಡಯಟ್​ ಪ್ಲಾನ್​ ಫಾಲೋ ಮಾಡ್ತಿರೋ ಸರ್ಫರಾಜ್​​ ಖಾನ್ ಮತ್ತೆ​ ಬರೋಬ್ಬರಿ 17 ಕೆಜಿ ತೂಕ ಇಳಿಸಿಕೊಟ್ಟಿದ್ದಾರೆ. ಫೆವರೀಟ್​ ಫುಡ್ ಮಟನ್​​ ಬಿರಾಯಿನಿ, ರೈಸ್​​, ಮೈದಾ ಮುಂತಾದ ಆಹಾರಗಳಿಗೆ ಕೊಕ್​​ ಕೊಟ್ಟಿದ್ದಾರೆ. ಗಂಟೆಗಟ್ಟಲೇ ಜಿಮ್​ಗಳಲ್ಲಿ ವರ್ಕೌಟ್​ ಮಾಡಿ ಬೆವರಿಳಿಸ್ತಿದ್ದಾರೆ. ವರ್ಕೌಟ್​​ + ಡಯಟ್​​ನ ಫಲವಾಗಿ 17 ಕೆಜಿ ದೇಹ ತೂಕ ಇಳಿದಿಕೊಂಡು ಫುಲ್​ ಸ್ಲಿಮ್​ & ಟ್ರಿಮ್​ ಆಗಿ ಕಾಣ್ತಿದ್ದಾರೆ.

ಇದನ್ನೂ ಓದಿ: ಆಕಾಶ್ ದೀಪ್ ಬೆನ್ನಲ್ಲೇ ಟೀಂ ಇಂಡಿಯಾಗೆ ಮತ್ತೊಂದು ಶಾಕ್.. ಸ್ಟಾರ್​ ಆಲ್​ರೌಂಡರ್ ಔಟ್..!

100 ದಿನ.. 22 ಕೆಜಿ ತೂಕ ಇಳಿಸಿಕೊಂಡ ನೌಶದ್​ ಖಾನ್​

ಈ ದೇಹದ ತೂಕ ಇಳಿಸಿಕೊಳ್ಳೋ ಪ್ರಕ್ರಿಯೆಯಲ್ಲಿ ಮಗನಿಗೆ ತಂದೆ ನೌಶದ್​ ಖಾನ್​ ಸವಾಲ್​ ಎಸೆದಿದ್ದಾರೆ. ಮಗನ ಜೊತೆಗೆ ತಾವು ಕೂಡ ಪೈಪೋಟಿಗೆ ಬಿದ್ದು ತೂಕ ಇಳಿಸಿಕೊಳ್ಳೋಕೆ ಸರ್ಕಸ್​ ನಡೆಸ್ತಿದ್ದಾರೆ. ನೀವು ನಂಬ್ತಿರೋ ಇಲ್ವೋ.. ನೌಶದ್​ ಖಾನ್​ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ನೌಶದ್​ ಖಾನ್​ರ ವರ್ಕೌಟ್​​ ರೂಟಿನ್​ನ ವಿಡಿಯೋವನ್ನ ಮತ್ತೊಬ್ಬ ಪುತ್ರ ಮುಷೀರ್​ ಖಾನ್​ ಇನ್ಸ್​​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಆರಂಭದಲ್ಲಿ 122 ಕೆಜಿ ತೂಕವಿದ್ದ ನೌಶದ್​ ಖಾನ್​ 100 ದಿನಗಳಲ್ಲಿ ಬರೋಬ್ಬರಿ 22 ಕೆಜಿ ತೂಕ ಇಳಿಸಿಕೊದ್ದಾರೆ. ಈ ವಯಸ್ಸಿನಲ್ಲಿ ಹಾರ್ಡ್​​ವರ್ಕ್​​ ಮಾಡಿರೋ ರೀತಿಗೆ ಸೆಲ್ಯೂಟ್​ ಹೊಡಿಯಲೇಬೇಕು.

ಒಟ್ಟಿನಲ್ಲಿ ದಢೂತಿ ದೇಹದ ಕಾರಣಕ್ಕೆ ಟೀಕೆಗೆ ಗುರಿಯಾಗಿದ್ದ ಸರ್ಫರಾಜ್​ ಖಾನ್​ ಫಿಟ್​​ & ಫೈನ್​​ ಆಗಿ ಟೀಮ್​ ಇಂಡಿಯಾಗೆ ರೀ ಎಂಟ್ರಿ ಕೊಡೋಕೆ ರೆಡಿಯಾಗಿದ್ದಾರೆ. ಮಗನಿಗೆ ಕಠಿಣ ಪೈಪೋಟಿ ಕೊಟ್ಟು ತೂಕ ಇಳಿಸಿಕೊಂಡಿರೋ ನೌಶದ್​​ ಹೆಲ್ದಿ ಜೀವನವನ್ನ ಎದುರು ನೋಡ್ತಿದ್ದಾರೆ. ಅದೇನೆ ಇರಲಿ ತೂಕ ಇಳಿಸಿಕೊಳ್ಳೋ ವಿಚಾರದಲ್ಲಿ ಅಪ್ಪ ಮಗ ನಡೆಸಿದ ಪೈಪೋಟಿಯನ್ನ ಮೆಚ್ಚಲೇಬೇಕು.

ಇದನ್ನೂ ಓದಿ: ಭಾರತದ ಉಪರಾಷ್ಟ್ರಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಗದೀಪ್ ಧನಕರ್

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment