ಗೆಳತಿ ಕಣ್ಣು ಬಿಟ್ಟಾಗ ಪಕ್ಕದಲ್ಲೇ ರಕ್ತದಲ್ಲಿ ಮಿಂದೆದ್ದು ಹೆಣವಾಗಿ ಬಿದ್ದಿದ್ದ ನವ್ಯಾ
ಮನೆಯ ಡೋರ್ ಓಪನ್ ಮಾಡಿದಾಗ ಪೊಲೀಸರ ಜೊತೆಯಲ್ಲಿದ್ದ ನವ್ಯಾ ಗಂಡ
ಪ್ರೀತಿಯ ಅಮಲಿನಲ್ಲಿದ್ದ ತಾನೊಬ್ಬ ಆಗರ್ಭ ಶ್ರೀಮಂತ ಅಂತ ಪೋಸ್ ಕೊಡ್ತಿದ್ದ
ಬೆಂಗಳೂರು: ಕೆಂಗೇರಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿ ಡ್ಯಾನ್ಸ್ ಕೊರಿಯೋಗ್ರಾಫರ್ ಬರ್ಬರ ಹತ್ಯೆಯಾಗಿದೆ. ರಾತ್ರಿ ಮಲಗಿದ್ದ ನವ್ಯಾ, ಸೂರ್ಯ ಮೂಡುವ ಹೊತ್ತಿಗೆ ಹೆಣವಾಗಿ ಹೋಗಿದ್ದಳು. ನವ್ಯಾ ಪಕ್ಕದಲ್ಲಿ ಮಲಗಿದ್ದ ಗೆಳತಿ ನವ್ಯಾ ದೇಹ ಕಂಡು ಬೆಚ್ಚಿ ಬಿದಿದ್ದಳು. ಆದ್ರೆ ಮನೆಯ ಡೋರ್ ಓಪನ್ ಮಾಡ್ದಾಗ ನವ್ಯಾ ಗಂಡ ಪೊಲೀಸರ ಜೊತೆಯಲ್ಲಿ ಬಂದು ನಿಂತಿದ್ದ. ನವ್ಯಾ ಗೆಳತಿ ಕಣ್ಣು ಬಿಟ್ಟಾಗ ಪಕ್ಕದಲ್ಲಿದ್ದ ನವ್ಯಾ ದೇಹ ರಕ್ತದಲ್ಲಿ ಮಿಂದೆದಿತ್ತು. ನೋಡಿದ್ರೆ ನವ್ಯಾ ಜೀವ ಹೋಗಿತ್ತು. ಅಸಲಿಗೆ ನವ್ಯಾಶ್ರೀ ಮತ್ತು ಐಶ್ವರ್ಯ ಮಂಗಳವಾರ ರಾತ್ರಿ ಪಾರ್ಟಿ ಮಾಡಿ ಮನೆ ಸೇರಿದ್ರು. ಫುಲ್ ಪಾರ್ಟ್ ಮಾಡಿದ್ದ ಕಾರಣ ನವ್ಯಾ ಗೆಳತಿ ಐಶ್ವರ್ಯ ನಿದ್ದೆಗೆ ಜಾರಿ ಬಿಟ್ಟಿದ್ದಳು.
ಇದನ್ನೂ ಓದಿ: ಜೀನ್ಸ್ ಪ್ಯಾಂಟ್, PUMA ಟೀ-ಶರ್ಟ್, ಕತ್ತಲ್ಲಿ ಕೂಲಿಂಗ್ ಗ್ಲಾಸ್.. ಬಳ್ಳಾರಿಗೆ ಬಂದ ಭಲೇ ಭೂಪತಿ ಹೊಸ ವಿವಾದ..!
ಈ ವೇಳೆ ಕಿರಣ್ ಕಿಟಕಿ ಮೂಲಕ ಮನೆಯೊಳಗೆ ಬಂದು ದೇವರ ಮನೆಯಲ್ಲಿ ಅಡಗಿ ಕೂತಿದ್ದ. ಇನ್ನೂ ಮಲಗಿರದ ನವ್ಯಾ ತನ್ನ ಗೆಳೆಯನೊಬ್ಬನ ಜೊತೆ ವಿಡಿಯೋ ಕಾಲ್ನಲ್ಲಿ ಈ ದೃಶ್ಯ ಕೂಡ ಕಿರಣ್ ನೋಡಿದ್ದ. ಬಳಿಕ ದೇವರ ಮನೆಯಿಂದ ಹೊರ ಬಂದವನೇ ನವ್ಯಾ ಜೊತೆ ಜಗಳಕ್ಕೆ ಇಳಿದಿದ್ದ. ಇದಾದ ಬಳಿಕ ಮತ್ತೆ ಆಕೆ ರೂಮ್ಗೆ ಎಂಟ್ರಿ ಕೊಟ್ಟಿದ್ದ ಕಿರಣ್ ಕಬ್ಬಿಣದ ರಾಡ್ನಿಂದ ನವ್ಯಾ ತಲೆಗೆ ಹೊಡೆದಿದ್ದಾನೆ. ಬಳಿಕ ಆಕೆ ಬಳಿ ಇದ್ದ ಚಾಕುವಿನಿಂದಲೇ ಕತ್ತು ಕೊಯ್ದು ಎಸ್ಕೇಪ್ ಆಗಿದ್ದಾನೆ. ಆದ್ರೆ ಕೊಲೆ ಮಾಡಿ ಎಸ್ಕೇಪ್ ಆಗುವ ಮುನ್ನ ಕಿರಣ್ ಮನೆಯಲ್ಲಿದ್ದ ಫ್ಲೋರ್ ಕ್ಲೀನರ್ ಅನ್ನ ಕುಡಿದು ತಾನೇ ಹೋಗಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅತ್ತ ಬೆಳಗ್ಗೆ ಎದ್ದು ನವ್ಯಾ ಗೆಳತಿ ಐಶ್ವರ್ಯ ನೋಡ್ದಾಗ ನವ್ಯಾ ಕೊಲೆಯಾಗಿರೋದು ಗೊತ್ತಾಗಿದೆ.
ಪೊಲೀಸರಿಗೆ ವಿಚಾರ ಗೊತ್ತಾಗ್ತಿದ್ದ ಆಸ್ಪತ್ರೆಯಲ್ಲಿದ್ದ ಕಿರಣ್ನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆಗ ಪೊಲೀಸರು ವಿಚಾರಣೆ ನಡೆಸಿದ ಕಿರಣ್ ಪತ್ನಿಯನ್ನ ತಾನೇ ಕೊಲೆ ಮಾಡಿರೋದಾಗಿ ಒಪ್ಪಿಕೊಂಡಿದ್ದಾನೆ. ಅಷ್ಟು ಚೆಂದವಿರುವ ಹುಡುಗಿ ಕ್ಯಾಬ್ ಡ್ರೈವರ್ ಅನ್ನ ಪ್ರೀತಿ ಮಾಡಿದ್ದೇಗೆ ಅಂತ ಅನ್ನಿಸಿರಬಹುದು. ಆದ್ರೆ ಈ ಪ್ರೀತಿಯಲ್ಲಿ ಒಂದು ಮೋಸ ಇತ್ತು. ಅದೇ ಮೋಸದ ಪ್ರೀತಿಗೆ ಬಿದ್ದಿದ್ದ ನವ್ಯಾ ಈಗ ಬಲಿಯಾಗಿ ಹೋಗಿದ್ದಾಳೆ. ಅಸಲಿಗೆ ಈ ಕಿರಣ್ ಮೂಲತಃ ಚಿಕ್ಕಬಳ್ಳಾಪುರದ ನಿವಾಸಿ. ಬೆಂಗಳೂರಿನ ವಿಜಯನಗರದಲ್ಲಿ ತಾಯಿ ಜೊತೆ ವಾಸ ಮಾಡುತ್ತಿದ್ದ. ಇನ್ನೂ ನವ್ಯಾ ಬೆಂಗಳೂರಿನ ಕೆಂಗೇರಿಯಲ್ಲಿ ಖಾಸಗಿ ಶಾಲೆಯಲ್ಲಿ ಡ್ಯಾನ್ಸ್ ಟೀಚರ್ ಆಗಿ ಕೆಲಸ ಮಾಡ್ತಿದ್ಳು. ಆಗ ಈ ಕಿರಣ್ ಈ ಏರಿಯಾದಲ್ಲಿ ಸುತ್ತಾಡಿಕೊಂಡಿದ್ದಾಗ ನವ್ಯಾ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿತ್ತು. ಹೇಗಾದ್ರೂ ಮಾಡಿ ನವ್ಯಾಳನ್ನ ಪಡಿಬೇಕು ಅಂತ ಆಸೆ ಬಿದ್ದಿದ್ದ ಕಿರಣ್ ಐಷಾರಾಮಿ ಮನೆ ಹಾಗೂ ಕಾರುಗಳ ಮುಂದೆ ಫೋಟೋ ತೆಗೆದು ತಾನೊಬ್ಬ ಆಗರ್ಭ ಶ್ರೀಮಂತ ಅಂತ ಪೋಸ್ ಕೊಡ್ತಿದ್ದ. ನವ್ಯಾ ಈ ಕಿರಣ್ ಕಳಿಸಿದ್ದ ಫೋಟೋಗಳನ್ನ ಸತ್ಯವೆಲ್ಲ ಅಂತ ನಂಬಿ ಪ್ರೀತಿ ಮಾಡೋದಕ್ಕೆ ಒಪ್ಪಿಕೊಂಡಿದ್ಳು. ಆದ್ರೆ ಮುಂದೆ ನವ್ಯಾಗೆ ಕಿರಣ್ ಅಸಲಿ ಮುಖದ ಅನಾವರಣ ಆಗಿತ್ತು.
ಪ್ರೀತಿ ಪ್ರೇಮ ಅಂತೆಲ್ಲ ಸುತ್ತಾಡಿದ ಬಳಿಕ ಈ ಕಿರಣ್ ನವ್ಯಾಗೆ ಸತ್ಯ ಹೇಳಿದ್ದ. ತಾನೊಬ್ಬ ಡ್ರೈವರ್ ಬಂಗಲೆ ಕಾರ್ ಯಾವುದು ಇಲ್ಲ. ತಾಯಿ ಜೊತೆಯಲ್ಲಿ ವಿಜಯನಗರದಲ್ಲಿ ಇರೋದಾಗಿ ಹೇಳಿದ್ದ. ಸತ್ಯ ಕೇಳಿ ನವ್ಯಾಗೆ ಶಾಕ್ ಆಗಿತ್ತು. ಆದ್ರೆ ಪ್ರೀತಿ ಮಾಡಿದ್ದಳು. ಮನಸ್ಸು ಕೊಟ್ಟಾಗಿತ್ತು. ಕಾಲ ಮೀರಿ ಹೋಗಿತ್ತು. ಸತ್ಯ ಗೊತ್ತಾದ ದಿನವೇ ನವ್ಯಾ ಕಿರಣ್ನಿಂದ ದೂರ ಆಗಿದ್ರೆ ಇಂದು ಅವಳಿಗೆ ಏನು ಆಗುತ್ತಾ ಇರಲಿಲ್ಲ. ಆದ್ರೆ, ನವ್ಯಾ ಡ್ರೈವರ್ ಆದ್ರೂ ಪರವಾಗಿಲ್ಲ ಪ್ರೀತಿ ಮಾಡಿದ್ದೀನಿ ಮದುವೆಯಾಗೋಣ ಅಂದಿದ್ಳು. ಕೊರೊನಾ ಸಮಯದಲ್ಲಿ ಪ್ರೀತಿ ವಿಚಾರವನ್ನು ಮನೆಯಲ್ಲೂ ಹೇಳಿದ್ಳು. ಅದ್ರಂತೆ ಎರಡು ಕುಟುಂಬದವರು ಒಪ್ಪಿ ಧರ್ಮಸ್ಥಳದಲ್ಲಿ ಮದುವೆ ಮಾಡಿದ್ರು. ಮದುವೆಯಾದ ಕೆಲ ದಿನಗಳ ಕಾಲ ಈ ಜೋಡಿ ಚೆನ್ನಾಗಿಯೇ ಇತ್ತು. ಆದ್ರೆ ಮದುವೆಯಾದ ಮೂರ ವರ್ಷದ ನಂತರ ಕಿರಣ್ ನವ್ಯಾ ಶೀಲದ ಬಗ್ಗೆ ಶಂಕೆ ಪಡೋದಕ್ಕೆ ಶುರು ಮಾಡಿದ್ದಾನೆ.
ಇದೇ ವಿಚಾರಕ್ಕೆ ಕಳೆದ ಆರು ತಿಂಗಳಿನಿಂದ ನವ್ಯಾ ಮತ್ತು ಕಿರಣ್ ನಡುವೆ ಜಗಳ ಆಗ್ತಿತ್ತಂತೆ. ಅದ್ರಂತೆ ಮಂಗಳವಾರ ಕೂಡ ಕಿರಣ್ ನವ್ಯಾ ಮನೆಗೆ ಬಂದು ಕಿರಿಕ್ ತೆಗೆದಿದ್ದ. ಇನ್ನೊಂದೆಡೆ ಹೆಂಡತಿ ಬೇರೊಬ್ಬರನ ಜೊತೆ ವಿಡಿಯೋ ಕಾಲ್ನಲ್ಲಿ ಮಾತಾಡೋದು ಕಿರಣ್ ಕೋಪಕ್ಕೆ ಕಾರಣವಾಗಿತ್ತು. ಹಾಗಾಗಿ ಪತ್ನಿ ಗಾಢ ನಿದ್ರೆಯಲ್ಲಿದ್ದಾಗ ಆಕೆ ಕತ್ತು ಕೊಯ್ದು ಜೀವ ತೆಗೆದು ಬಿಟ್ಟಿದ್ದ. ಇತ್ತ ನವ್ಯಾಳನ್ನ ಕಳೆದುಕೊಂಡಿರುವ ಹೆತ್ತವರ ಗೋಳು ಹೇಳ ತೀರದಾಗಿದೆ. ನಮ್ಮ ಮಗಳು ಏನ್ ಮಾಡಿದ್ರು ತಪ್ಪು ಅಂತಿದ್ದ. ಯಾರೇ ಕಾಲ್ ಮಾಡಿದ್ರು ಅವನು ಅನುಮಾನ ಪಡ್ತಿದ್ದ. ಮನೆಯಲ್ಲಿ ಮಾರಾಕಾಸ್ತ್ರಗಳನ್ನ ತಂದಿಟ್ಟಿದ್ದ. ನನ್ನ ಮಗಳಿಗೆ ಪೊಲೀಸ್ ಕಂಪ್ಲೇಟ್ ಕೊಡೋಣ ಅಂದ್ರೂ ಅದಕ್ಕೂ ಅವನು ಬಿಟ್ಟಿರಲ್ಲಿಲ್ಲ. ನನ್ನ ಮಗಳಿಗೆ ಇನ್ನಿಲ್ಲದ ಚಿತ್ರಹಿಂಸೆ ಕೊಟ್ಟು ಈಗ ಅವಳ ಜೀವವನ್ನೆ ಬಲಿ ಪಡೆದಿದ್ದಾನೆ ಅಂತ ನವ್ಯಾ ತಾಯಿ ಕಣ್ಣೀರು ಸುರಿಸಿದ್ದಾರೆ.
ಇದನ್ನೂ ಓದಿ: ಕೂಲಿಂಗ್ ಗ್ಲಾಸ್, ಹ್ಯಾಂಡ್ ಶೇಕ್ ಮಾಡಿ ಜೈಲಿಗೆ ಎಂಟ್ರಿ; ಕರ್ಕೊಂಡು ಬಂದ ಸಿಬ್ಬಂದಿಗೆ ಸಂಕಷ್ಟ ತಂದಿಟ್ಟ ದರ್ಶನ್..!
ಅಪ್ಪ ಅಮ್ಮ ಮನೆಗೆ ಕರೆದಿದ್ರೂ ನವ್ಯಾ ಗಂಡನ ಮನೆ ಬಿಟ್ಟು ಬಂದಿರಲಿಲ್ಲ. ಗಂಡನೇ ಅಲ್ವಾ ಅಂತ ಸಹಿಸಿಕೊಂಡಿದ್ಳಂತೆ. ಆದ್ರೀಗ ಪಾಪಿ ಗಂಡ ಆಕೆ ಜೀವವನ್ನೆ ತೆಗೆದಿದ್ದು ಅನ್ಯಾಯವಾಗಿ ನಮ್ಮ ಮಗಳನ್ನ ಕೊಂದು ಹಾಕಿದ್ದಾನೆ ನವ್ಯಾ ಪೋಷಕರು ಗೋಳಾಡ್ತಿದ್ದಾರೆ. ಪಾಪಿ ಮಾಡಿದ ಕೃತ್ಯಕ್ಕೆ ಮನೆ ಮಗಳ ಪ್ರಾಣ ಹೋಗಿದೆ ಅಂತ ಕಣ್ಣೀರು ಹಾಕ್ತಿದ್ದಾರೆ. ಕಿರಣ್ ಏನೂ ಕೆಲಸ ಮಾಡದೇ ಪೋಲಿಯಂತೆ ಅಡ್ಡಾಡಿಕೊಂಡುತ್ತಿದ್ದನಂತೆ. ನವ್ಯಾ ಎಲ್ಲಿ ಹೋಗ್ತಾಳೆ ಎಲ್ಲಿಗೆ ಬರ್ತಾಳೆ ಅಂತೆಲ್ಲ ಕಾಯೋದು ಮಾಡುತ್ತಿದ್ದನಂತೆ. ಇದ್ರಿಂದ ನನ್ನ ಮಗಳು ನೊಂದು ಹೋಗಿದ್ಳು ಅಂತ ಈ ನವ್ಯಾ ತಾಯಿ ಕೊಲೆಗಾರ ಕಿರಣ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಇನ್ನೊಂದೆಡೆ ನವ್ಯಾ ತಂದೆ ಕೂಡ ಮಗಳನ್ನ ಕಳ್ಕೊಂಡು ಕಂಗಾಲಾಗಿದ್ದಾರೆ. ನಮಗೆ ಇದ್ದಿದ್ದು ಎರಡೇ ಹೆಣ್ಮಕ್ಕಳು. ಅಳಿಯನನ್ನೇ ಮಗನಾಗಿ ನೋಡಿದ್ವಿ. ಆದ್ರೀಗ ಅವನು ಇಷ್ಟು ಕ್ರೂರಿಯಾಗ್ತಾನೆ ಅನ್ನೋದನ್ನ ನಾವು ಕನಸ್ಸಲ್ಲೂ ಊಹಿಸಿರಲಿಲ್ಲ. ಕತ್ತು ಕೊಯ್ಯುವ ಮಟ್ಟಕ್ಕೆ ರಾಕ್ಷಸನಾಗಿದ್ದಾನೆ ಅಂದ್ರೆ ನಂಬೋಕೆ ಆಗ್ತಿಲ್ಲ. ನಮ್ಮ ಬದುಕನ್ನೇ ಬರ್ಬಾದ್ ಮಾಡಿದ ಅಂತ ದುಃಖಿತರಾಗಿದ್ದಾರೆ. ಈ ಜೋಡಿ ಪ್ರೀತಿ ಮಾಡಿ ಮದುವೆಯಾಗಿತ್ತು. ಸಣ್ಣ ಪುಟ್ಟ ಮನಸ್ತಾಪಗಳಿದ್ರೆ ಕೂತು ಮಾತಾಡಿ ಬಗೆಹರಿಸಿಕೊಳ್ಳಬಹುದಿತ್ತು. ಹೆಂಡತಿ ತಪ್ಪು ಮಾಡಿದ್ರೆ ಗಂಡನಾದವನು ಬುದ್ಧಿ ಹೇಳಿ ಸರಿ ದಾರಿಗೆ ತರಬೇಕಿತ್ತು. ಆದ್ರೆ ಜೀವ ತೆಗೆಯೋ ಮಟ್ಟಕ್ಕೆ ಹೋಗಿದ್ದು ಮಾತ್ರ ನಿಜಕ್ಕೂ ದುರಂತವೇ ಸರಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ