/newsfirstlive-kannada/media/post_attachments/wp-content/uploads/2025/05/Sharif-brother.jpg)
ಮೊನ್ನೆಯಷ್ಟೇ ಭಾರತದ ಮೇಲೆ ದಾಳಿ ಮಾಡೋದು ಬೇಡ ಅಂತ ನವಾಜ್ ಷರೀಫ್ ಸಹೋದರ ಶೆಹಬಾಜ್ಗೆ ಕಿವಿಮಾತು ಹೇಳಿದ್ದ ಅನ್ನೋ ವಿಚಾರ ಹರಿದಾಡಿತ್ತು. ಆದ್ರೆ ಈಗ ಇದಕ್ಕೆ ತದ್ವಿರುದ್ಧ ಮಾಹಿತಿ ಹೊರಬಿದ್ದಿದೆ. ಭಾರತದ ಮೇಲಿನ ದಾಳಿಗೆ ಪ್ಲಾನ್ ಮಾಡಿದ್ದೇ ಪಾಕ್ನ ಮಾಜಿ ಪ್ರಧಾನಿ ನವಾಜ್ ಷರೀಫ್ ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.
ಷರೀಫ್ ಸಹೋದರರು. ಮೊದಲು ನವಾಜ್ ಷರೀಫ್, ಈಗ ತಮ್ಮ ಶೆಹಬಾಜ್ ಷರೀಫ್ ಪಾಪಿ ಪಾಕಿಸ್ತಾನದ ಚುಕ್ಕಾಣಿ ಹಿಡಿದವರು. ಮೊನ್ನೆ ಮೊನ್ನೆಯಷ್ಟೇ ಭಾರತ ಹಾಗೂ ಪಾಕಿಸ್ತಾನ ನಡುವೆ ಉದ್ವಿಗ್ನ ಪರಿಸ್ಥಿತಿ ವೇಳೆ ನವಾಜ್ ಷರೀಫ್ ತಮ್ಮ ಶೆಹಬಾಜ್ಗೆ ಯುದ್ಧ ಬೇಡ ಸಹೋದರ ಅಂತ ಹೇಳಿದ್ದ. ಆದ್ರೆ ಈಗ ಈ ನವಾಜನ ನವ ರಂಗಿನಾಟ ಬಯಲಾಗಿದೆ.
ಇದನ್ನೂ ಓದಿ: ಭಾರತ, ಪಾಕ್ ಸಂಘರ್ಷದಲ್ಲಿ ಗೆಲುವು ಯಾರಿಗೆ? ಎಷ್ಟು ಕೋಟಿ ನಷ್ಟ? ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ!
ಪ್ಲಾನ್ ಮಾಡಿದ್ದೇ ನವಾಜ್ ಷರೀಫ್
ಪಾಕಿಸ್ತಾನ ಆರ್ಥಿಕವಾಗಿ ಹದಗೆಟ್ಟಿದೆ. ಭಿಕ್ಷಾಪಾತ್ರೆ ಹಿಡಿದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಭಿಕ್ಷೆ ಬೇಡುತ್ತಿದೆ. ಇಂತ ಪರಿಸ್ಥಿತಿಯಲ್ಲಿ ಭಾರತದ ಜೊತೆ ಸಂಘರ್ಷಕ್ಕಿಳಿದು ಬಾಲ ಸುಟ್ಟ ಬೆಕ್ಕಿನಂತೆ ಕದನವಿರಾಮದ ಮೊರೆ ಹೋಗಿದೆ. ಈಗ ಹನಿ ನೀರಿಗಾಗಿಯೂ ಭಾರತದ ಮುಂದೆ ಮಂಡಿಯೂರಿ ಅಂಗಲಾಚ್ತಿದೆ. ಇದೆಲ್ಲದರ ನಡುವೆ ಭಾರತದ ಮೇಲಿನ ದಾಳಿಗೆ ಪ್ಲಾನ್ ಮಾಡಿದ್ದೇ ನಸುಗುನ್ನಿಯಂತ ನವಾಜ್ ಷರೀಪ್ ಅನ್ನೋದು ಬಯಲಾಗಿದೆ. ಕೋರ್ಟ್, ಕೇಸ್ಗೆ ಭಯ ಬಿದ್ದು ಹುಟ್ಟಿದ ನೆಲವನ್ನೇ ತೊರೆದು ಲಂಡನ್ಗೆ ತೆರಳಿರುವ ಇದೇ ನವಾಜನೇ ದಾಳಿಗೆ ಪ್ಲಾನ್ ಮಾಡಿದ್ದನಂತೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ಪಂಜುರ್ಲಿ ಆಶೀರ್ವಾದ.. ಕುಟುಂಬಸ್ಥರ ವಿಶೇಷ ಹರಕೆ ಉತ್ಸವದಲ್ಲಿ ಸಿಂಪಲ್ ಸ್ಟಾರ್..!
ದಾಳಿಗೆ ನವಾಜ್ ಮಾಸ್ಟರ್ಮೈಂಡ್!
ಭಾರತ ಮೇಲೆ ಪಾಕಿಸ್ತಾನ ನಡೆಸಿದ ದಾಳಿಯ ಕ್ರೆಡಿಟ್ ಅದೇನೋ ದೊಡ್ಡ ಸಾಧನೆ ಎಂಬಂತೆ ನವಾಜ್ ಷರೀಫ್ಗೆ ಸಿಕ್ಕಿದೆ. ಕೋರ್ಟ್ ಕೇಸ್, ಜೈಲು ವಾಸ ಬೇಡ ಅಂತ ಪಾಕ್ ಮಾಜಿ ಪ್ರಧಾನಿ ನವಾಜ್ ಷರೀಫ್ ಲಂಡನ್ನಲ್ಲಿ ವಾಸವಾಗಿದ್ದಾರೆ. ಲಂಡನ್ನಲ್ಲಿ ಕುಳಿತುಕೊಂಡೇ ಈ ನವಾಜ್ ದಾಳಿ ಮಾಡುವ ಪ್ಲಾನ್ ಮಾಡಿದ್ದ. ಆದ್ರೆ ಬಳಿಕ ಅದೆಲ್ಲಿ ಜ್ಞಾನೋದಯವಾಯ್ತೋ ಭಾರತದ ಶಕ್ತಿ ಮನಗಂಡು ದಾಳಿ ಬೇಡ, ರಾಜಿ ಮಾಡಿಕೊಳ್ಳಿ ಅಂತ ಸಹೋದರನಿಗೆ ಹೇಳಿದ್ದ. ಇತ್ತ ಅಮೆರಿಕ ಹೇಳಿದಂತೆ ತಮ್ಮ ಶೆಹಬಾಜ್ ಷರೀಫ್ ಮಾಡುತ್ತಿದ್ರೆ ಅತ್ತ ನವಾಜ್ ಷರೀಫ್ ಭಾರತದ ವಿರುದ್ಧ ಪಿತೂರಿ, ಷಡ್ಯಂತ್ರ ಮಾಡಿ ದಾಳಿಗೆ ಪ್ಲಾನ್ ಮಾಡಿದ್ದ ಅನ್ನೋದು ಗೊತ್ತಾಗಿದೆ.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾರುಣ ಘಟನೆ.. ಸ್ಥಳದಲ್ಲೇ ಜೀವ ಬಿಟ್ಟ ಅಮ್ಮ-ಮಗ, ಆಸ್ಪತ್ರೆಯಲ್ಲಿ ಅಪ್ಪ ನಿಧನ
ಈ ಸ್ಫೋಟಕ ವಿಚಾರವನ್ನು ಬಾಯ್ಬಿಟ್ಟಿದ್ದು ಆಡಳಿತರೂಢ ಪಾಕಿಸ್ತಾನ್ ಮುಸ್ಲಿಂ ಲೀಗ್ ನವಾಜ್ ಪಕ್ಷದ ಹಿರಿಯ ನಾಯಕಿಯೇ.. ನವಾಜ್ ಕಾರ್ಯವೇ ಅವರ ಬಗ್ಗೆ ಹೇಳುತ್ತದೆ ಅಂತ ಪಂಜಾಬ್ ಪ್ರಾಂತೀಯ ಸರಕಾರದ ಮಾಹಿತಿ ಸಚಿವೆ ಅಜ್ಮಾ ಬುಖಾರಿ ಬಡಾಯಿ ಕೊಚ್ಚಿಕೊಂಡಿದ್ದಾರೆ.
ಅದೇನೇ ಇರಲಿ ಮೊನ್ನೆಯಷ್ಟೇ ಭಾರತದ ಜೊತೆ ಯುದ್ಧ ಬೇಡ ಅಂತ ಹೇಳಿದ್ದೇ ನವಾಜ್ ಅಂತ ಹೇಳಲಾಗಿತ್ತು. ಈಗ ಭಾರತದ ಮೇಲಿನ ದಾಳಿಗೆ ಪ್ಲಾನ್ ಮಾಡಿದ್ದೇ ಈ ದುಷ್ಟ ಅನ್ನೋದು ಬಯಲಾಗಿದೆ. ಹೀಗಾಗಿಯೇ ಪಾಕಿಸ್ತಾನದ್ದು ನರಿ ಬುದ್ಧಿ ಅನ್ನೋ ಮಾತು ಅದಕ್ಕೆ ಪಕ್ಕಾ ಸೂಟ್ ಆಗುತ್ತೆ.
ಇದನ್ನೂ ಓದಿ: ಭಾರತಕ್ಕೆ ದ್ರೋಹ ಬಗೆದವ್ರಿಗೆ ಪಾಠ; ದೇಶದ ವಿಮಾನ ನಿಲ್ದಾಣಗಳಿಂದ ಟರ್ಕಿ ಕಂಪನಿ ಕಿಕ್ಔಟ್..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ