ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್​ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ!

author-image
admin
Updated On
ಕೊಲ್ಲೂರು ಮೂಕಾಂಬಿಕೆ ಮೊರೆ ಹೋದ ದರ್ಶನ್​ ಪತ್ನಿ.. ಗಂಡನಿಗಾಗಿ ನವ ಚಂಡಿಕಾಯಾಗ!
Advertisment
  • ಕಾರಾಗೃಹದಲ್ಲಿ ದರ್ಶನ್ ಧ್ಯಾನ, ಪುಸ್ತಕಗಳ ಮೊರೆ ಹೋಗಿದ್ದಾರೆ
  • ಗಂಡನ ಕಾಪಾಡಲು ಮೂಕಾಂಬಿಕಾ ದೇಗುಲಕ್ಕೆ ತೆರಳಿದ ವಿಜಯಲಕ್ಷ್ಮಿ
  • ಮೂಕಾಂಬಿಕಾ ದೇವಸ್ಥಾನದಲ್ಲಿ ದರ್ಶನ್‌ಗಾಗಿ ನವ ಚಂಡಿಕಾಯಾಗ

ಉಡುಪಿ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್‌ಗೆ ಸಂಕಷ್ಟಗಳ ಸರಮಾಲೆಯೇ ಎದುರಾಗಿದೆ. ಇವತ್ತು ಕೋರ್ಟ್‌ ಕೂಡ ದರ್ಶನ್‌ ಮನೆ ಊಟಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದೆ. ಪೊಲೀಸರು ಕೊಲೆ ಪ್ರಕರಣದ ಚಾರ್ಜ್‌ಶೀಟ್ ರೆಡಿ ಮಾಡುತ್ತಿದ್ದಾರೆ.

ಇದನ್ನೂ ಓದಿ:‘ದರ್ಶನ್ ತುಂಬಾ ಮುಗ್ಧ ಹುಡುಗ’.. ದಾಸನ ಸ್ಥಿತಿ ನೆನೆದು ಕಣ್ಣೀರು ಹಾಕಿದ ಹಿರಿಯ ನಟಿ ಗಿರಿಜಾ ಲೋಕೇಶ್​

ಜೈಲಿನಲ್ಲಿರುವ ದಾಸನಿಗೆ ಒಂದೊಂದು ಗಂಟೆ, ಒಂದೊಂದು ದಿನವೂ ಒಂದೊಂದು ಯುಗದಂತೆ ಭಾಸವಾಗುತ್ತಿದೆ. ಕಾರಾಗೃಹದಲ್ಲಿ ದರ್ಶನ್ ಧ್ಯಾನ, ಪುಸ್ತಕಗಳ ಮೊರೆ ಹೋಗಿದ್ರೆ, ಗಂಡನ ಕಾಪಾಡಲು ಪತ್ನಿ ವಿಜಯಲಕ್ಷ್ಮಿ ಅವರು ಕೊಲ್ಲೂರಿಗೆ ತೆರಳಿದ್ದಾರೆ.

publive-image

ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಉಡುಪಿ ಜಿಲ್ಲೆ ಬೈಂದೂರು ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇಗುಲಕ್ಕೆ ಆಗಮಿಸಿದ್ದಾರೆ. ಆಪ್ತರ ಜೊತೆ ಕೊಲ್ಲೂರಿಗೆ ಆಗಮಿಸಿರುವ ವಿಜಯಲಕ್ಷ್ಮಿ ಅವರು ಮೂಕಾಂಬಿಕಾ ದೇವಿಯ ವಿಶೇಷ ದರ್ಶನ ಪಡೆದಿದ್ದಾರೆ.

ಇದನ್ನೂ ಓದಿ: ಮನೆ ಊಟಕ್ಕೆ ಹಂಬಲಿಸಿದ್ದ ದಾಸನಿಗೆ ಆಘಾತ; ದರ್ಶನ್‌ ಅರ್ಜಿ ವಜಾ ಆಗಿದ್ದಕ್ಕೆ 3 ಕಾರಣಗಳಿವೆ; ಏನದು? 

publive-image

ದರ್ಶನ್ ಬಿಡುಗಡೆಗಾಗಿ ದೇವರ ಮೊರೆ ಹೋಗಿರುವ ವಿಜಯಲಕ್ಷ್ಮಿ ಅವರು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಸಂಕಲ್ಪ, ಪಾರಾಯಣ ಮಾಡುತ್ತಿದ್ದಾರೆ. ದೇವಸ್ಥಾನದಲ್ಲಿ ನಾಳೆ ಬೆಳಗ್ಗೆ ದರ್ಶನ್‌ಗಾಗಿ ನವ ಚಂಡಿಕಾಯಾಗ ಕೂಡ ನಡೆಯುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment