newsfirstkannada.com

ಆರೋಪಗಳ ಬಗ್ಗೆ ಮೌನ ಮುರಿದ ‘ಅನ್ನಪೂರ್ಣಿ’; ಕ್ಷಮೆ ಕೇಳಿದ ನಯನಾತಾರ

Share :

Published January 19, 2024 at 11:30am

    ವಿವಾದದ ಸುಳಿಗೆ ಸಿಲುಕಿರುವ ಅನ್ನಪೂರ್ಣಿ ಚಿತ್ರ

    ನಯನಾತಾರ ವಿರುದ್ಧ ಹಿಂದೂಗಳು ಆಕ್ರೋಶ

    ಸೋಶಿಯಲ್ ಮೀಡಿಯಾ ಮೂಲಕ ಕ್ಷಮೆ ಕೋರಿದ್ದಾರೆ

ಅನ್ನಪೂರ್ಣಿ ಚಿತ್ರವನ್ನು ಓಟಿಟಿಯಿಂದ ಡಿಲೀಟ್ ಮಾಡಿರುವ ಬಗ್ಗೆ ಬೇಸರ ವ್ಯಕ್ತಪಡಿಸಿರುವ ನಟಿ ನಯನತಾರ ಕ್ಷಮೆ ಕೇಳಿದ್ದಾರೆ. ವರ್ಷಪೂರ್ತಿ ದೇವರು, ದೇವಾಲಯಗಳನ್ನು ಸುತ್ತುವ ನಾನು ಉದ್ದೇಶಪೂರ್ವಕವಾಗಿ ಯಾರ ಭಾವನೆಗಳಿಗೂ ನೋವುಂಟು ಮಾಡಲ್ಲ. ಸಮಾಜಕ್ಕೆ ಸ್ಫೂರ್ತಿದಾಯಕ ಸಿನಿಮಾ ಕೊಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ. ಈ ಚಿತ್ರದಿಂದ ಯಾರಿಗಾದಾರೂ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ ಎಂದು ಪೋಸ್ಟ್ ಹಾಕಿದ್ದಾರೆ.

ಏನಿದ ವಿವಾದ..?

ಅನ್ನಪೂರ್ಣಿ ಚಿತ್ರದ ಮೂಲಕ ನಟಿ ನಯನಾತಾರ ಹಿಂದೂಗಳ ಭಾವನೆಗಳಿಗೆ ದಕ್ಕೆ ಉಂಟುಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ನಟಿಯ ವಿರುದ್ಧ ಹಿಂದೂ ಮುಖಂಡರು ದೂರು ದಾಖಲಿಸಿದ್ದಾರೆ. ಶ್ರೀರಾಮನನ್ನು ಮಾಂಸಹಾರಿ ಎಂದು ಕರೆಯಲಾಗಿದೆ. ಲವ್ ಜಿಹಾದ್​ಗೆ ಸಿನಿಮಾದಲ್ಲಿ ಪ್ರೋತ್ಸಾಹ ನೀಡಲಾಗಿದೆ ಎಂಬ ಆರೋಪ ಸಿನಿಮಾದ ಮೇಲಿದೆ.

ಚಿತ್ರದ ಕತೆಯಲ್ಲಿ ನಯನಾತಾರ ಅನ್ನಪೂರ್ಣಿ ಎಂಬ ಪಾತ್ರವನ್ನು ಮಾಡಿದ್ದಾರೆ. ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ್ದ ಅನ್ನಪೂರ್ಣಿ, ಅಡುಗೆ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುತ್ತಾಳೆ. ಕುಟುಂಬದವರ ವಿರೋಧದ ಮಧ್ಯೆಯೂ ಅನ್ನಪೂರ್ಣಿ ಮಾಂಸಹಾರಿ ಅಡುಗೆ ಮಾಡಲು ನಿರ್ಧರಿಸುತ್ತಾಳೆ. ಈ ಸಂದರ್ಭದಲ್ಲಿ ಮುಸ್ಲಿಂ ಕುಟುಂಬದ ಸ್ನೇಹಿತನ ಪರಿಚಯ ಆಗುತ್ತದೆ. ಇಬ್ಬರ ಸಂಭಾಷಣೆ ವೇಳೆ ರಾಮನೂ ಮಾಂಸಹಾರಿ ಎಂದು ಮುಸ್ಲಿಂ ಸ್ನೇಹಿತ ಆಕೆಗೆ ಹೇಳುತ್ತಾನೆ. ಆತನ ಸ್ನೇಹಕ್ಕೆ ಒಳಗಾದ ಅನ್ನಪೂರ್ಣಿ ಬಿರಿಯಾನಿ ತಯಾರಿಸುವ ವೇಳೆ ಹಿಜಾಬ್ ಧರಿಸುತ್ತಾಳೆ.

View this post on Instagram

A post shared by N A Y A N T H A R A (@nayanthara)

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರೋಪಗಳ ಬಗ್ಗೆ ಮೌನ ಮುರಿದ ‘ಅನ್ನಪೂರ್ಣಿ’; ಕ್ಷಮೆ ಕೇಳಿದ ನಯನಾತಾರ

https://newsfirstlive.com/wp-content/uploads/2024/01/NAYANATARA.jpg

Load More