ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!

author-image
Bheemappa
Updated On
ಶಾಕಿಂಗ್ ವಿಚಾರ ಹಂಚಿಕೊಂಡ ನಯನತಾರಾ; ಅಭಿಮಾನಿಗಳಿಗೆ ಕೈಮುಗಿದು ವಿನಂತಿಸಿದ ನಟಿ..!
Advertisment
  • ಫ್ಯಾನ್ಸ್‌ಗೆ ನಯನತಾರಾ ಮನವಿ ಮಾಡಿರುವುದು ಏನು?
  • ಇನ್ಮುಂದೆ ನನ್ನನ್ನು ಆ ರೀತಿ ಕರೆಯಬೇಡಿ- ನಯನತಾರಾ
  • ಲೇಡಿ ಸೂಪರ್ ಸ್ಟಾರ್ ಬರೆದಿರುವ ಪತ್ರದಲ್ಲಿ ಏನೇನಿದೆ?

ಸಿನಿಮಾ ಹೀರೋ, ಹೀರೋಯಿನ್​ಗಳಿಗೆ ಅಭಿಮಾನಿಗಳು ಬಿರುದು ನೀಡಿ ಕರೆಯುವುದು ಎಲ್ಲ ಇಂಡಸ್ಟ್ರಿಯಲ್ಲೂ ಸಾಮಾನ್ಯವಾಗಿದೆ. ಪವರ್​ ಸ್ಟಾರ್, ಮೆಗಾಸ್ಟಾರ್, ರಾಕಿಂಗ್ ಸ್ಟಾರ್, ಕಿಚ್ಚ, ಚಾಲೆಂಜಿಂಗ್ ಸ್ಟಾರ್, ಲೇಡಿ ಸೂಪರ್ ಸ್ಟಾರ್, ಸ್ಯಾಂಡಲ್​ವುಡ್​ ಕ್ವೀನ್ ಹೀಗೆ ನಟ, ನಟಿಯರಿಗೆ ಕರೆಯಲಾಗುತ್ತದೆ. ಆದರೆ ಈಗ ಬಹುಭಾಷಾ ನಟಿ ನಯನತಾರಾ ಮಾತ್ರ ಲೇಡಿ ಸೂಪರ್ ಸ್ಟಾರ್ ಅಂತ ಕರೆಯಬೇಡಿ ಎಂದಿದ್ದಾರೆ.

publive-image

ನಯನತಾರಾ ಬಹುಭಾಷಾ ನಟಿ. ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಮೂವಿಗಳಲ್ಲೂ ನಟನೆ ಮಾಡಿ ಖ್ಯಾತಿ ಪಡೆದಿದ್ದಾರೆ. ಈ ಬ್ಯೂಟಿಫುಲ್ ಹೀರೋಯಿನ್ ಯಾವುದೇ ಸಿನಿಮಾದಲ್ಲಿ ಅಭಿನಯ ಮಾಡಿದರೆ ಆ ಪಾತ್ರಕ್ಕೆ ನೂರಕ್ಕೆ 100 ರಷ್ಟು ಶ್ರಮ ವಹಿಸುತ್ತಾರೆ. ಹೀಗಾಗಿಯೇ ಇವರಿಗೆ ಪ್ರೀತಿಯಿಂದ ಎಲ್ಲರೂ ಲೇಡಿ ಸೂಪರ್ ಸ್ಟಾರ್ ನಯನತಾರಾ ಎಂದು ಕರೆಯಲಾಗ್ತಿತ್ತು. ಆದ್ರೆ ಈಗ ಹಾಗೇ ಕರೆಯಬೇಡಿ ಅಂತ ಸ್ವತಹ ನಯನತಾರಾ ಅವರೇ ಹೇಳಿದ್ದಾರೆ.

ಈ ಸಂಬಂಧ ತಮ್ಮ ಎಕ್ಸ್​ನ ಪೋಸ್ಟ್​ನಲ್ಲಿ ಪತ್ರವನ್ನು ಶೇರ್ ಮಾಡಿರುವ ನಯನತಾರಾ ಅವರು, ನನ್ನ ಪ್ರೀತಿಯ ಅಭಿಮಾನಿಗಳೇ ನನ್ನ ಯಶಸ್ಸಿನ ಹಿಂದೆ ನೀವು ಇದ್ದೀರಿ. ನಟಿಯಾಗಿ ಮಾತ್ರವಲ್ಲ, ವ್ಯಕ್ತಿಯಾಗಿಯೂ ನಯನತಾರ ಎಂಬುದು ನನ್ನ ಹೃದಯಕ್ಕೆ ಹತ್ತಿರವಾಗಿರುವ ಹೆಸರು. ನೀವು ಪ್ರೀತಿಯಿಂದ ನೀಡಿರುವ ಲೇಡಿ ಸೂಪರ್ ಸ್ಟಾರ್ ಎನ್ನುವ ಬಿರುದು ನನಗೆ ಕಿರೀಟದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಉಡುಪಿ ಬ್ರಹ್ಮಕಲಶೋತ್ಸವದಲ್ಲಿ ಸೂರ್ಯ, ಕಂಗನಾ, ಪೂಜಾ ಹೆಗ್ಡೆ ಸೇರಿ ಸೆಲೆಬ್ರಿಟಿಗಳು.. ಯಾರು ಯಾರು ಬಂದಿದ್ರು?

publive-image

ಕಷ್ಟದ ಸಮಯದಲ್ಲಿ ಜೊತೆ ನಿಂತಿದ್ದೀರಾ. ನಿಮ್ಮಲ್ಲಿ ಹಲವರು ನನ್ನನ್ನು ಲೇಡಿ ಸೂಪರ್‌ಸ್ಟಾರ್ ಎಂದು ಪ್ರೀತಿಯಿಂದ ಕರೆಯುತ್ತೀರಿ. ಅದು ಅಪಾರ ಪ್ರೀತಿಯಿಂದ ಹುಟ್ಟಿದ ಬಿರುದು. ಅಂತಹ ಅಮೂಲ್ಯವಾದ ಬಿರುದು ನೀಡಿದ್ದಕ್ಕಾಗಿ ನಿಮ್ಮೆಲ್ಲರಿಗೂ ಋಣಿ. ನನಗೆ ಬೆಲೆ ಕಟ್ಟಲಾಗದ ಬಿರುದು ನೀವು ನೀಡಿದ್ದೀರಿ. ಆದರೆ ಬಿರುದು ಅಂತರವನ್ನು ಸೃಷ್ಟಿಸುತ್ತಿರುವುದು ಇಷ್ಟವಾಗುತ್ತಿಲ್ಲ. ಹೀಗಾಗಿಯೇ ಎಲ್ಲರೂ ನನ್ನನ್ನು ಇನ್ಮುಂದೆ ನಯನತಾರಾ ಎಂದೇ ಕರೆದರೆ ನನಗೆ ಸಂತೋಷ ಎಂದು ಹೇಳಿದ್ದಾರೆ.


">March 4, 2025

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment