Advertisment

ಬೆಳಗ್ಗೆ ಬೇಟೆ, ಮಧ್ಯಾಹ್ನ ಪ್ರತೀಕಾರ.. ನಕ್ಸಲರಿಂದ ಸೇನಾ ವಾಹನ ಛಿದ್ರ, ಛಿದ್ರ; 9 ಯೋಧರು ಹುತಾತ್ಮ!

author-image
admin
Updated On
ಬೆಳಗ್ಗೆ ಬೇಟೆ, ಮಧ್ಯಾಹ್ನ ಪ್ರತೀಕಾರ.. ನಕ್ಸಲರಿಂದ ಸೇನಾ ವಾಹನ ಛಿದ್ರ, ಛಿದ್ರ; 9 ಯೋಧರು ಹುತಾತ್ಮ!
Advertisment
  • ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರತೀಕಾರ
  • ಬಿಜಾಪುರ್ ಜಿಲ್ಲೆ ಬೇದ್ರೆ-ಕುತ್ರು ರಸ್ತೆಯಲ್ಲಿ ಪ್ರಬಲ ಐಇಡಿ ಬ್ಲಾಸ್ಟ್
  • ಸೇನಾ ವಾಹನದಲ್ಲಿದ್ದ ಡ್ರೈವರ್​ ಸೇರಿ 9 ಯೋಧರು ಹುತಾತ್ಮ

ನಕ್ಸಲ್ ಹಾಗೂ ಸೈನಿಕರ ಸಂಘರ್ಷ ತಣ್ಣಗಾಯ್ತು ಎನ್ನುವಷ್ಟರಲ್ಲೇ ಛತ್ತೀಸ್‌ಗಢದಲ್ಲಿ ಮತ್ತೊಂದು ವಿಧ್ವಂಸಕ ಕೃತ್ಯ ನಡೆದಿದೆ. ಇತ್ತೀಚೆಗೆ ನಕ್ಸಲರ ವಿರುದ್ಧ ನಡೆದ ಕಾರ್ಯಾಚರಣೆಗೆ ಅತಿ ದೊಡ್ಡ ಪ್ರತೀಕಾರ ತೀರಿಸಿಕೊಳ್ಳಲಾಗಿದೆ.

Advertisment

ಇದನ್ನೂ ಓದಿ: ‘ಓಕೆ‘ ಎಂದ ಸ್ಟೇಷನ್ ಮಾಸ್ಟರ್​, ನಕ್ಸಲ್​ ಬಾಹುಳ್ಯ ಪ್ರದೇಶದಲ್ಲಿ ನಿಂತ ರೈಲು! ಇಲಾಖೆಗೆ 3 ಕೋಟಿ ರೂಪಾಯಿ ಲಾಸ್​! ಆಗಿದ್ದೇನು? 

ಬಿಜಾಪುರ್ ಜಿಲ್ಲೆ ಬೇದ್ರೆ-ಕುತ್ರು ರಸ್ತೆಯಲ್ಲಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ. ಯೋಧರ ವಾಹನವನ್ನೇ ಟಾರ್ಗೆಟ್​​ ಮಾಡಿ ಸ್ಫೋಟ ಸಂಭವಿಸಿದ್ದು, ಸೇನಾ ವಾಹನ ಸಂಪೂರ್ಣ ಛಿದ್ರ, ಛಿದ್ರವಾಗಿದೆ. ಪ್ರಬಲ IED ಬ್ಲಾಸ್ಟ್ ಆಗಿದ್ದರಿಂದ ಭೂಮಿಯೇ ಬಾಯ್ಬಿಟ್ಟಿದೆ. ಸೇನಾ ವಾಹನದಲ್ಲಿದ್ದ ಡ್ರೈವರ್​ ಸೇರಿ 9 ಯೋಧರು ಹುತಾತ್ಮರಾಗಿದ್ದಾರೆ.

publive-image

ಸೈನಿಕರು ಇಂದು ಬೆಳಗ್ಗೆಯಷ್ಟೇ ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಇಬ್ಬರು ಮಹಿಳೆಯರು ಸೇರಿ ಐವರನ್ನ ಬಲಿ ಪಡೆದಿದ್ದರು. ನಕ್ಸಲ್ ಆಪರೇಷನ್ ಮುಗಿಸಿ ವಾಪಸ್ ಆಗುತ್ತಿದ್ದಾಗ ಮಧ್ಯಾಹ್ನ 2.15ಕ್ಕೆ ಸೇನಾ ವಾಹನವನ್ನೇ ಗುರಿಯಾಗಿಸಿ ಐಇಡಿ ಬ್ಲಾಸ್ಟ್ ಮಾಡಲಾಗಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment