Advertisment

ಒಂದೇ ವೇದಿಕೆಯಲ್ಲಿ ಧನುಷ್, ನಯನತಾರಾ.. ಮುನಿಸು ಮರೆತು ಮಾತಾಡಿಯೇ ಬಿಟ್ರಾ..?

author-image
Bheemappa
Updated On
ಒಂದೇ ವೇದಿಕೆಯಲ್ಲಿ ಧನುಷ್, ನಯನತಾರಾ.. ಮುನಿಸು ಮರೆತು ಮಾತಾಡಿಯೇ ಬಿಟ್ರಾ..?
Advertisment
  • ಧನುಷ್, ನಯನತಾರಾ ನಡುವೆ ಘರ್ಷಣೆ ಏರ್ಪಟ್ಟಿದ್ದು ಯಾಕೆ..?
  • ವಿವಾಹ ಸಮಾರಂಭದಲ್ಲಿ ಕೆಲ ನಟ, ನಟಿಯರು ಭಾಗಿಯಾಗಿದ್ದರು
  • ಪಕ್ಕ-ಪಕ್ಕದ ಸೋಫಾದಲ್ಲಿ ಕುಳಿತರೂ ಮುಖ ನೋಡಿಕೊಂಡ್ರಾ..?

ಬಹುಭಾಷಾ ನಟಿ ಹಾಗೂ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಯನತಾರಾ ಹಾಗೂ ನಟ ಧನುಷ್ ಮಧ್ಯೆ ಫೈಟ್ ಶುರುವಾಗಿದೆ. ನಾನುಂ ರೌಡಿ ದಾನ ಸಿನಿಮಾದ ತೆರೆ ಹಿಂದಿನ ದೃಶ್ಯ ಬಳಕೆಗೆ ಸಂಬಂಧಿಸಿದಂತೆ ಇಬ್ಬರ ನಡುವೆ ಘರ್ಷಣೆ ನಡೆದಿದೆ. ಧನುಷ್ ವಿರುದ್ಧ ಬಹಿರಂಗ ಪತ್ರ ಬರೆದು ನಟಿ ವಾಗ್ದಾಳಿ ನಡೆಸಿದ್ದರು. ಈ ಎಲ್ಲದರ ನಡುವೆ ಮದುವೆ ಸಮಾರಂಭದಲ್ಲಿ ಇಬ್ಬರು ಕಾಣಿಸಿಕೊಂಡಿದ್ದು ಪಕ್ಕ ಪಕ್ಕದಲ್ಲೇ ಕುಳಿತರು ಒಬ್ಬರ ಮುಖ ಒಬ್ಬರು ನೋಡಿಕೊಂಡಿಲ್ಲ.

Advertisment

publive-image

ತಮಿಳು ಸ್ಟಾರ್ ನಟ ಧನುಷ್ ಹಾಗೂ ನಯನತಾರಾ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇಬ್ಬರು ಪಕ್ಕ ಪಕ್ಕದ ಸೋಫಾದಲ್ಲಿ ಕುಳಿತ್ತಿದ್ದರು. ಆದರೆ ಇಬ್ಬರು ಬೇರೆ ಬೇರೆ ಕಡೆ ನೋಡುತ್ತಿದ್ದರೇ ವಿನಃ ಒಬ್ಬರ ಮುಖ ಒಬ್ಬರು ನೋಡಿಕೊಂಡಿಲ್ಲ. ಯಾರು ಎಂದು ತಿರುಗಿ ಕೂಡ ನೋಡಲಿಲ್ಲ. ಸದ್ಯ ಈ ಸಂಬಂಧದ ವಿಡಿಯೋಗಳು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದು ನೆಟ್ಟಿಗರು ಕಾಮೆಂಟ್ಸ್​ ಮೇಲೆ ಕಾಮೆಂಟ್ಸ್​ ಮಾಡುತ್ತಿದ್ದಾರೆ.

publive-image

ನಟ ಧನುಷ್ ಹಾಗೂ ಲೇಡಿ ಸೂಪರ್​ ಸ್ಟಾರ್ ನಯನತಾರಾ ನಡುವೆ ಇತ್ತೀಚಿಗಷ್ಟೇ ಮನಸ್ತಾಪ ಸುರುವಾಗಿದೆ. ಕೇವಲ 3 ಸೆಕೆಂಡ್ ವಿಡಿಯೋಗಾಗಿ ಧನುಷ್​ 10 ಕೋಟಿ ರೂಪಾಯಿ ಕೇಳಿದರು ಎಂದು ನಯನತಾರಾ ಆರೋಪಿಸಿದ್ದಾರೆ. ಜೊತೆಗೆ ಪುಟಗಟ್ಟಲೇ ಪತ್ರ ಬರೆದು ನಟ ಧನುಷ್ ಮೇಲಿನ ಕೋಪವನ್ನೂ ನಯನತಾರಾ ಹೊರಹಾಕಿದ್ದರು.

ಇದನ್ನೂ ಓದಿ: ಧನುಷ್ ವಿರುದ್ಧ ತಿರುಗಿಬಿದ್ದ ಲೇಡಿ ಸೂಪರ್ ಸ್ಟಾರ್‌.. ನಯನತಾರಾ ಬಹಿರಂಗ ಸವಾಲು; ಕಾರಣವೇನು?

Advertisment

ಸದ್ಯ ವಿವಾದದ ಬಳಿಕ ಒಂದೇ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ನಟ ಧನುಷ್ ಮುಖಾಮುಖಿ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಧನುಷ್ ಹಾಗೂ ನಯನತಾರಾ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ನಯನತಾರಾ ಹಾಗೂ ಧನುಷ್​ ಅಕ್ಕಪಕ್ಕದ ಸೀಟ್​ನಲ್ಲಿ ಕುಳಿತರೂ ಇಬ್ಬರೂ ಮಾತನಾಡಿಲ್ಲ.

publive-image

ಇನ್ನು ಈ ವಿವಾಹ ಸಮಾರಂಭದಲ್ಲಿ ಧನುಷ್, ನಯನತಾರಾ, ಶಿವಕಾರ್ತಿಕೇಯನ್, ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದ್ರನ್ ಸೇರಿದಂತೆ ಹಲವು ಸಿನಿಮಾ ನಟ, ನಟಿಯರು, ರಾಜಕೀಯ ಗಣ್ಯರು ಭಾಗಿಯಾಗಿದ್ದರು. ಆದರೆ ಧನುಷ್, ನಯನತಾರಾ ವಿಡಿಯೋ, ಫೋಟೋಸ್ ವೈರಲ್ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment