Advertisment

ಶರಣಾದ ನಕ್ಸಲರು ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ; ಬಚ್ಚಿಟ್ಟಿದ್ದು ಎಲ್ಲಿ?

author-image
Gopal Kulkarni
Updated On
ಶರಣಾದ ನಕ್ಸಲರು ಮುಚ್ಚಿಟ್ಟಿದ್ದ ಶಸ್ತ್ರಾಸ್ತ್ರಗಳು ಕೊನೆಗೂ ಪತ್ತೆ; ಬಚ್ಚಿಟ್ಟಿದ್ದು ಎಲ್ಲಿ?
Advertisment
  • ನಿನ್ನೆಯಷ್ಟೇ ಪೊಲೀಸರಿಗೆ 6 ಜನ ನಕ್ಸಲರರು ಶರಣಾಗತಿ ಹಿನ್ನೆಲೆ
  • ಜಯಪುರ ಸಮೀಪದ ಕಿತ್ತಲೆಗಂಡಿ ಕಾಡಿನಲ್ಲಿ ಗನ್​ಗಳು ಪತ್ತೆ
  • ಎಕೆ-47,303 ಗನ್​ಗಳು ಪತ್ತೆ, ಯಾರದು ಎಂಬುದು ಇನ್ನೂ ಸ್ಪಷ್ಟವಿಲ್ಲ

ಪಶ್ಚಿಮ ಘಟ್ಟಗಳಲ್ಲಿ ಎರಡು ದಶಕದಿಂದ ಬೇರೂರಿದ್ದ 6 ನಕ್ಸಲರು ಸರ್ಕಾರದ ಮುಂದೆ ಶರಣಾಗಿದ್ದಾರೆ. ಶರಣಾದ ಎಲ್ಲರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದಾರೆ. ಶರಣಾದ ಒಂದೇ ದಿನದಲ್ಲಿ ಮೂರು ಲಕ್ಷ ಪ್ಯಾಕೇಜ್ ಜಿಲ್ಲಾಧಿಕಾರಿ ಖಾತೆಗೆ ವರ್ಗಾವಣೆ ಆಗಿದೆ. ಮತ್ತೊಂದು ಕಡೆ ಎನ್​ಐಎ ತನಿಖೆಗೆ ಆಗ್ರಹಿಸಿ ಕೇಂದ್ರ ಗೃಹ ಇಲಾಖೆಗೆ ಬಿಜೆಪಿ ಮೊರೆ ಹೋಗುತ್ತಿದೆ.

Advertisment

ಶರಣಾಗತಿ ನಂತ್ರ ನ್ಯಾಯದ ಪ್ರಕ್ರಿಯೆ ಶುರುವಾಗಿದೆ. 6 ಜನ ನಕ್ಸಲರನ್ನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ನಂತರ ಎನ್‌ಐಎ ವಿಶೇಷ ಕೋರ್ಟ್​ಗೆ ಹಾಜರುಪಡಿಸಿದರು. ವಿಚಾರಣೆ ನಡೆಸಿದ ನ್ಯಾಯಾಧೀಶರು 6 ನಕ್ಸಲರಿಗೆ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದರು. ಒಟ್ಟು 14 ದಿನಗಳ ಕಾಲ ಅಂದ್ರೆ ಜನವರಿ 30ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ನ್ಯಾಯಾಂಗ ಬಂಧನ ಬೆನ್ನಲ್ಲೆ ನಕ್ಸಲರನ್ನು ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ.

ಇದನ್ನೂ ಓದಿ:ನಕ್ಸಲರಿಗೆ 14 ದಿನ ನ್ಯಾಯಾಂಗ ಬಂಧನ.. NIA ತನಿಖೆಗೆ ಆಗ್ರಹಿಸಿ ಕೇಂದ್ರಕ್ಕೆ ಬಿಜೆಪಿ ಮೊರೆ

ಇದೆಲ್ಲದರ ನಡುವೆ ಈಗ ನಕ್ಸಲರ ಗನ್​ಗಳು ಪತ್ತೆಯಾಗಿವೆ. ಕಿತ್ತಲೇಗಂಡಿ ಕಾಡಿನಲ್ಲಿ 5 ಗನ್​ಗಳು ಪತ್ತೆಯಾಗಿವೆ. ಎಕೆ 47, 303ಕೋವಿ, ಒಂದು ಪಿಸ್ತೂಲ್​ ಮತ್ತು 100ಕ್ಕೂ ಹೆಚ್ಚು ಗುಂಡುಗಳು ಜಯಪುರ ಸಮೀಪದ ಕಿತ್ತಲೆಗಂಡಿ ಕಾಡಿನಲ್ಲಿ ಪತ್ತೆಯಾಗಿವೆ. ಗನ್​ಗಳು ಯಾರದ್ದು ಎಂಬುದು ಸ್ಪಷ್ಟವಾಗಿಲ್ಲ. ಈ ಗನ್​ಗಳು ನಕ್ಸಲರದ್ದೇನಾ ಎಂಬುದು ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಜಯಪುರ ಠಾಣಾ ವ್ಯಾಪ್ತಿಯಲ್ಲಿ ಗನ್​ಗಳು ಪತ್ತೆಯಾಗಿವೆ. ಸದ್ಯ ಆಯುಧ ಆ್ಯಕ್ಟ್​ನ ಅಡಿಯಲ್ಲಿ ಅಪರಿಚತರು ಎಂದು ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment