Advertisment

ಚಿಕ್ಕಮಗಳೂರಲ್ಲಿ 6 ಕೆಂಪು ಉಗ್ರರು ಶರಣಾಗತಿ.. ಸರ್ಕಾರದ ಮುಂದಿಟ್ಟಿರುವ 10 ಬೇಡಿಕೆಗಳು ಏನೇನು?

author-image
Ganesh
Updated On
ಸರೆಂಡರ್​ ಆದ ಮೋಸ್ಟ್​ ವಾಂಟೆಡ್​​ ನಕ್ಸಲರ ಹಿನ್ನೆಲೆ ಏನು? ಇವರ ಹಿಸ್ಟರಿ ಕೇಳಿದ್ರೆ ಬೆಚ್ಚಿಬೀಳ್ತೀರಾ!
Advertisment
  • ವಿಕ್ರಂ ಗೌಡನ ಎನ್​ಕೌಂಟರ್​ನಿಂದ ಬೆಚ್ಚಿಬಿದ್ದ ನಕ್ಸಲರು
  • ಕಾಫಿನಾಡಿನ ಕಾಡಲ್ಲಿ ನಕ್ಸಲರ ಯುಗಾಂತ್ಯ ಸನ್ನಿತ
  • ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಮುಂದೆ ಶರಣಾಗತಿ

ಪಶ್ಚಿಮಘಟ್ಟ ಹಾಗೂ ಮಲೆನಾಡಿನಲ್ಲಿ ಅಡಗಿದ್ದ 6 ಮಂದಿ ನಕ್ಸಲರು ಶರಣಾಗತಿ ಬಯಸಿ ನಾಗರಿಕ ಸಮಿತಿಗೆ ಪತ್ರ ಬರೆದಿದ್ದಾರೆ. ನಕ್ಸಲ್ ನಾಯಕ ವಿಕ್ರಂ ಗೌಡನ ಎನ್​ಕೌಂಟರ್​​ನಿಂದ ಕಾಡಲ್ಲಿನ ಕೆಂಪು ಉಗ್ರರ ಸದ್ದಡಗಿದೆ.

Advertisment

ಬಹುತೇಕ ಕಾಫಿನಾಡಿನ ಕಾಡಲ್ಲಿ ನಕ್ಸಲರ ಯುಗಾಂತ್ಯವಾಗಿದೆ. ಮಾಜಿ ನಕ್ಸಲ್ ನೂರ್ ಜುಲ್ಫಿಕರ್ ಶ್ರೀಧರ್ ನೇತೃತ್ವದಲ್ಲಿ ಶರಣಾಗತಿಯಾಗಲಿದ್ದಾರೆ. ಶಾಂತಿಗಾಗಿ ನಾಗರೀಕ ವೇದಿಕೆಯ ಅಡಿಯಲ್ಲಿ ನಕ್ಸಲರು ಇಂದು ಚಿಕ್ಕಮಗಳೂರಿನ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಎಸ್ಪಿ ವಿಕ್ರಮ ಅಮಟೆ ಮುಂದೆ ಶರಣಾಗಲಿದ್ದಾರೆ. ಇನ್ನು ಇವರು ಕೆಲವು ಬೇಡಿಕೆಗಳನ್ನು ಸರ್ಕಾರದ ಮುಂದೆ ಇಟ್ಟಿದ್ದಾರೆ.

ಇದನ್ನೂ ಓದಿ:ಮಕ್ಕಳ ಪಾಲಿಗೆ ವೈರಿ ಆಗಿರುವ HMP ವೈರಸ್​.. ವೈದ್ಯರು, ತಜ್ಞರಿಂದ ಅಭಯ

ಸರ್ಕಾರಕ್ಕೆ ನಕ್ಸಲರ ಬೇಡಿಕೆಗಳು

  1. ಸಮಾಜದ ಮುಖ್ಯವಾಹಿನಿಗೆ ಬಂದ ನಕ್ಸಲರ ಆತ್ಮಗೌರವಕ್ಕೆ ಧಕ್ಕೆಯಾಗಬಾರದು
  2. ಪ್ರಜಾತಾಂತ್ರಿಕ ಹೋರಾಟಕ್ಕೆ ಯಾವುದೇ ತೊಡಕಾರಬಾರದು
  3. ಸಂಬಂಧ ಇಲ್ಲದಿದ್ದರೂ ಹೆಸರು ಇರೋ ಪ್ರಕರಣದಿಂದ ಕೈಬಿಡಬೇಕು
  4. ಬೇಗ ಜಾಮೀನಿನ ಬರಲು ಸಹಕರಿಸಬೇಕು
  5. ವಿಶೇಷ ನ್ಯಾಯಾಲಯದಲ್ಲಿ ಮೊಕದ್ದಮೆ ಇತ್ಯರ್ಥಕ್ಕೆ ಸಹಕರಿಸಬೇಕು
  6. ಕೌಶಲ ತರಬೇತಿಗೆ ಸಹಕಾರ ನೀಡಬೇಕು, ಕೊಟ್ಟ ಮಾತು ಉಳಿಸಿಕೊಳ್ಳಬೇಕು
  7. ಸರ್ಕಾರಗಳು ನಕ್ಸಲರ ಬಗ್ಗೆ ಅನುಕಂಪದಿಂದ ವರ್ತಿಸಬೇಕು
  8. ಈ ಹಿಂದೆ ಸಮಾಜದ ಮುಖ್ಯವಾಹಿನಿಗೆ ಬಂದಿರುವ ಎಲ್ಲಾ ನಕ್ಸಲರಿಗೂ ಮಾತು ಕೊಟ್ಟ ಸರ್ಕಾರ ಎಲ್ಲಾ ಸೌಲಭ್ಯಗಳನ್ನ ನೀಡಬೇಕು
  9. ಸಮಾಜದ ಮುಖ್ಯವಾಹಿನಿಗೆ ಬಂದ ನಂತರ ಗೌರವದಿಂದ ನೋಡಬೇಕು
  10. ಪ್ರಜಾತಾಂತ್ರಿಕ ವ್ಯವಸ್ಥೆಯ ಹೋರಾಟದಲ್ಲಿರುವಾಗ ಅನುಮಾನದಿಂದ ನೋಡುವಂತಾಗಬಾರದು

ಇದನ್ನೂ ಓದಿ:ಇಸ್ರೋದ ನೂತನ ಅಧ್ಯಕ್ಷರಾಗಿ ವಿ ನಾರಾಯಣನ್ ಆಯ್ಕೆ; ಯಾರು ಇವರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment