ನಕ್ಸಲರು ಪಲಾಯನ.. ಮಲೆನಾಡಿನಲ್ಲಿ ಹೆಜ್ಜೆ ಗುರುತು.. ANF, ಪೊಲೀಸರಿಂದ ಕಾರ್ಯಾಚರಣೆ ಚುರುಕು

author-image
Bheemappa
Updated On
ನಕ್ಸಲರು ಪಲಾಯನ.. ಮಲೆನಾಡಿನಲ್ಲಿ ಹೆಜ್ಜೆ ಗುರುತು.. ANF, ಪೊಲೀಸರಿಂದ ಕಾರ್ಯಾಚರಣೆ ಚುರುಕು
Advertisment
  • ಮಲೆನಾಡಿನ ಯಾವ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಯುತ್ತಿದೆ?
  • ಕಾಡಿನ ರಸ್ತೆಗಳಲ್ಲಿ ಪ್ರತಿ ವಾಹನ ಚೆಕ್ ಮಾಡುತ್ತಿರುವ ಸಿಬ್ಬಂದಿ
  • ಕಾಫಿನಾಡಿನ ದಟ್ಟಕಾನನದಲ್ಲಿ ನಕ್ಸಲರು ಬಂದು ಸೇರುತ್ತಿದ್ದಾರಾ?

ಕಾಫಿನಾಡು, ಮಲೆನಾಡು ಭಾಗದಲ್ಲಿ ದಶಕಗಳಿಂದ ಇಲ್ಲದ ಕೆಂಪು ಉಗ್ರರ ಹೆಜ್ಜೆ ಗುರುತುಗಳ ಹಿಂದೆ ಹೊಸದೊಂದು ಸಂಗತಿ ಬಯಲಾಗಿದೆ. ಹಲವು ವರ್ಷಗಳಿಂದ ಕೇರಳದ ಕಾಡಿನಲ್ಲಿದ್ದ ನಾನಾ ರಾಜ್ಯದ ನಕ್ಸಲರು ತಮ್ಮ-ತಮ್ಮ ರಾಜ್ಯಗಳಿಗೆ ಪಲಾಯನ ಮಾಡಿದ್ದಾರೆ. ಕೇರಳದಲ್ಲಿ ನಕ್ಸಲರ ಎನ್ ಕೌಂಟರ್ ಹಾಗೂ ಶರಣಾಗತಿ ಬಳಿಕ ಸರ್ವೈವ್ ಆಗೋದು ಕಷ್ಟ ಎಂದು ಎಲ್ಲರೂ ತಮ್ಮ ರಾಜ್ಯಗಳತ್ತ ಹೊರಟಿದ್ದಾರೆ ಎಂಬ ಅಂಶವೊಂದು ಉನ್ನತ ಮೂಲಗಳಿಂದ ಲಭ್ಯವಾಗಿದೆ.

ದಶಕಗಳಿಂದ ಕಾಫಿನಾಡ ದಟ್ಟಕಾನನದಲ್ಲಿ ನಕ್ಸಲರ ಸದ್ದು ಅಡಗಿತ್ತು. ಇದೀಗ ಮತ್ತೆ ಅದು ಕೇಳ ತೊಡಗಿದೆ. ಕಾರಣ, ಕೇರಳದ ಕಾಡುಗಳನ್ನ ಅಡಗುತಾಣ ಮಾಡ್ಕೊಂಡಿದ್ದ ನಕ್ಸಲರು ರಾಜ್ಯಗಳತ್ತ ಮುಖ ಮಾಡಿದ್ದಾರಂತೆ. ಕೇರಳದಲ್ಲಿ ನಕ್ಸಲರ ಎನ್​ಕೌಂಟರ್ ಹಾಗೂ ಶರಣಾಗತಿ ಬಳಿಕ ತಮ್ಮ ಶಕ್ತಿ-ಸಾಮರ್ಥ್ಯ ಕುಂದಿದ್ದು, ಕಾಫಿನಾಡ ಕಾಡುಗಳತ್ತ ಹೊರಳಿದ್ದಾರೆ.

ಇದನ್ನೂ ಓದಿ: ಅಯ್ಯಪ್ಪನ ಭಕ್ತರಿಗೆ KSRTC ಗುಡ್​ನ್ಯೂಸ್; ಶಬರಿಮಲೆಗೆ ಹೋಗಲು ವಿಶೇಷ ವ್ಯವಸ್ಥೆ..!

publive-image

ರಾಜ್ಯದಲ್ಲಿ ಮತ್ತೆ ಕೆಂಪು ಉಗ್ರರ ಹೆಜ್ಜೆ ಗುರುತು!

ಕಾಡಂಚಿನ ಕುಗ್ರಾಮಗಳಿಗೆ ಭೇಟಿ ನೀಡಿ ಎಸ್ಕೇಪ್ ಆಗಿದ್ದ ನಕ್ಸಲರಿಗಾಗಿ ಇದೀಗ ಪೊಲೀಸ್ ಹಾಗೂ ನಕ್ಸಲ್‌ ನಿಗ್ರಹ ಪಡೆ (ANF) ಸಿಬ್ಬಂದಿ ಕೂಂಬಿಂಗ್ ಚುರುಕುಗೊಳಿಸಿದೆ. ಕಾಡಂಚಿನ ಗಡಿ ಗ್ರಾಮ‌ ಹಾಗೂ ಕೂಂಬಿಂಗ್ ಅಂತರ್ ಜಿಲ್ಲಾ ಗಡಿಯಲ್ಲಿ ವಾಹನ ತಪಾಸಣೆ ಹೆಚ್ಚಿದೆ. ಶೃಂಗೇರಿ, ಕೊಪ್ಪ, ಮೂಡಿಗೆರೆ ತಾಲೂಕು ಹಾಗೂ ಚಾರ್ಮಾಡಿ ಘಾಟಿ ಸುತ್ತಮುತ್ತ ತೀವ್ರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಮಾರ್ಗದಲ್ಲಿ ಓಡಾಡುವ ಪ್ರತಿಯೊಂದು ವಾಹನಗಳನ್ನೂ ಚೆಕ್ ಮಾಡಿ ಬಿಡಲಾಗುತ್ತಿದೆ.

ಕಾಫಿನಾಡಲ್ಲಿ ಮುಂಡಗಾರು ಲತಾ ವಿರುದ್ಧ ಇದೆ 38 ಕೇಸ್

ಮೋಸ್ಟ್ ವಾಂಟೆಂಡ್ ನಕ್ಸಲರಾದ ವಿಕ್ರಂ ಗೌಡ ಹಾಗೂ ಮುಂಡಗಾರು ಲತಾ ಸೇರಿದಂತೆ ಜಯಣ್ಣ ಹಾಗೂ ವನಜಾಕ್ಷಿ ಕಾಫಿನಾಡಿನತ್ತ ಮುಖ ಮಾಡಿದ್ದಾರೆ ಎಂದು ಹೇಳಲಾಗಿದೆ. ಇವ್ರು ಮಲೆನಾಡಿಗರನ್ನ ಸೆಳೆಯೋಕೆ ಪ್ರಯತ್ನಿಸ್ತಿರೋ ಅನುಮಾನ ಇದೆ. ಮುಂಡಾಗರು ಲತಾ ಮೇಲೆ ಚಿಕ್ಕಮಗಳೂರು ಜಿಲ್ಲೆಯಲ್ಲಿ 38 ಕೇಸ್​ಗಳಿವೆ. ಶೃಂಗೇರಿ, ಜಯಪುರ ಹಾಗೂ ಆಲ್ದೂರು ಠಾಣೆಯಲ್ಲಿ ಪ್ರಕರಣಗಳಿದ್ರೆ. ಜಯಣ್ಣನದ್ದು ಎರಡು ಪ್ರಕರಣಗಳಿವೆ. ಹಾಗಾಗಿ, ಮಲೆನಾಡ ಕುಗ್ರಾಮಕ್ಕೆ ಬಂದು ನಾಪತ್ತೆಯಾಗಿರೋ ಲತಾ ಹಾಗೂ ಜಯಣ್ಣನಿಗಾಗಿ ತೀವ್ರ ತನಿಖೆ ಶುರು ಆಗಿದೆ.

ಇದನ್ನೂ ಓದಿ:ಫ್ಯಾನ್ಸ್​ಗೆ ಗುಡ್​ನ್ಯೂಸ್​ ಕೊಟ್ಟ ರಾಮಾಚಾರಿ ಸೀರಿಯಲ್​ ನಟಿ ಮೌನ ಗುಡ್ಡೆಮನೆ; ಏನದು?

publive-image

ನಕ್ಸಲರ ಉದ್ದೇಶ ಏನಿದೆ ಅನ್ನೋದು ಮಾತ್ರ ನಿಗೂಢ

ನಕ್ಸಲರ ಉದ್ದೇಶ ಏನಿದೆ ಅನ್ನೋದು ಮಾತ್ರ ನಿಗೂಢ. ಅವರು ನಿಜಕ್ಕೂ ವಾಪಸ್ ಬಂದಿದ್ದಾರೋ ಅಥವಾ ತಮ್ಮ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳಲು ಮಲೆನಾಡಿಗರನ್ನ ಸೆಳೆಯಲು ಬಂದಿದ್ದಾರೋ ಗೊತ್ತಿಲ್ಲ. ಆದರೆ, ಕಾಫಿನಾಡ ಪೊಲೀಸರು ಮಾತ್ರ ನಕ್ಸಲರ ಹೆಜ್ಜೆ ಹಿಂದೆ ಬಿದ್ದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment