/newsfirstlive-kannada/media/post_attachments/wp-content/uploads/2024/05/Accident-darwad.jpg)
ಧಾರವಾಡ: ನೇವಿ ಯೋಧ ಬೈಕ್ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಧಾರವಾಡ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ಅಣ್ಣಿಗೇರಿ ಪಟ್ಟಣದ ಹೊರವಲಯದಲ್ಲಿ ಘಟನೆ ಸಂಭವಿಸಿದೆ.
ಅಪಘಾತದಲ್ಲಿ ಸಾವನ್ನಪ್ಪಿರುವ ವ್ಯಕ್ತಿಯನ್ನು ತೆಲಂಗಾಣ ಮೂಲದ ನೆಲಗೊಂಡ ಜಿಲ್ಲೆಯ ಸಂದೀಪ್ ರೆಡ್ಡಿ (26) ಎಂದು ಗುರುತಿಸಲಾಗಿದೆ. ತಿಂಗಳ ರಜೆ ಮುಗಿಸಿ ಪುನಃ ಕಾರವಾರಕ್ಕೆ ಹೊರಟಿದ್ದ ವೇಳೆ ಅಪಘಾತ ಎದುರಾಗಿದೆ.
ಇದನ್ನೂ ಓದಿ: ಪೂರ್ವ ಮುಂಗಾರು ಆರ್ಭಟಕ್ಕೆ ದೇವರನಾಡು ತತ್ತರ.. ಪ್ರವಾಹ, ನದಿಗಳಂತಾದ ರಸ್ತೆಗಳು
ರಸ್ತೆ ತಿರುವು ಪಡೆಯುವ ವೇಳೆ ಬೈಕ್ ನಿಯಂತ್ರಣ ಕಳೆದುಕೊಂಡು ಅಪಘಾತ ನಡೆದಿದೆ. ಅಪಘಾತದಲ್ಲಿ ಸಂದೀಪ್​ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ. ಅಣ್ಣಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us